ಮಂಡ್ಯ: ಬಹಳ ಉತ್ಸಾಹದಿಂದಲೇ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಆರಂಭಿಸಿದ್ದ `ಸಕ್ಕರೆ ನುಡಿ' ಮಾಸ ಪತ್ರಿಕೆ ಪ್ರಕಟಣೆ ನಿಂತಿದೆ. ಸಾಹಿತ್ಯ ಚಟುವಟಿಕೆಗಳು ಎಲ್ಲರಿಗೂ ಗೊತ್ತಾಗಲಿ ಎಂದು ಆರಂಭಿಸಿದ್ದ ವೆಬ್ಸೈಟ್ ಕೂಡಾ ಕಾಲಕಾಲಕ್ಕೆ ಅಪ್ಡೇಟ್ ಆಗುತ್ತಿಲ್ಲ.

2012ರ ಜೂನ್ನಲ್ಲಿ ಹುಟ್ಟು ಪಡೆದ ಪರಿಷತ್ತಿನ ಮೊದಲು ಕೂಸು `ಸಕ್ಕರೆ ನುಡಿ' ಮಾಸ ಪತ್ರಿಕೆಯು ನಂತರದ ಮೂರ್ನಾಲ್ಕು ಸಂಚಿಕೆಗಳಷ್ಟೇ ಹೊರಬಂದರೆ, ತನ್ನ ಕಾರ್ಯ ಚಟುವಟಿಕೆಗಳನ್ನು ಜಾಗತಿಕವಾಗಿ ಪರಿಚಯಿಸಲು 2013ರ ಜನವರಿ 18ರಂದು ರೂಪಿಸಿದ್ದ `ಅಂತರ್ಜಾಲ ತಾಣ' ಕೂಡ ಅಪ್ಡೇಟ್ ಆಗಿಯೇ ಇಲ್ಲ.

ರಾಜ್ಯದ ಎಲ್ಲ 174 ಕಸಾಪ ತಾಲ್ಲೂಕು ಘಟಕಗಳಲ್ಲದೇ, ಆಯ್ದ ಹಿರಿಯ-ಕಿರಿಯ ಲೇಖಕರಿಗೆ ಪತ್ರಿಕೆ ತಲುಪಿಸುವುದು. ಪರಿಷತ್ತಿನ ಕಾರ್ಯ ಚಟುವಟಿಕೆಗಳ ಜೊತೆಗೆ ಜಿಲ್ಲೆಯ ಸಾಹಿತ್ಯ ಮತ್ತು ಸಂಸ್ಕೃತಿಯ ಸಂಕ್ಷಿಪ್ತ ಪರಿಚಯ ಮಾಡಿಕೊಡುವುದು ಈ ಮಾಸ ಪತ್ರಿಕೆ ಉದ್ದೇಶವಾಗಿದೆ ಎಂದು ಹೇಳಿಕೊಳ್ಳಲಾಗಿತ್ತು.

ಕಲರ್ಫುಲ್ ಆಗಿದ್ದ ಮೊದಲ ಸಂಚಿಕೆಯು, ಎರಡನೇಯ ಮುದ್ರಣದ ವೇಳೆಗೆ ಕಪ್ಪು-ಬಿಳುಪು ಆಯಿತಾದರೂ, ವಿಷಯಗಳ ಆಯ್ಕೆ, ವಿನ್ಯಾಸ, ಗುಣಮಟ್ಟ ಉತ್ತಮವಾಗಿಯೇ ಇತ್ತು. ಪತ್ರಿಕೆ ಹೊರಬಂದಾಗ ಬರಹಗಾರರಿಗೆ ವಿಷಯ ಹಂಚಿಕೊಳ್ಳಲು ಉತ್ತಮ ವೇದಿಕೆಯಾಗುತ್ತದೆ ಎಂದೇ ಭಾವಿಸಲಾಗಿತ್ತು.

ಕಸಾಪ ಘಟಕ ಜಿಲ್ಲೆಯಾದ್ಯಂತ ಆಯಾಯ ತಿಂಗಳು ನಡೆಸಿದ ಕಾರ್ಯಕ್ರಮಗಳ ಸಚಿತ್ರ ವರದಿಯನ್ನೂ ಮಾಸ ಪತ್ರಿಕೆಯಲ್ಲಿ ಪ್ರಕಟಿಸುತ್ತಿದುದ್ದರಿಂದ ಜಿಲ್ಲೆಯಲ್ಲಿ ಸಾಹಿತ್ಯಿಕವಾಗಿ ಏನೆಲ್ಲಾ ಮಾಡುತ್ತಿದೆ ಎಂಬುವುದು ತಿಳಿಯುತ್ತಿತ್ತು. ಎಲೆಮರೆಕಾಯಿಯಂತೆ ಇದ್ದ ಜಿಲ್ಲೆಯ ಅದೆಷ್ಟೋ ಸಾಹಿತ್ಯಿಕ ವಿಷಯಗಳು ಬೆಳಕು ಚೆಲ್ಲಲಿದೆ ಎಂದುಕೊಂಡಿದ್ದ ಪತ್ರಿಕೆ ಹೀಗೆ ಬಂದು, ಹಾಗೇ ಹೊರಟು ಹೋಗಿದ್ದು ಮಾತ್ರ ಸಾಹಿತ್ಯಾಸಕ್ತರಲ್ಲಿ ತೀವ್ರ ನಿರಾಶೆ ಮೂಡಿಸಿದೆ.

`ಸಕ್ಕರೆ ನುಡಿ' ಮುದ್ರಣ ನಿಲ್ಲಿಸಿದ ನಂತರ ಹುಟ್ಟಿದ್ದೇ `ಡಿಡಿಡಿ.ಞಚ್ಞ.ಟ್ಟಜ' ಎನ್ನುವ ಅಂತರ್ಜಾಲ ತಾಣ. ಆಧುನಿಕ ಯುಗದ ಅಗತ್ಯಕ್ಕೆ ತಕ್ಕಂತೆ ರೂಪಿಸಿದ್ದ ಈ ಅಂತರ್ಜಾಲ ತಾಣ ರಾಜ್ಯದಲ್ಲಿನ ಕಸಾಪ ಘಟಕಗಳ ಇತಿಹಾಸದಲ್ಲೇ ಮೊದಲ ಪ್ರಯತ್ನ ಎನ್ನುವ ಹಿರಿಮೆಯನ್ನೂ ಪಡೆದಿತ್ತು.

ಆದರೆ, ಈ ತಾಣವೂ ಕೂಡ ಹತ್ತರಲ್ಲಿ ಒಂದು ಎನ್ನುವಂತೆ ನಿಷ್ಕ್ರೀಯವಾಗಿದೆ. ವೆಬ್ಸೈಟ್ ಆರಂಭಿಸಿದಾಗ, `ಮಾಹಿತಿ ಸೇರ್ಪಡೆಗೊಳಿಸುವ ಕೆಲಸವು ಆರಂಭಿಕ ಹಂತದಲ್ಲಿದ್ದು, ಶೀಘ್ರದಲ್ಲೇ ಮತ್ತಷ್ಟು ಮಾಹಿತಿ ಮತ್ತು ಚಿತ್ರಗಳನ್ನು ಅಡಕಗೊಳಿಸಲಾಗುವುದು. ಪರಿಷತ್ತಿನ ಚಟುವಟಿಕೆಗಳು ಎಲ್ಲೆಡೆ-ಎಲ್ಲರಿಗೂ ಸಿಗಬೇಕು ಎನ್ನುವ ಆಶಯ ಇಟ್ಟುಕೊಂಡು ರೂಪಿಸಲಾಗಿದೆ' ಎಂದು ಪರಿಷತ್ತಿನ ಅಧ್ಯಕ್ಷರು ಹೇಳಿದ್ದರು. ಅದು ನಂತರ ಕಾರ್ಯರೂಪಕ್ಕೇ ಬಂದೇ ಇಲ್ಲ.

ಇದೇ 8 ಮತ್ತು 9ರಂದು ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಕಸಾಪ ಕೃಷ್ಣರಾಜಪೇಟೆ ತಾಲ್ಲೂಕು ಘಟಕದ ಅಂತರ್ಜಾಲ ತಾಣ ಲೋಕಾರ್ಪಣೆ ಆಗುತ್ತಿದೆ. ಅದರ ಕಾರ್ಯರೂಪ ಹೇಗಿರುತ್ತದೆ ಎನ್ನುವುದು ಕೂಡ ಕುತೂಹಲ ಮೂಡಿಸಿದೆ.
ಆರಂಭದಲ್ಲಿದ್ದ ಉತ್ಸಾಹ ಬಳಿಕ ಮರೆಯಾದರೆ ಏನಾಗಬಹುದು ಎನ್ನುವುದಕ್ಕೆ ಪರಿಷತ್ತಿನ ಈ ಎರಡೂ ಮುಖ್ಯ ಕಾರ್ಯಕ್ರಮಗಳೇ ನಿದರ್ಶನ ಎಂದು ಸಾಹಿತಾಸಕ್ತರು ಬೇಸರ ವ್ಯಕ್ತಪಡಿಸುತ್ತಾರೆ.
-ಕೆ. ಚೇತನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.