ಮೀರತ್: `ಪ್ರಮುಖ ವೇಗದ ಬೌಲರ್ಗಳಾದ ಆರ್. ವಿನಯ್ ಕುಮಾರ್ ಹಾಗೂ ಅಭಿಮನ್ಯು ಮಿಥುನ್ ಗಾಯಗೊಂಡಿರುವುದರಿಂದ ತಂಡಕ್ಕೆ ಸಂಕಷ್ಟ ಎದುರಾಗಿದೆ. ಆದರೆ, ಈ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಬಲ್ಲ ಛಲ ಹೊಂದಿರುವ ಆಟಗಾರರು ನಮ್ಮಲ್ಲಿದ್ದಾರೆ...~

ಕರ್ನಾಟಕ ತಂಡದ ಬ್ಯಾಟಿಂಗ್ ಕೋಚ್ ಜೆ. ಅರುಣ್ ಕುಮಾರ್ ಅವರ ದಿಟ್ಟ ನುಡಿಯಿದು. ವಿಕ್ಟೋರಿಯ ಪಾರ್ಕ್ ಕ್ರೀಡಾಂಗಣದ ನೆಟ್ಸ್ ನಲ್ಲಿ ಅಭ್ಯಾಸದ ವೇಳೆ ಪತ್ರಕರ್ತರ ಜೊತೆ ಮಾತನಾಡಿದ ಅವರು, `ವಿನಯ್ ಹಾಗೂ ಮಿಥುನ್ ಅವರ ಅನುಪಸ್ಥಿತಿಯನ್ನು ರೋನಿತ್ ಮೋರೆ ಮತ್ತು ಅಕ್ಷಯ್ ತುಂಬಲಿದ್ದಾರೆ. ಸ್ಥಳೀಯ ಟೂರ್ನಿಗಳಲ್ಲಿ ಬೆಳಗಾವಿಯ ರೋನಿತ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಇಲ್ಲಿಯೂ ಅವರು ಅದೇ ರೀತಿಯ ಪ್ರದರ್ಶನ ನೀಡುವ ವಿಶ್ವಾಸವಿದೆ~ ಎಂದು ಅರುಣ್ ಹೇಳಿದರು.

`ಶನಿವಾರ ಬೆಳಿಗ್ಗೆ ವಾತಾವರಣ ನೋಡಿಕೊಂಡ ನಂತರ ಅಂತಿಮ ಹನ್ನೊಂದರ ಪಟ್ಟಿ ನಿರ್ಧರಿಸಲಾಗುವುದು. ಅಗತ್ಯವೆನಿಸಿದರೆ, ಬಲಗೈ ವೇಗಿ ಶರತ್ ಅವರನ್ನೂ ಕಣಕ್ಕಿಳಿಸಲಾಗುವುದು. ಸ್ಪಿನ್ ವಿಭಾಗವನ್ನು ನೋಡಿಕೊಳ್ಳಲು ಅಪ್ಪಣ್ಣ ಇದ್ದಾರೆ~ ಎಂದು ಅರುಣ್ ನುಡಿದರು. ಒಂದು ವೇಳೆ ಮಂಡ್ಯದ ಶರತ್ ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆದರೆ, ಅವರಿಗಿದು ಚೊಚ್ಚಲ ರಣಜಿ ಪಂದ್ಯವಾಗಲಿದೆ.

ವಿಶ್ವಾಸ ಹೆಚ್ಚಿದೆ: `ಹಿಂದಿನ ಎರಡೂ ಪಂದ್ಯಗಳಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡಿದೆ. ಆಟಗಾರರರು ತುಂಬಾ ಆತ್ಮವಿಶ್ವಾಸದಿಂದಿದ್ದಾರೆ~ ಎಂದು ಉ. ಪ್ರದೇಶದ ತರಬೇತುದಾರ ಕನ್ನಡಿಗ ವೆಂಕಟೇಶ್ ಪ್ರಸಾದ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.