ಚೆನ್ನೈ (ಪಿಟಿಐ): ತಮ್ಮ ಗುಂಪಿನ ಕೊನೆಯ ಲೀಗ್ ಪಂದ್ಯಗಳಲ್ಲಿ ಭಾರತ ತಂಡದ ಸಚಿನ್ ತೆಂಡೂಲ್ಕರ್ ಮತ್ತು ಆಸ್ಟ್ರೇಲಿಯಾ ತಂಡದ ರಿಕಿ ಪಾಂಟಿಂಗ್ ತೋರಿದ ವರ್ತನೆಗಳು ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಬಹುದೊಡ್ಡ ಚರ್ಚೆಗೆ ನಾಂದಿ ಹಾಡಿದ್ದು, ‘ಹೊರ ನಡೆಯುವ’ ವಿಷಯವಾಗಿ ಇಬ್ಬಗೆಯ ಅಭಿಪ್ರಾಯಗಳು ಕೇಳಿಬಂದಿವೆ.ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರೂ ಸಚಿನ್ ತಾವು ಔಟಾಗಿರುವುದು ಖಚಿತವಾದ ಹಿನ್ನೆಲೆಯಲ್ಲಿ ಪಿಚ್ನಿಂದ ಹೊರ ನಡೆದಿದ್ದರು. ಅದೇ ಪಾಂಟಿಂಗ್, ಪಾಕ್ ಎದುರಿನ ಪಂದ್ಯದಲ್ಲಿ ಔಟಾಗಿದ್ದರೂ ಮೂರನೇ ಅಂಪೈರ್ ತೀರ್ಪು ನೀಡುವವರೆಗೆ ಮೈದಾನದಲ್ಲೇ ಕಾದಿದ್ದರು.

ನೂರನೇ ಶತಕದ ನಿರೀಕ್ಷೆಯಲ್ಲಿರುವ ಸಚಿನ್, ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದಾಗಲೂ ಹೊರ ನಡೆದಾಗ ಕೇವಲ ಎರಡು ರನ್ ಗಳಿಸಿದ್ದರು. ಅವರು ಎದುರಿಸಿದ್ದು ನಾಲ್ಕು ಎಸೆತಗಳನ್ನು ಮಾತ್ರ. ವೇಗಿ ರವಿ ರಾಮ್ಪಾಲ್ ಎಸೆದ ಚೆಂಡು ಸಚಿನ್ ಬ್ಯಾಟ್ ತುದಿಗೆ ಸ್ಪರ್ಶಿಸಿ ಕೀಪರ್ ಡೆವಾನ್ ಥಾಮಸ್ ಕೈಸೇರಿತ್ತು.ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಂಟಿಂಗ್ 19 ರನ್ ಗಳಿಸಿದ್ದಾಗ ಆಫ್ ಸ್ಪಿನ್ನರ್ ಮೊಹಮ್ಮದ್ ಹಫೀಜ್ ಎಸೆತದಲ್ಲಿ ಕಮ್ರಾನ್ ಅಕ್ಮಲ್ಗೆ ಕ್ಯಾಚ್ ನೀಡಿದ್ದರು.

ಫೀಲ್ಡ್ ಅಂಪೈರ್ ಮೇರಿಯಾಸ್ ಎರಾಸ್ಮಸ್ ಮೊದಲು ನಾಟೌಟ್ ಎಂದು ತೀರ್ಪು ನೀಡಿದ್ದರು. ಆದರೆ, ತೀರ್ಪು ಪುನರ್ಪರಿಶೀಲನೆ ಮಾಡಿದಾಗ ಪಾಂಟಿಂಗ್ ಔಟಾಗಿದ್ದಾರೆ ಎಂಬ ನಿರ್ಣಯ ಬಂತು.‘ಚೆಂಡು ಬ್ಯಾಟಿಗೆ ಸವರಿಕೊಂಡೇ ಹೋಗಿರುವುದು ನನಗೆ ಗೊತ್ತಿತ್ತು. ಆದರೆ, ಯಾವಾಗಲೂ ಅಂಪೈರ್ ತೀರ್ಪಿಗೆ ಕಾಯುವುದು ನನ್ನ ಜಾಯಮಾನ. ನನ್ನ ಕ್ರೀಡಾ ಬದುಕಿನ ಉದ್ದಕ್ಕೂ ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದೇನೆ’ ಎಂದು ಪಾಂಟಿಂಗ್ ಹೇಳಿದ್ದರು.

ಇನ್ನೊಂದೆಡೆ ಅಂಪೈರ್ ತೀರ್ಪಿನ ಹೊರತಾಗಿಯೂ ಹೊರನಡೆದ ಸಚಿನ್ ಒಬ್ಬ ನೈಜ ಜಂಟಲ್ಮ್ಯಾನ್ ಎಂದು ವೆಸ್ಟ್ ಇಂಡೀಸ್ ತಂಡದ ನಾಯಕ ಡರೆನ್ ಸಮಿ ಮುಕ್ತಕಂಠದಿಂದ ಪ್ರಶಂಸಿಸಿದ್ದರು. ‘ಈ ವರ್ತನೆ ವ್ಯಕ್ತಿಯ ವ್ಯಕ್ತಿತ್ವವನ್ನು ತೋರಿಸುತ್ತದೆ. ಸಚಿನ್ ಅವರ ಸೊಗಸಾದ ವ್ಯಕ್ತಿತ್ವಕ್ಕೆ ಬೇರೆ ಸಾಕ್ಷಿಯೇ ಬೇಕಾಗಿಲ್ಲ’ ಎಂದು ಅವರು ಹೇಳಿದ್ದರು.ಶತಕ ಗಳಿಸಿ ತಂಡದ ಗೆಲುವಿಗೆ ಕಾರಣವಾಗಿದ್ದ ಯುವರಾಜ್ ಸಿಂಗ್ಗೆ ತಮ್ಮ ತಂಡದ ಮಾಂತ್ರಿಕ ಆಟಗಾರನ ವರ್ತನೆ ಯಾವುದೇ ಸೋಜಿಗವನ್ನು ತಂದಿಲ್ಲ. ‘ಸಚಿನ್ ವರ್ತನೆಯಿಂದ ನನಗೇನೂ ಆಶ್ಚರ್ಯವಾಗಿಲ್ಲ. ಅವರಿಗೆ ಹೊರಹೋಗುವುದೇ ಸೂಕ್ತ ಎನಿಸಿದ್ದರಿಂದ ಹಾಗೆ ಮಾಡಿದರು’ ಎಂದು ಹೇಳಿದ್ದಾರೆ.

ಶ್ರೀಲಂಕಾ ತಂಡದ ಉಪ ನಾಯಕ ಮಾಹೇಲ ಜಯವರ್ಧನೆ ಮತ್ತು ನ್ಯೂಜಿಲೆಂಡ್ ಆಫ್ ಸ್ಪಿನ್ನರ್ ನಥಾನ್ ಮೆಕ್ಲಮ್ ನಡುವೆಯೂ ಇಂತಹದ್ದೇ ‘ಕ್ಲೀನ್’ ಕ್ಯಾಚ್ ಸಮಸ್ಯೆ ಎದುರಾಗಿತ್ತು ಎನ್ನುವುದನ್ನು ಸ್ಮರಿಸಬಹುದು. ಜಯವರ್ಧನೆ ಬ್ಯಾಟ್ನಿಂದ ತೂರಿಬಂದ ಚೆಂಡನ್ನು ಮೆಕ್ಲಮ್ ಡೈವ್ ಹೊಡೆದು ಅದ್ಭುತವಾಗಿ ಒಂದೇ ಕೈಯಲ್ಲಿ ಹಿಡಿದಿದ್ದರು. ಟಿ.ವಿ. ಅಂಪೈರ್ ಅಮಿಶ್ ಸಾಹೇಬಾಗೆ ಅದನ್ನು ಪರಿಶೀಲಿಸುವ ಮನವಿ ಬಂದಾಗ ಅವರು ನಾಟೌಟ್ ಎಂಬ ತೀರ್ಪು ನೀಡಿದ್ದರು.

ಫೀಲ್ಡರ್ ಜೊತೆ ಸಮಾಲೋಚಿಸಿ ಬ್ಯಾಟ್ಸ್ಮನ್ ನಿರ್ಧಾರ ಕೈಗೊಳ್ಳುವುದು ಪರಿಸ್ಥಿತಿಯನ್ನು ತಿಳಿಗೊಳಿಸುತ್ತದೆ ಎಂದು ನ್ಯೂಜಿಲೆಂಡ್ ತಂಡದ ಹಂಗಾಮಿ ನಾಯಕ ರಾಸ್ ಟೇಲರ್ ಹೇಳಿದ್ದಾರೆ. ‘ಒಂದು ವೇಳೆ ಕ್ಲೀನ್ ಕ್ಯಾಚ್ ಆಗಿದ್ದರೆ ನಾನು ಆಗಲೇ ಹೊರಹೋಗುತ್ತಿದ್ದೆ. ಆದರೆ, ಅದು 50-50 ಅವಕಾಶದ ಕ್ಯಾಚ್ ಆಗಿತ್ತು. ಹೀಗಾಗಿ ಟಿವಿ ಅಂಪೈರ್ ತೀರ್ಪಿಗಾಗಿ ಕಾಯ್ದೆ’ ಎಂದು ಜಯವರ್ಧನೆ ತಿಳಿಸಿದ್ದಾರೆ.ಔಟಾಗಿದ್ದು ಸ್ಪಷ್ಟವಾದ ಕ್ಷಣ ಬ್ಯಾಟ್ಸ್ಮನ್ ನಿರ್ಗಮಿಸಿದರೆ ಅದರಿಂದ ಆಟಕ್ಕೆ ಬಲ ಬರುತ್ತದೆ’ ಎಂದು ಪಾಕಿಸ್ತಾನ ತಂಡದ ಕೋಚ್ ವಕಾರ್ ಯೂನಿಸ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.