ಬ್ರಹ್ಮಾವರ:ಒಳ್ಳೆಯ ಸಂಗೀತಗಾರರಿಗೆ ಇಂದು ಉತ್ತಮ ಅವಕಾಶಗಳು ಅರಸಿ ಬರುತ್ತಿವೆ. ಮನಸ್ಸಿಗೆ ಮುದ ನೀಡುವ ಸಂಗೀತವನ್ನು ಶೃದ್ಧೆಯಿಂದ ಸ್ವೀಕ ರಿಸಿದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳ ಬಹುದು ಎಂದು ಡಾ.ಕಾರಂತ ಹುಟ್ಟೂರ ಪ್ರತಿಪ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ ಕುಂದರ್ ಹೇಳಿದರು.

ಕೋಟ ಕಾರಂತ ಕಲಾಭವನದಲ್ಲಿ ಇತ್ತೀಚೆಗೆ ಉಡುಪಿ ಡಾ.ಶಿವರಾಮ ಕಾರಂತ ಟ್ರಸ್ಟ್, ಕೋಟ ಡಾ.ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಕೋಟತಟ್ಟು ಗ್ರಾಮ ಪಂಚಾಯಿತಿ, ಜೇಸಿಐ ಕಲ್ಯಾಣಪುರ, ಮಣೂರು ಅಶ್ವಿನಿ ಸ್ಮಾರಕ ಕೇಂದ್ರ, ಕೋಟದ ಡಾ.ಕಾರಂತ ಮಕ್ಕಳ ವೇದಿಕೆಯ ಆಸರೆಯಲ್ಲಿ ಬ್ರಹ್ಮಾವರದ ಆಕಾಶವಾಣಿ ಕಲಾವಿದ ಚಂದ್ರಶೇಖರ ಕೆದ್ಲಾಯರ ಸಾರಥ್ಯದಲ್ಲಿ ತಾಲ್ಲೂಕು ಮಟ್ಟದ ಗಾಯನ ತರಬೇತಿ ಕಮ್ಮಟದಲ್ಲಿ ಅವರು ಮಾತನಾಡಿದರು.

ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಜಿ.ಪಂ.ಸದಸ್ಯೆ ಮಲ್ಲಿಕಾ ಬಾಲಕೃಷ್ಣ ಚಾಲನೆ ನೀಡಿದರು. ಉಡುಪಿ ತಾಲ್ಲೂಕು ಕಸಾಪ ಅಧ್ಯಕ್ಷ ಪ್ರೊ.ಉಪೇಂದ್ರ ಸೋಮಾಯಾಜಿ ಅಧ್ಯಕ್ಷತೆ ವಹಿಸಿದ್ದರು. ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ, ನರೇಂದ್ರ ಕುಮಾರ್ ಕೋಟ, ಚಂದ್ರಶೇಖರ ಕೆದ್ಲಾಯ, ಕೋಟತಟ್ಟು ಗ್ರಾ.ಪಂ.ಪಿಡಿಒ ಜಯರಾಮ ಶೆಟ್ಟಿ ಇತರರು ಇದ್ದರು. ಕೋಟದ ಪ್ರಜ್ಞಾ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಪ್ರಕಾಶ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.