ಭಾನುವಾರ, ಮೇ 16, 2021
24 °C

ಸಂಶಯಗಳಿಗೆ ಕಾರಣವಾದ ಮಾನವ ತಲೆಬುರುಡೆ..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆರೆಕಾಡು (ಮೂಲ್ಕಿ); ಇಲ್ಲಿನ ಮೂಲ್ಕಿ ಠಾಣಾ ವ್ಯಾಪ್ತಿಯ ಕೆರೆಕಾಡು ಎಂಬಲ್ಲಿ ಸೋಮವಾರ ನಿರ್ಜನ ಪ್ರದೇಶದಲ್ಲಿ ಮಾನವ ತಲೆ ಬುರುಡೆ ಪತ್ತೆಯಾಗಿದ್ದು ಹಲವು ಸಂಶಯಗಳಿಗೆ ಕಾರಣವಾಗಿದೆ.



ಕೆರೆಕಾಡು ಬೆಳ್ಳಾಯರುವಿನ ಅರಸುಕೆರೆಯ ಬಳಿಯ ನಿರ್ಜನ ಪ್ರದೇಶದಲ್ಲಿ ಪತ್ತೆಯಾದ ಇದು ಸ್ಥಳೀಯರಲ್ಲಿ ಕುತೂಹಲ ಹುಟ್ಟಿಸಿದೆ. ಮೂಲ್ಕಿ ಪೊಲೀಸರು ತನಿಖೆ ನಡೆಸಿ ಇದರ ದೇಹದ ಭಾಗಕ್ಕಾಗಿ ಸ್ಥಳೀಯರೊಂದಿಗೆ  ಸುತ್ತಮುತ್ತ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ.



ಈ ಪ್ರದೇಶದ ಸುಮಾರು ಎರಡು ಕಿಮೀ ದೂರದಲ್ಲಿ ಸಾರ್ವಜನಿಕ ರುದ್ರಭೂಮಿಯಿದ್ದು ಅಲ್ಲಿಂದ ಅಲೆಮಾರಿ ನಾಯಿಗಳು ಇಲ್ಲಿಗೆ ತಂದು ಹಾಕಿರಬಹುದು ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಅಥವಾ ಇಲ್ಲಿ ಭಾರಿ ಭೂ ವ್ಯವಹಾರ ನಡೆಯುತ್ತಿದ್ದು ಈ ಬುರುಡೆ ಹಾಕಿದ ಜಮೀನು ಮಾರಾಟವಾಗಬಾರದು ಎಂಬ ದುರದ್ದೇಶದಿಂದಲೂ ಇಂಥ ಪ್ರಯತ್ನ ನಡೆಸಿರಬಹುದು ಎಂದು ಪೊಲೀಸರು ಸಂಶಯ ಪಟ್ಟಿದ್ದಾರೆ.



ಈ ಬುರುಡೆಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಬಂದ ನಂತರ ಎಲ್ಲಾ ಸಂಶಯಗಳಿಗೆ ನಿವಾರಣೆ ಆಗಬಹುದು ಎಂದು ಮೂಲ್ಕಿ ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.