ಶನಿವಾರ, ಫೆಬ್ರವರಿ 27, 2021
31 °C

ಷೇರು ವಿಕ್ರಯ ಮೂಲಕ ₨36,925 ಕೋಟಿ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಷೇರು ವಿಕ್ರಯ ಮೂಲಕ ₨36,925 ಕೋಟಿ ನಿರೀಕ್ಷೆ

ನವದೆಹಲಿ(ಪಿಟಿಐ): ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಷೇರು ವಿಕ್ರಯ ಮೂಲಕ 2014–15ನೇ ಸಾಲಿನಲ್ಲಿ ₨36,925 ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ.ಷೇರು ವಿಕ್ರಯ ಮೂಲಕ ಪ್ರಸಕ್ತ ಹಣಕಾಸು ವರ್ಷದಲ್ಲಿ ₨40 ಸಾವಿರ ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿತ್ತು. ಆದರೆ, ಸೋಮವಾರ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಇದನ್ನು ಅರ್ಧ ಕ್ಕಿಂತಲೂ ಕಡಿಮೆ, ಅಂದರೆ  ₨16,027 ಕೋಟಿಗೆ ತಗ್ಗಿಸ­ಲಾಗಿದೆ.ಹಣಕಾಸು ಮಾರುಕಟ್ಟೆಯಲ್ಲಿನ ಅಸ್ಥಿ ರತೆಯಿಂದ ಹಲವು ಕಂಪೆನಿಗಳು ಷೇರು ಮಾರಾಟ ಮುಂದೂಡಿವೆ. ಹೀಗಾಗಿ  ಈ ಬಾರಿ ಷೇರು ಮಾರಾಟದ ಮೂಲಕ ಈವರೆಗೆ ಕೇವಲ ₨3,500 ಕೋಟಿ ಸಂಗ್ರಹವಾಗಿದೆ ಎಂದು ಚಿದಂಬರಂ ಸದನಕ್ಕೆ ಮಾಹಿತಿ ನೀಡಿದರು.ಖಾಸಗಿ ಕಂಪೆನಿಗಳಲ್ಲಿ ಸರ್ಕಾರ ಹೊಂದಿ­­ರುವ ಉಳಿಕೆ ಷೇರು ಮಾರಾ­ಟ ಮೂಲಕ 2013–14ನೇ ಸಾಲಿನಲ್ಲಿ ₨14 ಸಾವಿರ ಕೋಟಿ ಸಂಗ್ರಹಿಸುವ ಗುರಿ ನಿಗದಿಪಡಿಸಲಾ­ಗಿತ್ತು. ಇದನ್ನೂ ಮಧ್ಯಂತರ ಬಜೆಟ್‌­ ಮಂಡನೆ ವೇಳೆ ಪರಿಷ್ಕರಿಸಿ ₨3 ಸಾವಿರ ಕೋಟಿಗೆ ತಗ್ಗಿಸ­ಲಾಗಿದೆ. 2014–15ನೇ ಸಾಲಿಗೆ  ಈ ಗುರಿ ₨15 ಸಾವಿರ ಕೋಟಿ ಎಂದು ನಿಗದಿಪಡಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.