ಹಾಲು ಬಣ್ಣದ, ಕುಡಿನೋಟದ ಚೆಲುವೆ ಶ್ರುತಿ ಹಾಸನ್ ಬಿಡುಗಡೆಗೊಳ್ಳಲಿರುವ ತಮ್ಮ ನೂತನ ಸಿನಿಮಾ `ಡಿ ಡೇ' ಬಗ್ಗೆ ಮಾತನಾಡಿದ್ದಾರೆ.

`ನನ್ನ ವೃತ್ತಿ ಬದುಕಿನಲ್ಲಿ ಸವಾಲೆಸೆಯುವಂಥ ಸಿನಿಮಾ ಇದು. ಸಿನಿಮಾಕ್ಕೆ ಸಂಬಂಧಿಸಿದಂತೆ ನಿರ್ದೇಶಕ ನಿಖಿಲ್ ಅಡ್ವಾನಿ ಅವರನ್ನು ಸಂಪರ್ಕಿಸಿ ಕತೆ ಕೇಳಿದೆ. ನಾನು ಅಭಿನಯಿಸಲಾರೆ ಎಂದು ಹೇಳಲು ಆಗಲೇ ಇಲ್ಲ. ಚಿತ್ರಕತೆ ಹಾಗಿದೆ. ಈ ಸಿನಿಮಾದಲ್ಲಿ ನಾನು ಅಭಿನಯಿಸಿದ್ದೇನೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತಿದೆ' ಎಂದು ಅವರು ಹೇಳಿದ್ದಾರೆ.

ಪ್ರಭುದೇವ ನಿರ್ದೇಶನದ `ರಾಮಯ್ಯಾ ವಸ್ತಾವಯ್ಯ' ಹಾಗೂ ನಿಖಿಲ್ ಅಡ್ವಾನಿ ನಿರ್ಮಾಣದ `ಡೀ ಡೇ' ಸಿನಿಮಾ ಬಿಡುಗಡೆಗೆ ಕಾಯುತ್ತಿರುವ ಶ್ರುತಿ `ನಾನು ಬಾಲಿವುಡ್ನ್ನು ದೂರ ಮಾಡುತ್ತಿದ್ದೆ ಎನ್ನುವ ಮಾತು ಸುಳ್ಳು' ಎಂದು ಪ್ರತಿಕ್ರಿಯಿಸಿದ್ದಾರೆ.

2000ದಲ್ಲಿ `ಹೇರಾಮ್', 2009ರಲ್ಲಿ `ಲಕ್', 2011ರಲ್ಲಿ `ದಿಲ್ ತೊ ಬಚ್ಚಾ ಹೈ ಜಿ' ಸಿನಿಮಾಗಳಲ್ಲಿ ಅಭಿನಯಿಸಿದ್ದ ಇವರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದರು. `ಅಲ್ಲಿಯ ಸಿನಿಮಾಗಳಲ್ಲಿ ನಾನು ಬ್ಯುಸಿ ಆಗಿದ್ದರಿಂದ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಲು ಆಗಲಿಲ್ಲ. ಯಾವುದೇ ಭಾಷೆಯ ಸಿನಿಮಾಗಳಲ್ಲಿ ನಾನು ಹೇಳಿಕೊಳ್ಳುವಂಥ ಹೆಸರು ಮಾಡಿಲ್ಲ. ವಯಸ್ಸು ಚಿಕ್ಕದು.

ಸಿನಿಮಾ ಕ್ಷೇತ್ರದಲ್ಲಿ ಈಗಷ್ಟೇ ವೃತ್ತಿಬದುಕು ಕಟ್ಟಿಕೊಳ್ಳಲು ಆರಂಭಿಸಿದ್ದೇನೆ. ಸಾಧಿಸುವುದು ಬೇಕಾದಷ್ಟಿದೆ. ಹೀಗಾಗಿ ಉತ್ತಮ ಪಾತ್ರದ ಸಿನಿಮಾಗಳಷ್ಟೇ ನನಗೆ ಮುಖ್ಯ. ಬಾಲಿವುಡ್ ಅನ್ನು ನಾನು ದೂರಮಾಡುವ ಪ್ರಶ್ನೆಯೇ ಇಲ್ಲ. ಎಲ್ಲವೂ ಭಾರತೀಯ ಸಿನಿಮಾ ಎಂಬುದಷ್ಟೇ ನನ್ನ ವಿವೇಚನೆಯಲ್ಲಿದೆ' ಎಂದು ಹೇಳಿರುವ ಶ್ರುತಿ ಹಿಂದಿ ಸಿನಿಮಾಗಳಲ್ಲಿ ಹೆಚ್ಚಾಗಿ ಅಭಿನಯಿಸುವ ಬಯಕೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.