ಶನಿವಾರ, ಮೇ 21, 2022
22 °C
ರಾಜ್ಯ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿ

ಸಂಕೀರ್ತ್, ಮಹಿಮಾ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿ.ಆರ್. ಸಂಕೀರ್ತ್ ಮತ್ತು ಮಹಿಮಾ ಅಗರ್‌ವಾಲ್ ಇಲ್ಲಿ ಕೊನೆಗೊಂಡ ಫೈವ್ ಸ್ಟಾರ್ ರಾಜ್ಯ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ 19 ವರ್ಷ ವಯಸ್ಸಿನೊಳಗಿನವರ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದರು.ಕೆಬಿಎ ಕೋರ್ಟ್‌ನಲ್ಲಿ ಶನಿವಾರ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಸಂಕೀರ್ತ್ 21-16, 21-15 ರಲ್ಲಿ ಎಂಟನೇ ಶ್ರೇಯಾಂಕದ ಆಟಗಾರ ಮಿಥುನ್ ಮಂಜುನಾಥ್ ಅವರನ್ನು ಮಣಿಸಿದರು.ಆದರೆ ಬಾಲಕರ 17 ವರ್ಷ ವಯಸ್ಸಿನೊಳಗಿನವರ ವಿಭಾಗದ ಫೈನಲ್‌ನಲ್ಲಿ ಮಿಥುನ್ ಮುಯ್ಯಿ ತೀರಿಸಿಕೊಂಡರು. ಫೈನಲ್‌ನಲ್ಲಿ ಅವರು ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದರೂ ಮರುಹೋರಾಟ ನಡೆಸಿ 15-21, 21-18, 21-17 ರಲ್ಲಿ ಸಂಕೀರ್ತ್ ವಿರುದ್ಧ ಜಯ ಪಡೆದರು.ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಮಹಿಮಾ 21-17, 21-17 ರಲ್ಲಿ ಮೀರಾ ಮಹಾದೇವನ್ ವಿರುದ್ಧ ಗೆಲುವು ಪಡೆದರು. ಮಹಿಮಾ 17 ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲೂ ಚಾಂಪಿಯನ್ ಆಗಿ ಪ್ರಶಸ್ತಿ         `ಡಬಲ್' ಗೌರವ ತಮ್ಮದಾಗಿಸಿಕೊಂಡರು. ಫೈನಲ್‌ನಲ್ಲಿ 21-18, 21-7 ರಲ್ಲಿ ಅರ್ಚನಾ ಪೈ ಅವರನ್ನು ಸೋಲಿಸಿದರು.19 ವರ್ಷ ವಯಸ್ಸಿನೊಳಗಿನವರ ಡಬಲ್ಸ್ ವಿಭಾಗದಲ್ಲಿ ಪ್ರಕಾಶ್ ರಾಜ್- ವೈಭವ್ ಜೋಡಿ 15-21, 24-22, 21-17 ರಲ್ಲಿ ಆಶಿತ್ ಸೂರ್ಯ- ಮಹೇಶ್ ಕುಮಾರ್ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಅರ್ಶೀನ್ ಸಯೀದಾ ಸಾದತ್- ಪಾರ್ವತಿ ಎಸ್ ಕೃಷ್ಣ 21-11, 21-13 ರಲ್ಲಿ ಜಿ. ನೇಹಾ- ಪ್ರತೀಕ್ಷಾ ಪ್ರಕಾಶ್ ಅವರನ್ನು ಮಣಿಸಿದರು.17 ವರ್ಷ ವಯಸ್ಸಿನೊಳಗಿನವರ ಬಾಲಕರ ವಿಭಾಗದ ಡಬಲ್ಸ್‌ನಲ್ಲಿ ಮಿಥುನ್ ಮಂಜುನಾಥ್- ಎಂ. ರಘು 21-19, 16-21, 21-15 ರಲ್ಲಿ ಆಕಾಶ್‌ರಾಜ್ ಮೂರ್ತಿ- ಸಿದ್ಧಾರ್ಥ್ ಇ.ಎಸ್. ವಿರುದ್ಧ ಗೆದ್ದರೆ, ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಪೂಜಾಶ್ರೀ- ರಂಜಿತಾ 14-21, 21-18, 21-17 ರಲ್ಲಿ ಅರ್ಚನಾ ಪೈ- ರೀನು ತಿರುಮಲ್ ಅವರನ್ನು ಮಣಿಸಿ ಚಾಂಪಿಯನ್ ಆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.