ಶನಿವಾರ, ಜನವರಿ 18, 2020
20 °C

ಸಂಜಯ್ ದತ್‌ಗೆ ಪೆರೋಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಜಯ್ ದತ್‌ಗೆ ಪೆರೋಲ್‌

ಮುಂಬೈ(ಪಿಟಿಐ): ವಾಣಿಜ್ಯ ನಗರಿ ಮುಂಬೈನಲ್ಲಿ 1993ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಅಪರಾಧಕ್ಕಾಗಿ ಐದು ವರ್ಷ ಜೈಲುಶಿಕ್ಷೆ­ಗೊಳಗಾಗಿರುವ   ಬಾಲಿ­ವುಡ್ ನಟ ಸಂಜಯ್‌ ದತ್‌ ಅವರು ಒಂದು ತಿಂಗಳ  ಪೆರೋಲ್‌ ಮೇಲೆ ಪುಣೆಯ ಯೆರವಡಾ ಜೈಲಿನಿಂದ ಶನಿವಾರ ಬಿಡುಗಡೆಯಾದರು.ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ (ಕಾರಾಗೃಹ) ಮೀರನ್‌ ಬೋರ್‌ವಾಂಕರ್‌ ಈ ವಿಷಯವನ್ನು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಪತ್ನಿ ಮಾನ್ಯತಾ ಅನಾರೋಗ್ಯದ ಕಾರಣ ನೀಡಿ ಪೆರೋಲ್‌ ನೀಡಬೇಕು ಎಂದು  ಪುಣೆ ವಿಭಾಗೀಯ ಆಯುಕ್ತ ಪ್ರಭಾಕರ್ ದೇಶ್‌ಮುಖ್‌ ಅವರಿಗೆ  ಸಂಜಯ್‌ ಮನವಿ ಮಾಡಿಕೊಂಡಿದ್ದರು.

ಪ್ರತಿಕ್ರಿಯಿಸಿ (+)