ಗುರುವಾರ , ಮೇ 26, 2022
30 °C

ಶೋಷಿತರಿಗೆ ದನಿಯಾಗಿದ್ದವರು ಬಸವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಶೋಷಿತರಿಗೆ ದನಿಯಾಗಿದ್ದ ಬಸವಣ್ಣವರು ಜಾತ್ಯತೀತ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದ್ದರು~ ಎಂದು ರಾಜ್ಯ ಕೃಷಿ ಮಾರಾಟ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಸೋಮಶೇಖರ್ ಹೇಳಿದರು.ನಗರದ ನಟರಾಜ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶರಣ ಮಂಡಲಿ ಭಾನುವಾರ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.`ಸ್ವಾತಂತ್ರ, ಸ್ವಾಭಿಮಾನದ ಕಡೆಗೆ ಬಸವಣ್ಣನವರ ಧರ್ಮ ಕರೆದೊಯ್ತು. ಕಾಯಕವೇ ಕೈಲಾಸ. ಕಾಯಕ-ಕಾಯಕಗಳ ನಡುವೆ ಸಮನ್ವಯ ಇರಬೇಕು ಎಂಬುದನ್ನು ಬಸವಣ್ಣ ಪ್ರತಿಪಾದಿಸಿದರು. ಶರಣ ಧರ್ಮ ಸ್ಥಿತಪ್ರಜ್ಞ, ಸಂಯಮದಿಂದ ಕೂಡಿದೆ. ಬಸವ ಧರ್ಮಕ್ಕೆ ಸೇರಿದವರು ಎಂದು ಹೇಳಿಕೊಳ್ಳಲು ಯಾರೂ ಸಂಕೋಚ ಪಡಬೇಕಾದ ಅಗತ್ಯ ಇಲ್ಲ~ ಎಂದು ಹೇಳಿದರು.`ಅಂಬೇಡ್ಕರ್ ದೇಶಕ್ಕೆ ಸಂವಿಧಾನ ಕೊಟ್ಟರೆ, ಬಸವಣ್ಣನವರು ಜೀವನ ಸಂವಿಧಾನವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ದಯೆ ಇರಬೇಕು ಸಕಲ ಜೀವಚರಗಳ ಬಗ್ಗೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಸಮಾಜದಲ್ಲಿ ಯಾರೂ ಮೇಲು-ಕೀಳು ಅಲ್ಲ. ಎಲ್ಲರು ಸರಿಸಮಾನರು ಎಂಬುದನ್ನು ಪ್ರತಿಪಾದಿಸಿದ್ದಾರೆ.ಬಸವಣ್ಣನ ತತ್ವ-ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು~ ಎಂದು ಕರೆ ನೀಡಿದರು.ಮಾಜಿ ಮೇಯರ್ ವಾಸು ಮಾತನಾಡಿ, `ಪ್ರಶಸ್ತಿಗಳನ್ನು ಪಡೆಯಬೇಕಿದ್ದರೆ ಅರ್ಜಿಗಳನ್ನು ಹಾಕುವ ಅನಿವಾರ್ಯತೆ ಸಮಾಜದಲ್ಲಿ ಇದೆ. ಆದರೆ ಬಸವ ಮಂಡಳಿಯು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ~ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಹೊಸಮಠದ ಚಿದಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಎಚ್.ಎಸ್.ಮಹದೇವ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.

 

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ, ಶರಣ ಮಂಡಲಿಯ ವಿ.ಎಸ್.ವಿರೂಪಾಕ್ಷಶೆಟ್ಟಿ, ಎಂ.ಬಿ.ವೀರಭದ್ರಪ್ಪ, ಪಿ.ಶಿವಶಂಕರ್, ಚಂದ್ರಮೌಳಿ ಉಪಸ್ಥಿತರಿದ್ದರು. ಮಂಡಲಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ ಪ್ರಾಸ್ತಾವಿಕ ಭಾಷಣ ಮಾಡಿದರು.ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಎ.ಎಸ್.ಸದಾಶಿವಯ್ಯ, ಸಿ.ಸೋಮೇಖರ್, ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥಾಪಕ ಡಾ.ಆರ್.ಬಾಲಸುಬ್ರಹ್ಮಣ್ಯಂ, ರಂಗಭೂಮಿ ಹಿರಿಯ ಕಲಾವಿದ ಬಸವರಾಜು, ಮಂಡಳಿ ಕಾರ್ಯದರ್ಶಿ ಎಸ್.ಶಿವಮೂರ್ತಿ ಕಾನ್ಯ ಅವರಿಗೆ `ಬಸವ~ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.