ಶುಕ್ರವಾರ, ಮೇ 7, 2021
27 °C

ಸಂಭ್ರಮದ ಜಗಜೀವನರಾಂ ಜಯಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಡಾ. ಬಾಬು ಜಗಜೀವನರಾಂ ಅವರ ಜಯಂತಿಯನ್ನು ನಗರದ ವಿವಿಧೆಡೆ ಗುರುವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಬಿಜೆಪಿ ಕಚೇರಿ: ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ್ ಬೆಳಮಗಿ ಅವರು ಬಾಬು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಮಾಜಿ ಉಪಪ್ರಧಾನ ಮಂತ್ರಿಯಾಗಿದ್ದ ಡಾ. ಬಾಬು ಜಗಜೀವನರಾಮ್ ಅವರು ದೇಶದ ಏಳಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.ದಲಿತರು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಶೈಕ್ಷಣಿಕವಾಗಿ ಮುಂದೆ ಬರಬೇಕು ಸಲಹೆ ಮಾಡಿದರು.

ದಲಿತರ ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕ ಸುಧಾರಣೆಗೆ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಮ್ ಅವರು ಶ್ರಮಿಸಿದ್ದರು ಎಂದು ಅಧ್ಯಕ್ಷತೆ ವಹಿಸಿದ್ದ ಲಿಡ್ಕರ್ ಅಧ್ಯಕ್ಷ ರಾಜೇಂದ್ರ ವರ್ಮಾ ನುಡಿದರು.ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಾಬುವಾಲಿ, ಶಿವರಾಜ ಕುದರೆ, ಜಿಲ್ಲಾ ವಕ್ತಾರ ಬಸವರಾಜ ಪವಾರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಾಬುರಾವ್ ಕಾರಬಾರಿ, ಸದಸ್ಯರಾದ ಡಾ. ಶೈಲೇಂದ್ರ ಬೆಲ್ದಾಳೆ, ಧೂಳಪ್ಪ ಸೂರಂಗೆ, ಕುಶಾಲ ಪಾಟೀಲ್ ಗಾದಗಿ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಎಸ್. ಪಾಟೀಲ್ ಗಾದಗಿ, ಬೀದರ್ ದಕ್ಷಿಣ ಕ್ಷೇತ್ರ ಅಧ್ಯಕ್ಷ ಸುರೇಶ ಮಾಶೆಟ್ಟಿ, ನಗರ ಪ್ರಧಾನ ಕಾರ್ಯದರ್ಶಿ ಶಿವಪುತ್ರ ವೈದ್ಯ, ದೇವೇಂದ್ರ ಎಮ್ಮೆಕರ್ ಉಪಸ್ಥಿತರಿದ್ದರು. ದಯಾನಂದ ವಿಲಾಸಪುರ ಸ್ವಾಗತಿಸಿದರು. ಮೊಗಲಪ್ಪ ವಂದಿಸಿದರು.ಜಿಲ್ಲಾ ಪಂಚಾಯಿತಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಾಬುರಾವ್ ಕಾರಬಾರಿ ಅವರು ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಬಾಬು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಹಸಿರು ಕ್ರಾಂತಿಯ ಹರಿಕಾರ ಬಾಬೂಜಿ ಅವರ ಸೇವೆಯನ್ನು ಸ್ಮರಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೀರ್ ಅನೀಸ್ ಅಹಮ್ಮದ್, ಸದಸ್ಯರಾದ ಕುಶಾಲ ಪಾಟೀಲ್ ಗಾದಗಿ, ಧೂಳಪ್ಪ ಸೂರಂಗೆ, ಸುಗಂಧ ಮಡಿವಾಳಪ್ಪ, ಉಪ ಕಾರ್ಯದರ್ಶಿ ಬಿ.ಕೆ. ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.ಜೆಡಿಎಸ್ ಕಚೇರಿ: ನಗರದ ಜಿಲ್ಲಾ ಜಾತ್ಯಾತೀತ ಜನತಾದಳ ಕಚೇರಿಯಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ನಸೀಮುದ್ದೀನ್ ಪಟೇಲ್ ಅವರು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಪ್ರಮುಖರಾದ ಶ್ರೀಕಾಂತ ಸ್ವಾಮಿ, ಶಾಹೀನ್ ಪಟೇಲ್, ಸೋಮನಾಥ ಕಂದಗೊಳೆ, ಪ್ರಭುರಾವ್ ತರನಳ್ಳಿ, ಶಿವರಾಜ ಬಂಬಳಗಿ, ಸಿದ್ರಾಮಪ್ಪ ಕುಂದೆ, ಶಿವರಾಜ ಕಟಗಿ, ಫಾರೂಕ್ ಅಲಿ, ಜಾಕಿ ಅಹಮ್ಮದ್, ಬಾಬುರಾವ್ ಲದ್ದೆ, ಅಶೋಕ ಕೊಡಗೆ ಉಪಸ್ಥಿತರಿದ್ದರು.ಸರ್ಕಾರಿ ಐ.ಟಿ.ಐ ಕಾಲೇಜು: ನಗರದ ಸರ್ಕಾರಿ ಐ.ಟಿ.ಐ. ಕಾಲೇಜಿನಲ್ಲಿ ಸಂಭ್ರಮದೊಂದಿಗೆ ಜಗಜೀವನರಾಮ್ ಅವರ ಜಯಂತಿ ಆಚರಿಸಲಾಯಿತು. ಜಗಜೀವನರಾಮ್ ಅವರ ವಿಚಾರಗಳು ಇಂದಿನ ಯುವಕರಿಗೆ ಆದರ್ಶವಾಗಿವೆ ಎಂದು ಕಾಲೇಜು ಪ್ರಾಚಾರ್ಯ ಶಿವಶಂಕರ ಟೋಕ್ರೆ ಅಭಿಪ್ರಾಯಪಟ್ಟರು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಎಸ್. ಆರ್. ಪಾಟೀಲ್ ಮಾತನಾಡಿದರು. ಪ್ರಮುಖರಾದ ಶಿವಪುತ್ರಪ್ಪ, ಚಂದ್ರ, ಆಲಂಮಿಯ್ಯೊ, ಸುದರ್ಶನ್, ಸತೀಶಕುಮಾರ, ಸುನೀಲಕುಮಾರ ಉಪಸ್ಥಿತರಿದ್ದರು. ಬಾಬು ಪ್ರಭಾಜಿ ಸ್ವಾಗತಿಸಿದರು. ಯೂಸುಫ್ ಮಿಯ್ಯೊ ನಿರೂಪಿಸಿದರು. ರಮೇಶ ಪೂಜಾರಿ ವಂದಿಸಿದರು.ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ: ನಗರದ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾ ಕಚೇರಿಯಲ್ಲಿ ನಡೆದ ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಡಾ. ಶೈಲೇಂದ್ರ ಬೆಲ್ದಾಳೆ ಮತನಾಡಿದರು.ಸಂಘದ ಜಿಲ್ಲಾ ಅಧ್ಯಕ್ಷ ಕೆ. ರವೀಂದ್ರ ಕೊಳ್ಳೂರು, ಉಪಾಧ್ಯಕ್ಷ ಕೆ. ಗುಂಡಪ್ಪ ತಂಗಾ, ಪ್ರಧಾನ ಕಾರ್ಯದರ್ಶಿ ಬಾಲಾಜಿ ಔರಾದಕರ್, ಜಿಲ್ಲಾ ಸಲಹೆಗಾರ ಧನರಾಜ ದೊಡ್ಡೆ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಪ್ರಭಾವತಿ ತೇಜಮ್ಮ, ಪ್ರಮುಖರಾದ ತುಕಾರಾಮ ನೇಳಗೆ, ಶಂಕರ ಕಾಂಬಳೆ, ಬಾಬು ಮಾಗಳೆ ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.