ಕರ್ನಾಟಕ ಗಾನ ಕಲಾ ಪರಿಷತ್ ಸಂಗೀತದ ಒಳ ಹೊರಗನ್ನು ಅನಾವರಣಗೊಳಿಸುವ ಪ್ರತಿಷ್ಠಿತ, ಘನತೆ, ಗೌರವವುಳ್ಳ ವಿಶಿಷ್ಟ ಸಂಗೀತ ಸಂಸ್ಥೆ.

ಸಂಗೀತ ವಿದ್ವಜ್ಜನರಿಂದ ಮೇಳೈಸಿದ ಒಂದು `ಸಂಗೀತ ಕುಟುಂಬ~ ಇದು. ಪ್ರತಿವರ್ಷವೂ ಹಿರಿಯ ಕಿರಿಯ ಸಂಗೀತ ಕಲಾವಿದರಿಗೆ ಸೇರಿಸಿ ಸಂಗೀತದ ರಸದೌತಣ ಉಣಬಡಿಸುತ್ತದೆ. ಸುದೀರ್ಘ ಸಂಗೀತ ಸೇವೆ ಪರಿಷತ್ನ ಹೆಗ್ಗಳಿಕೆ!

ಸಂಗೀತ ವಿದ್ವಾಂಸರೇ ಸೇರಿ 1969ರಲ್ಲಿ ಸ್ಥಾಪಿಸಿದ ಗಾನ ಕಲಾ ಪರಿಷತ್ 41 ಸಂಗೀತ ಸಮ್ಮೇಳನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಪ್ರತಿ ಸಮ್ಮೇಳನವೂ ಹೊಸತನದಿಂದ ಕೂಡಿದ್ದು ಅನೇಕ ಕಲಾವಿದರನ್ನು ಸಂಗೀತ ಪ್ರಿಯರಿಗೆ ಪರಿಚಯಿಸಿದೆ.

ಬೆಂಗಳೂರಿಗೆ ಮಾತ್ರ ಸೀಮಿತವಾಗಿರದ ಸಮ್ಮೇಳನ ರಾಮನಾಥಪುರ, ಹಾಸನ, ತುಮಕೂರು, ಬಳ್ಳಾರಿ, ಹಾಸನ, ಮೈಸೂರು, ಸಿದ್ಧಾಪುರಗಳಲ್ಲೂ ಯಶಸ್ವಿಯಾಗಿ ನಡೆದಿದೆ. ಬೇರೆ ಬೇರೆ ಸಂಸ್ಥೆ ಸಹಯೋಗದಲ್ಲಿ ಪ್ರತಿ ತಿಂಗಳೂ ಸಂಗೀತ ಕಾರ್ಯಕ್ರಮ ನಡೆಸುತ್ತಾ ಬಂದಿರುವುದು ಪರಿಷತ್ನ ಮತ್ತೊಂದು ಸಾಧನೆ.

ಪರಿಷತ್ ತರುಣ ಕಲಾವಿದರಿಗಾಗಿ ಪ್ರತ್ಯೇಕ ಯುವಜನ ವಿಭಾಗ, ಅಧ್ಯಯನ ಗೋಷ್ಠಿ, ಯುವ ಪ್ರತಿಭಾ ವಿಕಸನ ಕೇಂದ್ರ, ಭಾವಚಿತ್ರ ಪ್ರದರ್ಶನ ಮುಂತಾದ ಕಾರ್ಯಕ್ರಮಗಳಲ್ಲದೇ ಕಲಾವಿದರ ಹಿತಚಿಂತನಾ ಯೋಜನೆಗಳನ್ನೂ ಹಮ್ಮಿಕೊಂಡಿದೆ.
ಪ್ರಸ್ತುತ ಬುಧವಾರದಿಂದ ಭಾನುವಾರದವರೆಗೆ ರಾಜ್ಯಮಟ್ಟದ 42ನೇ ಸಂಗೀತ ಸಮ್ಮೇಳನ ನಡೆಯಲಿದೆ.

`ಸಂಸ್ಥೆ ಪ್ರಾರಂಭದಿಂದ ನಡೆಸುತ್ತ ಬಂದ ವಾರ್ಷಿಕ ಸಂಗೀತ ಸಮ್ಮೇಳನವೂ ಒಂದು ವರ್ಷವೂ ನಿಂತಿಲ್ಲ. ನಿರಂತರ ಗಾಯನ, ಸಂಗೀತ ಸೇವೆ ಸಂಸ್ಥೆಯ ಅವಿರತ ಪ್ರಯತ್ನಗಳಲ್ಲಿ ಒಂದು~ ಎನ್ನುತ್ತಾರೆ ಹಿರಿಯ ಸಂಗೀತ ವಿದ್ವಾಂಸ ಮತ್ತು ಪರಿಷತ್ನ ಅಧ್ಯಕ್ಷರಾಗಿರುವ ವಿದ್ವಾನ್ ಆರ್.ಕೆ. ಪದ್ಮನಾಭ.

`ಗಾನ ಕಲಾ ಭೂಷಣ~ ( ಹಿರಿಯ ಕಲಾವಿದರಿಗೆ ) ಮತ್ತು `ಗಾನ ಕಲಾಶ್ರೀ~ (ಉದಯೋನ್ಮುಖ ಕಲಾವಿದರಿಗೆ) ಬಿರುದು ನೀಡಲು ಸಮಿತಿಯಲ್ಲಿರುವ ವಿದ್ವಾಂಸರೇ ಕಲಾವಿದರ ಆಯ್ಕೆ ಮಾಡುತ್ತಾರೆ.

ಜತೆಗೆ ಗಾಯನ-ವಾದನಕ್ಕೆ ಸಂಬಂಧಿಸಿದಂತೆ ಸಂಗೀತದ ಒಟ್ಟು 8 ಕಲಾವಿದರಿಗೆ ಸನ್ಮಾನವನ್ನೂ ಮಾಡಿ ಪ್ರೋತ್ಸಾಹಿಸಲಾಗುತ್ತದೆ.

ಇಲ್ಲಿ ರಾಜಕೀಯ, ಪ್ರಭಾವಗಳಿಗೆ ಅವಕಾಶಗಳೇ ಇರುವುದಿಲ್ಲ. ಹೀಗಾಗಿ ಸಂಸ್ಥೆ ತನ್ನ ಘನತೆ, ಗೌರವ, ಪ್ರತಿಷ್ಠೆಗಳನ್ನು ಹಾಗೇ ಉಳಿಸಿಕೊಂಡಿದೆ ಎನ್ನುತ್ತಾರೆ ಅವರು.
ಸಂಗೀತ ಸಮ್ಮೇಳನವೂ ವಿಶಿಷ್ಟ.

ಬೆಳಗಿನ ಪ್ರಾರ್ಥನೆಯಿಂದ ಹಿಡಿದು ವಿದ್ವತ್ಗೋಷ್ಠಿ, ಪ್ರಾತ್ಯಕ್ಷಿಕೆಗಳಲ್ಲಿ ಸಂಗೀತದ ವಿವಿಧ ಆಯಾಮಗಳನ್ನು ಚರ್ಚಿಸಲಾಗುತ್ತದೆ. ಸಂಗೀತದ ಶಾಸ್ತ್ರ, ಲಕ್ಷಣ ವಿಚಾರಗಳ ಬಗ್ಗೆ ಜನರಲ್ಲಿ ಹೆಚ್ಚು ಪ್ರಜ್ಞೆ ಬಂದಿರುವುದು ಇದರಿಂದಲೇ. ಇಷ್ಟು ವರ್ಷಗಳ ಇತಿಹಾಸದಲ್ಲಿ ಸಂಗೀತಜ್ಞ ಬಿ ವಿ ಕೆ ಶಾಸ್ತ್ರಿ, ಪಟ್ಣಂ ಸುಬ್ರಹ್ಮಣ್ಯ ಅಯ್ಯರ್, ಮಹಾ ವೈದ್ಯನಾಥ ಅಯ್ಯರ್ ಅವರ ಕೊಡುಗೆಗಳನ್ನು ಮರೆಯಲಾಗದು.

ಸಂಗೀತ ಸಾಮ್ರಾಜ್ಞಿ ಎಂ.ಎಸ್. ಸುಬ್ಬುಲಕ್ಷ್ಮಿ, ಎಂ.ಎಲ್. ವಸಂತಕುಮಾರಿ, ಡಿ.ಕೆ. ಪಟ್ಟಮ್ಮಾಳ್ ಅವರಂತಹ ಹಿರಿಯ ಕಲಾವಿದರೂ ಇದರ ವೇದಿಕೆಗಳಲ್ಲಿ ಹಾಡಿದ್ದಾರೆ. ಇಂತಹ ಮಹಾನ್ ಕಲಾವಿದರ ಜೀವನ, ಸಾಧನೆಗಳನ್ನು ಮೆಲುಕು ಹಾಕಲು ಇಂತಹ ಸಂಗೀತ ವೇದಿಕೆಗಳಲ್ಲಿ ಸಾಧ್ಯ.

ಸಂಗೀತದ ಎರಡು ಪ್ರಕಾರಗಳಾದ ಹಿಂದುಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತವಲ್ಲದೆ ಈ ಭಾರಿ ಭಾರತೀಯೇತರ ಶಾಸ್ತ್ರೀಯ ಸಂಗೀತ ಜಪಾನ್, ಪರ್ಷಿಯಾಗಳ ಸಂಗೀತ ಪರಿಚಯ ಇದೆ.

ತ್ಯಾಗರಾಜರ ಕೃತಿಗಳಲ್ಲಿ ಬರುವ ರಾಮಾಯಣದ ಸಂದರ್ಭ, ಮೇಳಕರ್ತ ರಾಗಗಳ ಅವಶ್ಯಕತೆ ಮುಂತಾದ ವಿಚಾರಗಳ ಮೇಲೆ ಬೆಳಕು ಚೆಲ್ಲಲಿರುವುದು ಸಮ್ಮೇಳನದ ಮತ್ತೊಂದು ವಿಶೇಷತೆ.

ಸಮ್ಮೇಳನದಲ್ಲಿ
ಕರ್ನಾಟಕ ಗಾನಕಲಾ ಪರಿಷತ್: ಬುಧವಾರದಿಂದ ಭಾನುವಾರದವರೆಗೆ (ಸೆ. 21 ರಿಂದ ಸೆ. 25) ವಿದ್ವಾಂಸರ ಮತ್ತು ಯುವ ಪ್ರತಿಭೆಗಳ 42ನೇ ಸಂಗೀತ ಸಮ್ಮೇಳನ.
ಸಂಗೀತ ಕಛೇರಿ, ಉಪನ್ಯಾಸ, ಪ್ರಾತ್ಯಕ್ಷಿಕೆ, ವಿದ್ವತ್ ಗೋಷ್ಠಿ. ಸಮ್ಮೇಳನ ಅಧ್ಯಕ್ಷತೆ: ಆರ್.ಎ. ರಮಾಮಣಿ.

ಬುಧವಾರ ಬೆಳಿಗ್ಗೆ10.30ಕ್ಕೆ ಬೇಲಿಮಠದ ಶಿವರುದ್ರ ಸ್ವಾಮಿ ಗಳಿಂದ ಉದ್ಘಾಟನೆ.

ಅತಿಥಿಗಳು: ಇಸ್ಕಾನ್ನ ತಿರುದಾಸ ಮತ್ತು ನಿವೃತ್ತ ಡಿಐಜಿ ಎಚ್.ಆರ್. ಕಸ್ತೂರಿರಂಗನ್.
ಸಂಜೆ 5ಕ್ಕೆ ಕಾರ್ತಿಕ್ ಹೆಬ್ಬಾರ್ ಗಾಯನ,ಎಚ್.ಎನ್. ಸ್ಮಿತಾ (ವಯಲಿನ್),ಎ. ರಾಧೇಶ್ (ಮೃದಂಗ) ಮತ್ತು ಭಾರ್ಗವ ಹಾಲಂಬಿ (ಖಂಜರಿ) ಮತ್ತು 7.15ಕ್ಕೆ ಆರ್.ಎ. ರಮಾಮಣಿ ಗಾಯನ, ಬಿ. ರಘುರಾಂ (ವಯಲಿನ್), ಅರ್ಜುನ ಕುಮಾರ್ (ಮೃದಂಗ) ಮತ್ತು ಸುಖನ್ಯಾ ರಾಮಗೋಪಾಲ್ (ಘಟ).

ಪ್ರತಿ ದಿನ ಬೆಳಿಗ್ಗೆ 10.30 ರಿಂದ 1ರ ವರೆಗೆ ನಡೆಯುವ ಗೋಷ್ಠಿಗಳು ಭಿನ್ನ ಶಾಲೆಗಳ ವಿದ್ಯಾರ್ಥಿನಿಯರ ಪ್ರಾರ್ಥನೆ ಯೊಂದಿಗೆ ಪ್ರಾರಂಭ ವಾಗುತ್ತವೆ. ಸುಮಾರು 75 ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಸಂಜೆ 5 ರಿಂದ 9.15ರ ವರೆಗೆ ನಡೆಯುವ 2 ಸಂಗೀತ ಕಛೇರಿಗಳಲ್ಲಿ ಗಾಯನವಲ್ಲದೆ ವೀಣೆ, ತನಿ ಪಿಟೀಲು, ನಾಗಸ್ವರ, ಕೊಳಲು ನಾದಸುಧೆ ಹರಿಯಲಿದೆ.

ಸ್ಥಳ: ಗಾಯನ ಸಮಾಜ, ಕೆ ಆರ್ ರಸ್ತೆ. ಪ್ರವೇಶ ಉಚಿತ. ವಿವರಗಳಿಗೆ: 2658 5837, 94485 74894.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.