ಮಂಗಳವಾರ, ಮೇ 17, 2022
24 °C

ಶೌಚಾಲಯದವಾದ ಪಶು ಆಸ್ಪತ್ರೆ

ಬಿ.ಎ. ನಂದಿಕೋಲಮಠ/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆ ನೀಡುವ ಉದ್ದೇಶದಿಂದ ತಾಲ್ಲೂಕು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪಶು ಆಸ್ಪತ್ರೆಗಳನ್ನು ತೆರೆಯಲಾಗಿದೆ. ತಾಲ್ಲೂಕು ಕೇಂದ್ರದ ಸಹಾಯಕ ನಿರ್ದೇಶಕರ ಕಚೇರಿಯ ಆವರಣಕ್ಕೆ ಒಂದು ಬಾರಿ ಭೇಟಿ ನೀಡಿದರೆ ಸಾಕು, ಇದು ಪಶು ಆಸ್ಪತ್ರೆಯೊ? ಅಥವಾ ಸಾಮೂಹಿಕ ಶೌಚಾಲಯೊ? ಎಂಬುದು ಪ್ರಶ್ನೆಯಾಗಿ ಕಾಡುತ್ತದೆ.ಪಟ್ಟಣದ ಹೃದಯ ಭಾಗದ ಪುರಸಭೆ ಆಡಳಿತ ಕಚೇರಿಯಿಂದ ಅನತಿ ದೂರದಲ್ಲಿರುವ ಪಶು ಸಂಗೋಪನಾ ಇಲಾಖೆ ತಾಲ್ಲೂಕು ಕಚೇರಿ ಆವರಣವನ್ನು ಹತ್ತಾರು ವರ್ಷಗಳಿಂದ ಶೌಚಾಲಯವಾಗಿವೆ ಬಳಸಲಾಗುತ್ತಿದೆ. ಮಲಮೂತ್ರ ವಿಸರ್ಜನೆ ಮಾಡದಂತೆ ತಡೆಯಲು ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಕಷ್ಟು ಪ್ರಯತ್ನಪಟ್ಟು ಮೂಕವೇದನೆ ಅನುಭವಿಸುತ್ತಿದ್ದಾರೆ.ಪತ್ರಿಕೆಗಳು ಕೂಡ ಹಲವು ಬಾರಿ ವರದಿ ಮಾಡಿವೆ. ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಮತ್ತು ಕೆಡಿಪಿ ಸಭೆಗಳಲ್ಲಿ ಕಂಪೌಂಡ ಗೋಡೆ ಎತ್ತರಿಸುವ ಕುರಿತು ಸುದೀರ್ಘ ಚರ್ಚೆಗಳು ನಡೆದರು ಕೂಡ ಬಿಡಿಕಾಸು ಮಂಜೂರಾಗದೆ ಹೋಗಿದ್ದರಿಂದ ಪಶು ಆಸ್ಪತ್ರೆ ಅನಾಥ ಸ್ಥಿತಿಯನ್ನು ಎದುರಿಸುವಂತಾಗಿದೆ.ಪಟ್ಟಣದ ಕಬ್ಬೇರ ಓಣಿ, ಅಕ್ಕಸಾಲಿಗರ ಓಣಿ, ಗಡಿಯಾರ ವೃತ್ತದ ಸುತ್ತಮುತ್ತ ಇರುವ ನೂರಾರು ಮಹಿಳೆಯರು ಹಗಲು ರಾತ್ರಿ ಎನ್ನದೆ ಈ ಆಸ್ಪತ್ರೆ ಆವರಣವನ್ನು ಶೌಚಾಲಯವಾಗಿ ಬಳಸುತ್ತಾರೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಅಡ್ಡ ತಡೆದು ಹೇಳಲು ಹೋದರೆ, ನಿಮ್ಮ ಮನೆಗಳಲ್ಲಿ ಹೆಂಗಸರು ಇಲ್ವಾ? ಎಂಬಿತ್ಯಾದಿ ಅಸಡ್ಡೆ ಉತ್ತರಗಳಿಂದ ತಲೆತಗ್ಗಿಸುವಂತಾಗಿದೆ ಎಂದು ಸಿಬ್ಬಂದಿ ನೊಂದು ಹೇಳುತ್ತಾರೆ.ಕಂಪೌಂಡ ಗೋಡೆ ಚಿಕ್ಕದಾಗಿದ್ದರಿಂದ ಗೇಟ್ ಹಾಕಿದರು ಗೋಡೆ ಜಿಗಿದು ಒಳಗಡೆ ಬಂದು ಬಯಲಿನಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತಾರೆ. ಸಂಪೂರ್ಣ ಸ್ವಚ್ಛತಾ ಆಂದೋಲನ ಜಾಗೃತಿ ಮೂಡಿಸಲು ಪ್ರತಿ ವರ್ಷ ಕೋಟ್ಯಂತರ ಹಣ ಖರ್ಚು ಮಾಡಲಾಗುತ್ತಿದೆ.ಪಟ್ಟಣದ ವಿದ್ಯಾವಂತ ಜನತೆಯೆ ಹೀಗೆ ಮಾಡುತ್ತಿರುವುದು ತಮಗೆ ನೋವಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ತಮ್ಮ ಇಲಾಖೆ ನೆರವಿಗೆ ಪುರಸಭೆ ಮುಂದಾಗುವಂತೆ ಕೋರಿದ್ದಾರೆ.

-

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.