ಗುರುವಾರ , ಜೂನ್ 17, 2021
29 °C

ಸಂವೇದಿ ಸೂಚ್ಯಂಕ: 286 ಅಂಶ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ):  ಯೂರೋಪ್ ಷೇರುಪೇಟೆಗಳು ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ, ಮತ್ತೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಚಟುವಟಿಕೆ ಹೆಚ್ಚಿದ್ದು, ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ ಬುಧವಾರದ ವಹಿವಾಟಿನಲ್ಲಿ 286 ಅಂಶಗಳಷ್ಟು ಏರಿಕೆ ಕಂಡಿದೆ.ಮಹೀಂದ್ರಾ ಸತ್ಯಂ ಟೆಕ್ ಮಹೀಂದ್ರಾದಲ್ಲಿ ವಿಲೀನಗೊಂಡ ಹಿನ್ನೆಲೆಯಲ್ಲಿ, ಎರಡೂ ಕಂಪೆನಿಗಳ ಷೇರು ದರಗಳು  ಏರಿಕೆ ಕಂಡವು. ರಿಯಾಲ್ಟಿ, ಬ್ಯಾಂಕಿಂಗ್, ಲೋಹ ವಲಯದ ಷೇರುಗಳು ಲಾಭ ಮಾಡಿಕೊಂಡವು. ದಿನದಂತ್ಯಕ್ಕೆ 17,601 ಅಂಶಗಳಿಗೆ ವಹಿವಾಟು ಕೊನೆಗೊಂಡಿತು.ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ ದಿನದ ವಹಿವಾಟಿನಲ್ಲಿ 90 ಅಂಶಗಳಷ್ಟು ಏರಿಕೆ ಕಂಡು 5,364 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು. `ಎಫ್‌ಐಐ~ ಹೂಡಿಕೆದಾರರು ಮಂಗಳವಾರ ಒಟ್ಟು 111 ಕೋಟಿ ಮೊತ್ತದ ಷೇರು ಖರೀದಿಸಿದ್ದಾರೆ. ಬಜೆಟ್ ಹಿನ್ನೆಲೆಯಲ್ಲಿ ಸೂಚ್ಯಂಕ ಇಳಿಕೆ ಕಂಡಿತ್ತು. ಹಣದುಬ್ಬರ ಹೆಚ್ಚಿರುವುದರಿಂದ `ಆರ್‌ಬಿಐ~  ಬಡ್ಡಿ ದರ ಕಡಿತಕ್ಕೆ ಮುಂದಾಗುವುದಿಲ್ಲ ಎನ್ನುವ ಸಂಗತಿ ಹೂಡಿಕೆದಾರರ  ವಿಶ್ವಾಸ ತಗ್ಗಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.