ಶಿಕಾರಿಪುರ: ಸಣ್ಣ, ಅತಿಸಣ್ಣ ರೈತರಿಗೆ ನೇರವಾಗಿ ಹಣ ನೀಡುವ ಯೋಜನೆಗೆ ಜಿಲ್ಲೆಯಲ್ಲಿ ಕೂಡಲೇ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.ಪಟ್ಟಣದಲ್ಲಿ ಶನಿವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಯೋಜನೆಗಾಗಿ ಉದ್ದೇಶಿತ ಫಾರಂ ನಮೂನೆಯನ್ನು ಇನ್ನು ಕೆಲದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಪ್ರತಿ ತಾಲ್ಲೂಕಿಗೆ 5ಸಾವಿರ ಫಲಾನುಭವಿಗಳ ಆಯ್ಕೆ ಮಾಡಬೇಕಿದ್ದು, ಪ್ರತಿ ಎಕರೆಗೆ 5ಸಾವಿರದಂತೆ ಗರಿಷ್ಠ 2ಎಕರೆಗೆ ಅನುದಾನ ನೀಡಲಾಗುತ್ತದೆ ಎಂದರು.

ರೈತರಿಂದ ಪಹಣಿ, ಭಾವಚಿತ್ರ, ಅರ್ಜಿಫಾರಂ ಪಡೆದು, ರೈತನೊಂದಿಗೆ ಯಾವ ಬೆಳೆ ಬೆಳೆಯಬೇಕು ಎನ್ನುವ ಒಪ್ಪಂದ ಮಾಡಿಕೊಂಡ ನಂತರ ಮೊದಲ ಕಂತಾಗಿ ಅರ್ಧ ಹಣ ನೀಡಲಾಗುತ್ತದೆ. ಮೂರು ತಿಂಗಳ ನಂತರ ಇನ್ನುಳಿದ ಕ್ಷೇತ್ರದ ಸಮೀಕ್ಷೆ ನಡೆಸಿದ ನಂತರ ನೀಡಲಾಗುವುದು. ಒಪ್ಪಂದಂತೆ ಬೆಳೆ ಬೆಳೆಯದ ರೈತನ ವಿರುದ್ಧ ಕಠಿಣ ಕ್ರಮವಾಗಿ ಮೂರು ವರ್ಷಗಳ ಕಾಲ ಯಾವುದೇ ಸರ್ಕಾರಿ ಸೌಲಭ್ಯ ಸಿಗದಂತೆ ಮಾಡಲಾಗುವುದು ಎಂದರು.

ತಾಲ್ಲೂಕಿನಲ್ಲಿ ಕೇರಳದಿಂದ ಆಗಮಿಸಿರುವ ರೈತರು ಶುಂಠಿ ಬೆಳೆಯನ್ನು ವ್ಯಾಪಕವಾಗಿ ಬೆಳೆಯುತ್ತಿದ್ದಾರೆ, ಇದಕ್ಕಾಗಿ ಅಕ್ರಮ ವಿದ್ಯುತ್, ಬೋರ್ವೆಲ್ ಸಂಪರ್ಕ ಪಡೆಯುತ್ತಿದ್ದು ಇದನ್ನು ನಿಯಂತ್ರಿಸಬೇಕು. ಕೇರಳದಲ್ಲಿ ನಿಷೇಧಿಸಿರುವ ರಾಸಾಯನಿಕ, ಔಷಧಿ ಬಳಕೆ ಮಾಡುವ ವಿರುದ್ಧ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಆದೇಶಿಸಿದರು.

ಪರಿಶಿಷ್ಟ ಜಾತಿ, ಪಂಗಡದ ಕಾಲೊನಿ ಅಭಿವೃದ್ಧಿ ಕಾರ್ಯಕ್ರಮವೂ ಜಿಲ್ಲೆಯಲ್ಲಿ ವೇಗವಾಗಿ ಪೂರ್ಣಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು. ಬಜೆಟ್ ಕಾರ್ಯಕ್ರಮ ಏಪ್ರಿಲ್ 1ರಿಂದಲೇ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಿವಮೊಗ್ಗ ಹಾನಗಲ್ವರೆಗಿನ ರಸ್ತೆ ಅಭಿವೃದ್ಧಿಗಾಗಿ ಟೆಂಡರ್ ಕರೆದಿದ್ದು, ಈವರೆಗೆ ಭೂಸ್ವಾಧೀನ ಪ್ರಕ್ರಿಯೇ ನಡೆಸಿಲ್ಲ, ಇದರಿಂದಾಗಿ ಯೋಜನೆ ವಿಳಂಬವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪೊನ್ನುರಾಜ್ ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು.

ತಾಲ್ಲೂಕಿನಲ್ಲಿ ` 38ಕೋಟಿ ಅಂದಾಜು ವೆಚ್ಚದ ಕಲ್ಲೊಡ್ಡು ನೀರಾವರಿ ಯೋಜನೆಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.

ಪಟ್ಟಣದ ಕಚೇರಿ ಸಂಕೀರ್ಣ ಕಟ್ಟಡ, ಶಿರಾಳ ಕೊಪ್ಪದ ಪ್ರವಾಸಿ ಮಂದಿರ, ಐಟಿಐ ಕಾಲೇಜು, ಅಲ್ಲಮಪ್ರಭು ರಂಗಮಂದಿರ, ನಬಾರ್ಡ್ ರಸ್ತೆಗಳು, ಸುವರ್ಣ ಗ್ರಾಮ ಕಾಮಗಾರಿ ಸೇರಿದಂತೆ ಹಲವಾರು ಕಾಮಗಾರಿಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಯಿತು.

ಅಧಿಕಾರಿಗಳು ಎಲ್ಲ ಕಾಮಗಾರಿಗಳಿಗೆ ಸಮಜಾಯಿಷಿ ನೀಡಿದರಲ್ಲದೇ, ತಿಂಗಳ ಅಂತ್ಯಕ್ಕೆ ಮುಗಿಯುತ್ತದೆ, ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳುತ್ತದೆ. ಕಾಮಗಾರಿ ಅಂತಿಮ ಹಂತದಲ್ಲಿದೆ ಎನ್ನುವ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.