ಕುಮಟಾ: ಕುಮಟಾ- ಸಿದ್ದಾಪುರ ರಸ್ತೆಯ ಸಂತೆಗುಳಿ ಸೇತುವೆ ಶಿಥಿಲಗೊಂಡಿದ್ದು, ಭಾರವಾದ ವಾಹನಗಳ ಓಡಾಟದಿಂದ ಭವಿಷ್ಯದಲ್ಲಿ ಅದು ಕುಸಿದು ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.

ಸೇತುವೆ ಕೆಳಗಿನಿಂದ ನೋಡಿದರೆ ಅದರ ಒಳಭಾಗದ ಆರ್ಸಿಸಿ ಕಿತ್ತು ಹೋಗಿ ಕಬ್ಬಿಣದ ಸಲಾಕೆಗಳೆಲ್ಲ ಹೊರಗೆ ಕಾಣುತ್ತಿವೆ. ಸೇತುವೆಯ ಒಂದು ಕಂಬ ಉದ್ದಕ್ಕೆ ಬಿರುಕು ಬಿಟ್ಟ ಕಾರಣ ಸೇತುವೆ ಮಧ್ಯ ಭಾಗದಲ್ಲಿ ಸುಮಾರು ಅರ್ಧ ಅಡಿಯಷ್ಟು ಕುಸಿದಿದೆ. ಸೇತುವೆ ಮಧ್ಯದ ತಗ್ಗಿನಲ್ಲಿ ನೀರು ನಿಲ್ಲುತ್ತಿರುವುದು ಇದಕ್ಕೆ ನಿದರ್ಶನ.

ಸೇತುವೆಯ ಕಂಬದ ಅಡಿಪಾಯದ ಬಳಿ ಆರ್ಸಿಸಿ ಕಿತ್ತು ಹೋಗಿ ಕಂಬ ನಿರ್ಮಾಣಕ್ಕೆ ಬಳಸಿದ ಕಬ್ಬಿಣದ ಸಲಾಕೆಗಳು ಹೊರ ಬಂದಿವೆ. ವಾಹನಗಳು ಸೇತುವೆಯ ಮೇಲೆ ಅತಿ ವೇಗವಾಗಿ ಸಾಗುವಾಗ ಉಂಟಾಗುವ ಕಂಪನದಿಂದ ಸೇತುವೆಗೆ ಇನ್ನಷ್ಟು ಧಕ್ಕೆ ಉಂಟಾಗುತ್ತಿದೆ. ಈ ಸೇತುವೆ ಕುಸಿದರೆ ರಸ್ತೆಯ ಮೂಲಕ ಕುಮಟಾ, ಸಂತೆಗುಳಿ ನಂತರ ಸಿದ್ದಾಪುರ ವರೆಗಿನ ಸಂಪರ್ಕಕ್ಕೆ ಪರ್ಯಾಯ ಮಾರ್ಗವೇ ಇಲ್ಲದಂತಾಗುತ್ತದೆ. ಈ ಸೇತುವೆ ಕುಸಿಯುವ ಮುನ್ನ ಹೊಸ ಸೇತುವೆ ಇಲ್ಲಿ ನಿರ್ಮಾಣವಾಗುವುದು ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.