ಶ್ರೀಗಂಧದ ಎಣ್ಣೆಗೆ ಮೈಸೂರು ಪ್ರಸಿದ್ಧ. ಶ್ರೀಗಂಧದ ಎಣ್ಣೆ ತಯಾರಿಸುವ ನಾಡಿನ ಏಕೈಕ ಕಾರ್ಖಾನೆ ಈ ನಗರದಲ್ಲಿದೆ.
1917ರಲ್ಲಿ ಆರಂಭಗೊಂಡ ಶುರುವಾದ ಶ್ರೀಗಂಧದೆಣ್ಣೆ ಕಾರ್ಖಾನೆ ಇಂದಿಗೂ ತನ್ನ ಕಾರ್ಯ ಮುಂದುವರಿಸಿದೆ. ರಾಜ್ಯ, ಹೊರ ರಾಜ್ಯ ಹಾಗೂ ವಿವಿಧ ದೇಶಗಳಿಗೆ ಈ ಪರಿಮಳ ರವಾನೆಯಾಗಿದೆ. ದೇಶ ಹಾಗೂ ವಿದೇಶಗಳಲ್ಲಿ ಕರುನಾಡಿಗೆ ಖ್ಯಾತಿ ತಂದುಕೊಟ್ಟ ಕೀರ್ತಿ ಈ ಕಾರ್ಖಾನೆಯದಾಗಿದೆ. ಇಂತಹ ಐತಿಹಾಸಿಕ ಹಿನ್ನೆಲೆಯ ಕಾರ್ಖಾನೆ ಈಗ ಸುಗಂಧ ಪದಾರ್ಥ (ಧೂಪ) ತಯಾರಿಕೆ ಘಟಕವನ್ನೂ ಆರಂಭಿಸುವ ಮೂಲಕ ಹೊಸ ದಿಕ್ಕಿನತ್ತ ಹೆಜ್ಜೆ ಹಾಕಿದೆ.

ಇಲ್ಲಿನ ಘಟಕದಲ್ಲಿ ಶ್ರೀಗಂಧದ ತುಂಡುಗಳನ್ನು ವಿಶಿಷ್ಟ ತಾಂತ್ರಿಕತೆಯಿಂದ ಬಟ್ಟಿ ಇಳಿಸಿ ಗಂಧದ ಎಣ್ಣೆ ಉತ್ಪಾದಿಸಲಾಗುತ್ತದೆ. ಈ ಪ್ರಕ್ರಿಯೆ ಬಳಿಕ ಮರದ ಪುಡಿ(ಹೊಟ್ಟು) ಹಾಗೇ ಉಳಿದುಕೊಳ್ಳುತ್ತದೆ. ಆದರೆ, ಈ ಪುಡಿಯಲ್ಲಿನ್ನೂ ಪರಿಮಳದ ಅಂಶ ಅಡಗಿರುತ್ತದೆ. ಇದನ್ನು ಬಳಸಿ ಧೂಪ ತಯಾರಿಸಬಹುದಾಗಿದೆ.

ಹಿಂದೆ ಈ ಪುಡಿಯನ್ನು ಹರಾಜು ಮಾಡಲಾಗುತ್ತಿತ್ತು. ಇದನ್ನು ಪಡೆದ ಖಾಸಗಿ ವ್ಯಕ್ತಿಗಳು ಧೂಪ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದರು. ಕೆಲವು ಉತ್ಪಾದಕರಿಂದ ಧೂಪದ ಪ್ಯಾಕೆಟ್ಗಳನ್ನು ರಾಜ್ಯ ಸರ್ಕಾರದ ಒಡೆತನದಲ್ಲಿರುವ `ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ'(ಕೆಎಸ್ಡಿಎಲ್) ಖರೀದಿಸುತ್ತಿತ್ತು.

`ಕೆಎಸ್ಡಿಎಲ್'ನ ಸಾಬೂನು, ಪರಿಮಳ ದ್ರವ್ಯ ಸೇರಿದಂತೆ 12ಕ್ಕೂ ಹೆಚ್ಚು ಉತ್ಪನ್ನಗಳಿಗೆ ಈ ವಿಭಾಗದಿಂದ ಪ್ರತಿವರ್ಷ 1,600ರಿಂದ 1,800 ಕೆ.ಜಿ ಗಂಧದ ಎಣ್ಣೆ ಪೂರೈಕೆಯಾಗುತ್ತದೆ. ಇಷ್ಟು ಪ್ರಮಾಣದ ಬೇಡಿಕೆ ಪೂರೈಸಲು ಅಂದಾಜು 60ರಿಂದ 70 ಟನ್ ಶ್ರಿಗಂಧದ ತುಂಡುಗಳು ಬಳಕೆಯಾಗುತ್ತವೆ.

ಇವುಗಳ ಬಳಕೆ ನಂತರ ಬೃಹತ್ ಪ್ರಮಾಣದಲ್ಲಿ ಶ್ರೀಗಂಧದ ಪುಡಿ ಉಳಿಯುತ್ತದೆ. ಇದರ ಸದ್ಬಳಕೆ ಉದ್ದೇಶದಿಂದಲೇ ಧೂಪದ ಘಟಕ ಕಾರ್ಯಾರಂಭ ಮಾಡಲಾಗಿದೆ.

ಶೇ 43ರಷ್ಟು ಗಂಧದ ಪುಡಿ, ಶೇ 25 ಜಿಗುಟು, ಶೇ 30 ಪರಿಮಳ ದ್ರವ್ಯ, ಉಳಿದ ಪ್ರಮಾಣದಲ್ಲಿ ಕೆಲ ರಾಸಾಯನಿಕ ಸೇರಿಸಿ ಧೂಪ ತಯಾರಿಸಲಾಗುತ್ತಿದೆ.

ಬೆಂಗಳೂರಿನ ವಿಭಾಗದಲ್ಲಿ ಇಂತಹ ಧೂಪಗಳ ಸಿದ್ಧತೆಯ ಘಟಕ ಇಲ್ಲದ ಕಾರಣ `ಕೆಎಸ್ಡಿಎಲ್' ಖಾಸಗಿ ವ್ಯಕ್ತಿಗಳನ್ನು ಅವಲಂಬಿಸಿತ್ತು. ಈ ಅವಲಂಬನೆ ಕಡಿಮೆ ಮಾಡುವ ಉದ್ದೇಶದಿಂದಲೇ ನೂತನ ಘಟಕ ಆರಂಭಿಸಲಾಗಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

ಕಾರ್ಖಾನೆಯಲ್ಲಿ ಮಾನವ ಸಂಪನ್ಮೂಲ ವಿಪುಲವಾಗಿಯೇ ಇದೆ. ಅಲ್ಲದೆ, ಎಲ್ಲಾ ಋತುವಿನಲ್ಲೂ ಶ್ರೀಗಂಧದ ಮರ ಸಿಗದೇ ಇರುವ ಕಾರಣ ಕಾರ್ಮಿಕರ ಶ್ರಮವನ್ನು ಪರ್ಯಾಯ ಕೆಲಸಗಳಿಗೆ ಬಳಸಬಹುದಾಗಿದೆ. ಹಾಗಾಗಿಯೇ ಪ್ರಸ್ತುತ ಎರಡು ಯಂತ್ರಗಳಲ್ಲಿ ದಿನವೂ `ಧೂಪ'ದ ತಯಾರಿಕೆ ಸಾಗುತ್ತಿದೆ.

ಎರಡು ಪಾಳಿಯಲ್ಲಿ ಕಾರ್ಖಾನೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪ್ಯಾಕಿಂಗ್ಗೆ 12 ಮಂದಿ ಮಹಿಳೆಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ. ಕಾರ್ಖಾನೆ ಸಿಬ್ಬಂದಿಯೂ ಸೇರಿ 27 ಮಂದಿ ಈ ಕೆಲಸಕ್ಕೆ ನಿಯೋಜನೆಗೊಂಡಿದ್ದಾರೆ. ನಿತ್ಯವೂ 60 ಬಾಕ್ಸ್ ಧೂಪ ಸಿದ್ಧಗೊಂಡು ಬೆಂಗಳೂರಿನ ಮುಖ್ಯ ಘಟಕಕ್ಕೆ ರವಾನೆಯಾಗುತ್ತಿದೆ. ಒಂದು ಬಾಕ್ಸ್ನಲ್ಲಿ 20 ಧೂಪದ ಪ್ಯಾಕೆಟ್ಗಳು ಇರುತ್ತವೆ. ಒಂದು ಪ್ಯಾಕೆಟ್ 20 ಬಿಡಿ ಧೂಪಗಳನ್ನು ಒಳಗೊಂಡಿದೆ.

ಈವರೆಗೆ 20 ಸಾವಿರಕ್ಕೂ ಹೆಚ್ಚು ಬಾಕ್ಸ್ ಸಿದ್ಧಗೊಂಡಿವೆ. ಇತ್ತೀಚೆಗೆ 10 ಬಿಡಿ ಧೂಪಗಳ ಪ್ಯಾಕೆಟ್ ಸಹ ಸಿದ್ಧವಾಗುತ್ತಿದೆ. ಈ ವರ್ಷ 18 ಸಾವಿರ ಧೂಪದ ಬಾಕ್ಸ್ ತಯಾರಿಸುವ ಗುರಿ ಹೊಂದಲಾಗಿದೆ.

`ಶ್ರೀಗಂಧದ ಮರದಿಂದ ಎಣ್ಣೆ ತೆಗೆದ ನಂತರವೂ ಉಳಿಯುವ ಪುಡಿ ಉತ್ಕೃಷ್ಟವಾಗಿಯೇ ಇರುತ್ತದೆ. ಇದಕ್ಕೆ ವಿದೇಶಗಳಲ್ಲಿ ಅಪಾರ ಬೇಡಿಕೆಯಿದ್ದು, ತೈವಾನ್ ಮತ್ತಿತರ ದೇಶಗಳಿಗೆ ರಫ್ತಾಗುತ್ತಿದೆ. ಆಸಕ್ತರು ಕಾರ್ಖಾನೆಗೆ ಬಂದು ಖರೀದಿಸುತ್ತಾರೆ. ಆದರೆ, ಈಗ ಬೇಡಿಕೆ ಕುಸಿದಿದೆ. ಆದ್ದರಿಂದ ನಾವೇ ಪುಡಿ ಬಳಸಿ ಧೂಪ ತಯಾರಿಕೆಗೆ ಮುಂದಾಗಿದ್ದೇವೆ' ಎನ್ನುತ್ತಾರೆ ಕಾರ್ಖಾನೆ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ.ಪಿ. ನಾಗೇಂದ್ರ.

`ಧೂಪದ ಪ್ಯಾಕೆಟ್ಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಸೃಷ್ಟಿಯಾಗಿದೆ. `ಕೆಎಸ್ಡಿಎಲ್' ಹೊರಗಿನ ವ್ಯಕ್ತಿಗಳಿಂದ ಖರೀದಿ ನಿಲ್ಲಿಸಿದೆ. ಈ ವರ್ಷ ಮತ್ತೊಂದು ಯಂತ್ರ ಸ್ಥಾಪಿಸಿ ಉತ್ಪಾದನೆ ಪ್ರಮಾಣ ಹೆಚ್ಚಿಸಲಾಗುತ್ತದೆ' ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.