ಬುಧವಾರ, ಜೂನ್ 16, 2021
27 °C

ಸಂಕ್ಷಿಪ್ತ ಸುದ್ದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈದ್ಯರ ಮುಷ್ಕರ: 5 ರೋಗಿಗಳ ಸಾವು

ಲಖನೌ (ಐಎಎನ್‌ಎಸ್‌):
ಇಲ್ಲಿನ ಐದು ಆಸ್ಪತ್ರೆಗಳ ವೈದ್ಯರು ಶನಿವಾರ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿ­ಸಿದ್ದು, ಐವರು ರೋಗಿಗಳು ಸೂಕ್ತ ಚಿಕಿತ್ಸೆ ಇಲ್ಲದೆ ಮೃತಪಟ್ಟಿದ್ದಾರೆ ಎಂದು ಪೊಲೀ­ಸರು ತಿಳಿಸಿದ್ದಾರೆ.

35ಕ್ಕೂ ಹೆಚ್ಚು ವೈದ್ಯರನ್ನು ಬಂಧಿಸಿದ ಕ್ರಮದ ವಿರುದ್ಧ ಪ್ರತಿಭಟಿಸಿದ ವೈದ್ಯರು, ಕೂಡಲೇ ಅವರನ್ನು ಬಿಡುಗಡೆ ಮಾಡ­ಬೇಕೆಂದು ಆಗ್ರಹಿಸಿದ್ದಾರೆ.ರೋಗಿಯೊಬ್ಬರಿಗೆ ಕೂಡಲೇ ಚಿಕಿತ್ಸೆ ನೀಡುವಂತೆ ಸಮಾಜ­ವಾದಿ ಪಕ್ಷದ ಶಾಸಕ ಇರ್ಫಾನ್‌ ಸೋಲಂಕಿ  ವೈದ್ಯರಿಗೆ ಹೇಳು­ವಂತೆ ರೋಗಿಯ ಸಂಬಂಧಿಕರಿಗೆ ಹೇಳಿದ್ದರು. ಆದರೆ ಶುಕ್ರವಾರ ಈ ಶಿಫಾ­ರಸನ್ನು ವೈದ್ಯರು ತಿರಸ್ಕರಿಸಿದ್ದರು.ನಂತರ ಶಾಸಕರು ತಮ್ಮ ಅಂಗರಕ್ಷಕ­ನನ್ನು ಕಳುಹಿಸಿದಾ­ಗಲೂ ವೈದ್ಯರು ಅವರ ಮಾತನ್ನು ಕೇಳಲಿಲ್ಲ. ಇದರಿಂದ ಕೋಪಗೊಂಡ ಶಾಸಕರು ಖುದ್ದಾಗಿ ವೈದ್ಯರ ಬಳಿ ಬಂದಾಗ ವೈದ್ಯರು ಮತ್ತು ಶಾಸಕರ ನಡುವೆ ಘರ್ಷಣೆ ನಡೆದು ಸೊಲಂಕಿ ಅವರ ತಲೆಗೆ ಏಟು ಬಿದ್ದಿದೆ. ಈ ಹಿನ್ನೆಲೆಯಲ್ಲಿ ವೈದ್ಯರನ್ನು ಬಂಧಿಸ­ಲಾಗಿದೆ. ಬಂಧಿಸಲಾದ ವೈದ್ಯರನ್ನು ಬಿಡುಗಡೆ ಮಾಡುವವರೆಗೂ ತಾವು ಮುಷ್ಕರ ಕೈಬಿಡುವುದಿಲ್ಲ ಎಂದು ವೈದ್ಯರು ಹೇಳಿ­ದ್ದಾರೆ. ಅಲ್ಲದೇ, ಮರಣ ಪ್ರಮಾಣ ಪತ್ರಕ್ಕೆ ಸಹಿ ಹಾಕಲೂ ಅವರು ನಿರಾಕರಿಸಿದ್ದಾರೆ.

ರಾಹುಲ್‌ ಭೇಟಿ: ಪತ್ನಿ ದಹಿಸಿದ ಪತಿ

ಗುವಾಹಟಿ (ಐಎಎನ್‌ಎಸ್‌): ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಅವರನ್ನು ಭೇಟಿಯಾಗಲು ಬಂದ ಮಹಿಳೆ­ಯೊಬ್ಬರನ್ನು ಆಕೆಯ ಪತಿ ಸುಟ್ಟು ಹಾಕಿ ಕೊಲೆ ಮಾಡಿದ್ದಾನೆ.ಅಸ್ಸಾಂ ಪ್ರಚಾರದಲ್ಲಿದ್ದಾಗ ರಾಹುಲ್‌ ಗಾಂಧಿ ಮಹಿಳಾ ಸಮಾವೇಶದಲ್ಲಿ ಭಾಗ­ವಹಿಸಿದ್ದರು. ಆದರೆ ಈ ಸಮಾವೇಶದಲ್ಲಿ ಪಾಲ್ಗೊಳ್ಳದ ಮಹಿಳೆಯನ್ನು ಆಕೆಯ ಪತಿ ಬೆಂಕಿ ಹಚ್ಚಿ, ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.‘ಟಿವಿ ವಾಹಿನಿಗಳಲ್ಲಿ ಹರಿದಾಡುತ್ತಿ­ರುವ ದೃಶ್ಯಗಳಲ್ಲಿ ರಾಹುಲ್‌ಗೆ ಮುತ್ತು ಕೊಟ್ಟ ಮಹಿಳೆ ಈಗ ಕೊಲೆಯಾದ ಮಹಿಳೆ ಅಲ್ಲ’ ಎಂದು ಜೊರ್ಹಾತ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮನ್‌­ಜೀತ್‌ ಕೌರ್‌ ಸ್ಪಷ್ಟಪಡಿಸಿದ್ದಾರೆ.‘ಈ ಮಹಿಳೆ ಸಮಾವೇಶಕ್ಕೆ ಬಂದಿ­ದ್ದಳು, ಆದರೆ ಬೇರೆ ಕಾರಣಗಳಿಂದ ಸಮಾ­ವೇಶದಲ್ಲಿ ಪಾಲ್ಗೊಳ್ಳಲು ಆಗ­ಲಿಲ್ಲ. ಎಂದು ಆಕೆಯ ಜೊತೆ ಸಮಾ­ವೇಶದಲ್ಲಿ ಪಾಲ್ಗೊಳ್ಳಲು ಬಂದ ಜನ­ರನ್ನು ವಿಚಾರಿಸಿದಾಗ ಹೇಳಿದರು‘ ಎಂದು ಅವರು ಸ್ಪಷ್ಟಪಡಿಸಿದರು. ‘ಬಾಂಟಿ ಚುತಿಯಾ ಎಂಬ ಮಹಿಳೆ  ಮೃತಪಟ್ಟಿದ್ದಾಳೆ. ಆಕೆಯ ಗಂಡ ಸೊಮೇ­ಶ್ವರ್‌ ಚುತಿಯಾ ದೇಹ ಕೂಡ 35 ಭಾಗ ಸುಟ್ಟ ಗಾಯಗಳಾಗಿವೆ. ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ’ ಎಂದು ಕೌರ್‌ ಹೇಳಿದರು.‘ರಾ’ ಅಧಿಕಾರಿ ಕುಟುಂಬ ನಿಗೂಢ ಸಾವು

ನವದೆಹಲಿ (ಪಿಟಿಐ):  ಬೇಹುಗಾರಿಕೆ ಸಂಸ್ಥೆ ‘ರಾ’ದ ಅಧಿ­ಕಾರಿ ಮತ್ತು ಅವರ ಪತ್ನಿ, ಮಕ್ಕಳು ನಿಗೂ­ಢ­ವಾಗಿ ಸಾವನ್ನ­ಪ್ಪಿದ ಘಟನೆ ದಕ್ಷಿಣ ದೆಹ­ಲಿಯ ಸಾದಿಕ್‌ ನಗರದಲ್ಲಿ ನಡೆದಿದೆ.ಸಂಶೋಧನಾ ಮತ್ತು ವಿಶ್ಲೇಷಣಾ ಘಟಕದಲ್ಲಿ ತಾಂತ್ರಿಕ ಅಧಿಕಾರಿಯಾದ ಅನನ್ಯ ಚಕ್ರವರ್ತಿ (52) ದೇಹ ಫ್ಯಾನ್‌­ನಲ್ಲಿ ನೇತಾಡುತ್ತಿದ್ದರೆ, ಅವರ ಹೆಂಡತಿ ಜೈಶ್ರೀ, ಪುತ್ರ ಅರ್‍ನಾಬ್‌ (17) ಹಾಗೂ ಪುತ್ರಿ ದಿಶಾ (12) ದೇಹಗಳು ರಕ್ತದ ಮಡು­­ವಿನಲ್ಲಿ ಬಿದ್ದಿತ್ತು. ಅವರ ದೇಹ­ದ ಮೇಲೆ ಗಾಯಗಳ ಗುರುತು­ಗಳಿದ್ದವು.  ಚಕ್ರವರ್ತಿ ಮೊದಲು ತಮ್ಮ್ನ ಕುಟುಂಬ ಸದಸ್ಯರನ್ನು ಕೊಂದು ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.  ಈ ಬಗ್ಗೆ ‘ತನಿಖೆ ಕೈಗೊಂಡು ಸಾವಿಗೆ ನಿಖರವಾದ ಕಾರಣ ಕಂಡುಹಿಡಿಯು­ತ್ತೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.ಮುಜಪ್ಫರ್‌ನಗರ ಗಲಭೆ– 248 ಜನರ ಮೇಲೆ ಆರೋಪಪಟ್ಟಿ

ಮುಜಪ್ಫರ್‌ನಗರ (ಪಿಟಿಐ):  ಇಲ್ಲಿನ ಗಲಭೆಗೆ ಸಂಬಂಧಿಸಿದಂತೆ ಈವರೆಗೆ 48 ಪ್ರತ್ಯೇಕ ಪ್ರಕರಣಗಳಲ್ಲಿ ಭಾಗಿಯಾದ  248 ಜನರ ವಿರುದ್ಧ ವಿಶೇಷ ತನಿಖಾ ದಳ (ಎಸ್‌ಐಟಿ) ಆರೋಪಪಟ್ಟಿ ಸಲ್ಲಿಸಿದೆ.‘ಕೃತ್ಯದಲ್ಲಿ ಭಾಗಿಯಾದ ಒಟ್ಟು 1195 ಜನರಲ್ಲಿ 248 ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಉಳಿದ­ವ­ರನ್ನು ಬಂಧಿಸಲು ಸಂಬಂಧಿಸಿದ ಪೊಲೀಸ್‌ ಠಾಣೆಗೆ ಸೂಚಿಸಲಾಗಿದೆ’ ಎಂದು ಎಸ್‌ಐಟಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮನೋಜ್‌ ಝಾ ತಿಳಿಸಿದ್ದಾರೆ.‘ಇದುವರೆಗೆ 417 ಆರೋಪಿಗಳನ್ನು  ಬಂಧಿಸಲಾಗಿದೆ. ತಲೆಮರೆಸಿಕೊಂಡ 410 ಆರೋಪಿಗಳ ವಿರುದ್ಧ ನ್ಯಾಯಾಲ­ಯವು ಜಾಮೀನು ರಹಿತ ಬಂಧನ ವಾರೆಂಟ್‌ ಹೊರಡಿಸಿದೆ ಮತ್ತು 222 ಆರೋಪಿಗಳ ವಿರುದ್ಧ ಸಿಆರ್‌ಪಿಸಿ 82ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.