ಶುಕ್ರವಾರ, ಮಾರ್ಚ್ 5, 2021
30 °C

ಸಂಭ್ರಮದಿಂದ ನಡೆದ ಪಟ್ಟಲದಮ್ಮ ಸಿಡಿಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಭ್ರಮದಿಂದ ನಡೆದ ಪಟ್ಟಲದಮ್ಮ ಸಿಡಿಹಬ್ಬ

ಮಳವಳ್ಳಿ: ಭಾವೈಕ್ಯತೆಯ ಪ್ರತೀಕವಾದ ಗ್ರಾಮ ದೇವತೆ ಪಟ್ಟಲದಮ್ಮ ಹಾಗೂ ಸಿಡಿಹಬ್ಬ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಿಗ್ಗೆಯವರೆಗೂ ಜನಸಾಗರದ ನಡುವೆ ವಿಜೃಂಭಣೆಯಿಂದ ಶ್ರದ್ಧಾ, ಭಕ್ತಿಯಿಂದ ನೆರವೇರಿತು.ಪಟ್ಟಣದ ದೊಡ್ಡಕೆರೆ ಸಮೀಪ ಇರುವ ಪಟ್ಟಲದಮ್ಮನ ದೇವಾಲಯಕ್ಕೆ ಶುಕ್ರವಾರ ಬೆಳಿಗ್ಗೆಯಿಂದಲೇ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದರು. ಸಂಜೆ ಆಗುತ್ತಿದ್ದಂತೆ ದೇವಾಲಯದ ಹೊರ ಆವರಣದಿಂದಲೂ ಸರತಿ ಸಾಲಿನಲ್ಲಿ ನಿಂತಿದ್ದು ವಿಶೇಷವಾಗಿತ್ತು.ರಾತ್ರಿ 9 ಗಂಟೆಯ ನಂತರ ಪೇಟೆ ಬೀದಿ, ಸಿದ್ದಾರ್ಥನಗರ, ಕೀರ್ತಿನಗರ, ಅಶೋಕನಗರ, ಬಸವಲಿಂಗಪ್ಪನಗರ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಘಟ್ಟ ಹೊತ್ತು ತಮಟೆ ವಾದ್ಯಗಳೊಡನೆ ಮೆರವಣಿಗೆ ಮೂಲಕ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.ನಂತರ ಕೋಟೆ ಬೀದಿಯ ಪ. ಚಿಣ್ಣೇಗೌಡರ ಮನೆಯ ಮುಂದೆ ಸಿದ್ಧಪಡಿಸಿದ್ದ ಸಿಡಿರಣ್ಣ ಉತ್ಸವಕ್ಕೆ ಚಾಲನೆ ನೀಡಿ ಸಾರಂಗಪಾಣಿ, ಗಂಗಾಧರೇಶ್ವರಸ್ವಾಮಿ ದೇವಾಲಯದ ಬೀದಿ, ಕಾಳಮ್ಮನ ದೇವಾಲಯ ಬೀದಿ, ಮೈಸೂರು ರಸ್ತೆ,ಪೇಟೆ ಬೀದಿ, ಗಂಗಾಮತ ಬಡಾವಣೆ, ಸುಲ್ತಾನ್‌ ರಸ್ತೆಯ ಮೂಲಕ ಸಿಡಿರಣ್ಣನನ್ನು ಎಳೆದು ಪಟ್ಟಲದಮ್ಮನ ದೇವಾಲಯದ ಆವರಣಕ್ಕೆ ಶನಿವಾರ ಬೆಳಿಗ್ಗೆ ತಲುಪುತ್ತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತರು ಹಣ್ಣುದವನ ಎಸೆದು ಭಕ್ತಿ ಸಮರ್ಪಿಸಿದರು.

ನಂತರ ಸಂಪ್ರದಾಯದಂತೆ ಕೊಂಡೋತ್ಸವ ನಡೆಯಿತು.

ದೀಪಾಲಂಕಾರ: ಸಿಡಿಹಬ್ಬದ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಗಳನ್ನು ವಿಶೇಷ ವಿದ್ಯುತ್‌ ದೀಪಾಲಂಕಾರಗೊಳಿಸಿದ್ದು ಜಗಮಗಿಸುತ್ತಿತ್ತು. ಅಲ್ಲಲ್ಲಿ ದೇವರ ಭಾವಚಿತ್ರಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಿದ್ದುದು ಸಾರ್ವಜನಿಕರ ಗಮನ ಸೆಳೆಯಿತು.ಬಿಗಿಬಂದೋಬಸ್ತ್‌: ಹೆಚ್ಚು ಜನರು ಭಾಗವಹಿಸುತ್ತಿದ್ದರಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೂಷಣ್‌ ಜಿ. ಬೊರಸೆ, ಹೆಚ್ಚುವರಿ ಎಸ್ಪಿ ಪುಟ್ಟಮಾದಯ್ಯ, ಡಿವೈಎಸ್ಪಿ ಎಚ್‌.ಆರ್‌. ಧರಣೇಂದ್ರ, ಶೋಭಾರಾಣಿ ನೇತೃತ್ವದಲ್ಲಿ ಪಹರೆ ಕಲ್ಪಿಸಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.