ಅರಕಲಗೂಡು ; ಸರ್ಕಾರ ನೀಡುವ ಸವಲತ್ತುಗಳು ನೊಂದವರಿಗೂ ತಲುಪುವಂತೆ ಮಾಹಿತಿ ನೀಡಿ ಎಂದು ಶಾಸಕ ಎ.ಮಂಜು ತಿಳಿಸಿದರು.ಪಟ್ಟಣದ ಶಿಕ್ಷಕರ ಭವನದಲ್ಲಿ ಶನಿವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅತಿವೃಷ್ಟಿಯಿಂದ ಮನೆಗಳು ಕುಸಿದ ಪ್ರಕರಣದಲ್ಲಿ ದುರಸ್ತಿಗಾಗಿ ಸರ್ಕಾರ 1500 ರೂ ಹಣ ನೀಡಿದೆ. ಇದರಿಂದ ದುರಸ್ತಿ ಕಾರ್ಯ ಸಾಧ್ಯವಿಲ್ಲ. ನಿಜವಾಗಿ ಆಗಿರುವ ಹಾನಿ ಕುರಿತು ಪರಿಶೀಲಿಸಿ ಸರ್ಕಾರದ ವತಿಯಿಂದಲೇ ದುರಸ್ತಿ ಮಾಡಿಸಿ ಕೊಡಬೇಕು. ಅದಕ್ಕೆ ತಗಲುವ ವೆಚ್ಚದ ಮೊತ್ತ ನೀಡುವುದು ಅಗತ್ಯ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು ಎಂದು ಹೇಳಿದರು.

ಸಂಪೂರ್ಣ ಮನೆ ಕುಸಿದಿರುವ ಹಾಗೂ ದುರಸ್ತಿಗೊಳಿಸಲು ಸಾಧ್ಯವಾಗದಷ್ಟು ಹಾನಿಯಾಗಿರುವ ಸಂತ್ರಸ್ತರು ವಸತಿ ನೀಡುವಂತೆ ಕೋರಿ ಗ್ರಾ. ಪಂ. ಮೂಲಕ ಅರ್ಜಿ ಸಲ್ಲಿಸಿದಲ್ಲಿ ಅವರಿಗೆ ಆಶ್ರಯ ಮನೆಗಳನ್ನು ಮಂಜೂರು ಮಾಡಿ ಕೊಡುವುದಾಗಿ ಹೇಳಿದರು.

ತಹಶೀಲ್ದಾರ್ ಎಂ.ಕೆ. ಸವಿತ ಮಾತನಾಡಿ, ವಿವಿಧ ಪಿಂಚಿಣಿ ಯೋಜನೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಪ್ರಕರಣಗಳು ಪತ್ತೆಯಾಗಿದ್ದು, ಇದನ್ನು ತನಿಖೆ ನಡೆಸಿ ಸರಿಪಡಿಸುವ ಉದ್ದೇಶದಿಂದ ಹೊಸ ಮಂಜೂರಾತಿಗೆ ಅರ್ಜಿ ಸ್ವೀಕರಿಸದಂತೆ ಸರ್ಕಾರ ಸೂಚನೆ ನೀಡಿದೆ ಎಂದರು.

ವಿವಿಧ ಇಲಾಖೆ ಅಧಿಕಾರಿಗಳು ಇಲಾಖೆಗಳ ವತಿಯಿಂದ ನೀಡುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಸಂಧ್ಯಾ ಸುರಕ್ಷಾ, ವೃದ್ಧಾಪ್ಯ, ಅಂಗವಿಕಲ ಫಲಾನುಭವಿ ಗಳಿಗೆ ಮಂಜೂರಾತಿ ಪತ್ರ ಹಾಗೂ ಅತಿವೃಷ್ಟಿಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಚೆಕ್ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.