ಗುರುವಾರ , ಫೆಬ್ರವರಿ 25, 2021
17 °C
ತಿ. ನರಸೀಪುರ ತಾಲ್ಲೂಕಿನ ಮೂಗೂರಿನ ತ್ರಿಪುರ ಸುಂದರಿ ದೇವಸ್ಥಾನದಲ್ಲಿ ಜನಜಾತ್ರೆ

ಸಂಭ್ರಮದ ಅಮ್ಮನವರ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಭ್ರಮದ ಅಮ್ಮನವರ ರಥೋತ್ಸವ

ತಿ. ನರಸೀಪುರ: ಭಕ್ತ ಸಾಗರದ ಜಯಘೋಷ, ಹಣ್ಣು ಜವನ, ದವಸ ಧಾನ್ಯಗಳ ಸಮರ್ಪಣೆಯ ನಡುವೆ ತಾಲ್ಲೂಕಿನ ಮೂಗೂರು ಗ್ರಾಮದಲ್ಲಿ ಸೋಮವಾರ ತ್ರಿಪುರ ಸುಂದರಿ ಅಮ್ಮನವರ ಮಹಾರಥೋತ್ಸವ ಸಂಭ್ರಮದಿಂದ ನಡೆಯಿತು.ತಾಲ್ಲೂಕಿನ ಮೂಗೂರು ಗ್ರಾಮದಲ್ಲಿರುವ ಪುರಾತನ ಪ್ರಸಿದ್ಧ  ತ್ರಿಪುರ ಸುಂದರಿ ಅಮ್ಮನವರ ಉತ್ಸವ ಮೂರ್ತಿಯನ್ನು ಧಾರ್ಮಿಕ ವಿಧಿವಿಧಾನದಂತೆ ಬಂಡಿ ಬೀದಿಯ ಮಂಟಪದಿಂದ ಮೆರವಣಿಗೆಯಲ್ಲಿ ಕರೆತಂದು ವಿಶೇಷ ಪೂಜೆ ಸಲ್ಲಿಸಿ, ಅಲಂಕೃತಗೊಂಡಿದ್ದ ತೇರಿನ ಸುತ್ತಲೂ ಪ್ರದಕ್ಷಿಣೆ ಹಾಕಿ ಪ್ರತಿಷ್ಠಾಪಿಸಿದ ನಂತರ ರುದ್ರಾಕ್ಷಿ ಮಂಟಪದಲ್ಲಿ ವಿನಾಯಕನ ರಥ ಸಾಗಿದ ಬಳಿಕ ಅಮ್ಮನವರ ಮಹಾರಥೋತ್ಸವ ವಿದ್ಯುಕ್ತವಾಗಿ ಆರಂಭಗೊಂಡಿತು.ತಹಶೀಲ್ದಾರ್ ಆರ್. ಶೂಲದಯ್ಯ ಅವರು ಗ್ರಾಮದ ವಿವಿಧ ಸಮುದಾಯಗಳ ಮುಖಂಡರ ಸಮ್ಮುಖದಲ್ಲಿ ಪ್ರಥಮ ಪೂಜೆಯನ್ನು ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ರಥದ ವೈಭವವನ್ನು ಲಕ್ಷಾಂತರ ಮಂದಿ ಭಕ್ತರು ಕಣ್ತುಂಬಿಕೊಂಡರು. ದೇವಾಲಯದ ಮುಂಭಾಗದಿಂದ ದಕ್ಷಿಣಾಭಿಮುಖವಾಗಿ ಆರಂಭಗೊಂಡ ರಥೋತ್ಸವ ಬಂಡಿ ಬೀದಿಯ ಮೂಲಕ ಸ್ವ ಸ್ಥಾನಕ್ಕೆ ಮರಳಿತು.ಹರಕೆಯನ್ನು ಹೊತ್ತಿದ್ದ ಭಕ್ತರು ಮಜ್ಜಿಗೆ ಪಾನಕ ವಿತರಿಸುತ್ತಿದ್ದು ಬಿಸಿಲಿನಲ್ಲಿ ಬಸವಳಿದವರ ದಣಿವು ನೀಗಿಸಿದರೆ, ಪಲಾವ್, ಮೊಸರನ್ನಗಳ ದಾಸೋಹ ಹಸಿದ ಹೊಟ್ಟೆಯನ್ನು ತುಂಬಿಸಿತು.ಇಂದು ಚಿಗುರು ಕಡಿಯುವುದು:  ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ  ಜ. 26ರ ಮಂಗಳವಾರ(ಇಂದು) ಮದ್ಯಾಹ್ನ ತ್ರಿಪುರ ಸುಂದರಿ ಅಮ್ಮನವರ ಚಿಗುರು ಕಡಿಯುವ ಉತ್ಸವ ನಡೆಯಲಿದೆ. 27ರ ಬುಧವಾರ ಆಳು ಪಲ್ಲಕ್ಕಿ ಉತ್ಸವ ಹಾಗೂ ವೈಮಾಳಿಗೆ ಉತ್ಸವಗಳು ನಡೆಯಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.