ನವದೆಹಲಿ(ಪಿಟಿಐ):ಸಂಸತ್ತಿನ ಚಳಿಗಾಲದ ಅಧಿವೇಷನ ಗುರುವಾರ ಆರಂಭಗೊಳ್ಳಲಿದ್ದು, ಷೇರು ಮಾರುಕಟ್ಟೆಯಲ್ಲಿನ ಹೂಡಿಕೆದಾರರು ರಾಜಧಾನಿಯತ್ತ ಕಣ್ಣು ನೆಟ್ಟಿದ್ದಾರೆ. ಕಾರಣ ನೇರ ವಿದೇಶಿ ಹೂಡಿಕೆ(ಎಫ್ಡಿಐ) ಕುರಿತು ಕೇಂದ್ರ ಸರ್ಕಾರದ ನಿಲವು ಮತ್ತು ವಿರೋಧ ಪಕ್ಷಗಳ ವಿರೋಧದ ಫಲಶ್ರುತಿ ಏನಾಗಲಿದೆ ಎಂಬ ಕುತೂಹಲ.

ಅದಾಗಲೇ ಜುಲೈ-ಸೆಪ್ಟೆಂಬರ್ ನಡುವಿನ ತ್ರೈಮಾಸಿಕದ ಹಣಕಾಸು ಸಾಧನೆ ಚಿತ್ರವೆಲ್ಲ ಹೊರಬಿದ್ದಾಗಿದೆ. ಈಗೇನಿದ್ದರೂ ಷೇರುಪೇಟೆಯ ಹಾವು-ಏಣಿ ಆಟಕ್ಕೆ ಸಂಸತ್ ಅಧಿವೇಷನದಿಂದ ಮಾತ್ರ ಪ್ರಚೋದನೆ ಸಿಗಬೇಕಿದೆ. ಹಾಗಾಗಿ ಷೇರು ದಲ್ಲಾಳಿಗಳು, ಹೂಡಿಕೆದಾರರು, ಸಲಹೆಗಾರರು, ಷೇರುಪೇಟೆ ತಜ್ಞರ ಗಮನವೂ ನವದೆಹಲಿಯತ್ತ ಇದೆ.

ಅಲ್ಲಿ ಬ್ಯಾಂಕಿಂಗ್ ಕ್ಷೇತ್ರದ ನಿಯಂತ್ರಣ-ನಿರ್ವಹಣೆಗೆ ಸಂಬಂಧಿಸಿದ ತಿದ್ದುಪಡಿ ಮಸೂದೆ ಮತ್ತು ನೇರ ತೆರಿಗೆ ಸಂಹಿತೆ ಸಂಸತ್ತಿನ ಒಪ್ಪಿಗೆ ಪಡೆಯಬೇಕಿದೆ. ನೇರ ವಿದೇಶಿ ಹೂಡಿಕೆ ಮಿತಿಯನ್ನು ಶೇ 26ರಿಂದ 49ಕ್ಕೆ ಹೆಚ್ಚಿಸಿಕೊಳ್ಳಲು ಮುಂದಾಗಿರುವ ವಿಮಾ ಕ್ಷೇತ್ರವೂ ಹಸಿರು ನಿಶಾನೆಗಾಗಿ ಕಾದಿದೆ. ಈ ಅಂಶಗಳೂ ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

`ಜಾಗತಿಕ ಮಟ್ಟದ ಬೆಳವಣಿಗೆಗಳತ್ತ ಮತ್ತು ದೇಶದಲ್ಲಿ ಕೇಂದ್ರ ಸರ್ಕಾರ ಇನ್ನಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತದೆಯೇನೋ ಎಂಬುದರತ್ತ ಹೂಡಿಕೆದಾರರ ಚಿತ್ತವಿದೆ~ ಎನ್ನುತ್ತಾರೆ `ಬೊನಾಂಝಾ ಪೋರ್ಟ್ಫೊಲಿಯ~ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ರಾಕೇಶ್ ಗೋಯಲ್.

ಷೇರುಪೇಟೆಯ ಸೋಮವಾರದ ಆರಂಭ ಸಾಮಾನ್ಯವಾಗಿರಲಿದೆ. ಏಕೆಂದರೆ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್ಎಸ್ಇ) ಬೆಂಚ್ಮಾರ್ಕ್ ನಿಫ್ಟಿ ದೊಡ್ಡ ಬೆಂಬಲದ 5600 ಅಂಶಗಳ ಮಟ್ಟವನ್ನು ಮುರಿದು ಮುಂದೆ ಹೋಗಿದೆ. ಹಾಗಾಗಿ ವಾರದ ಮುನ್ನೋಟವೂ ನಿರಾಶದಾಯಕವಾಗಿಯೇ ಇದೆ ಎಂಬುದು ಸಿಎನ್ಐ ರೀಸರ್ಚ್ನ ಅಧ್ಯಕ್ಷ ಕಿಶೋರ್ ಓಸ್ವಾಲ್ ಅವರ ವಿಶ್ಲೇಷಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.