ಭಾನುವಾರ, ಮೇ 16, 2021
24 °C

ಸಣ್ಣ ವಿಷಯಕ್ಕೆ ಮಹತ್ವ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಬಗ್ಗೆ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ ಎಸ್. ಮಂಚಯ್ಯ ಅವರ ಲೇಖನ (ಸಂಗತ ಏ. 2) ಓದಿದ ಮೇಲೆ ಜಿಜ್ಞಾಸೆ ಮೂಡಿತು. ಲೇಖಕರು ಶ್ರೀಗಳ ಜತೆಯಲ್ಲಿ ಎಂದೋ ಆಡಿದ ಮಾತುಗಳನ್ನು ಈಗ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ.ಲೇಖಕರು ಗುರುತಿಸಿರುವ ಲೋಪಗಳಲ್ಲಿ ಶ್ರೀಗಳ ಪ್ರತ್ಯಕ್ಷ ಅಥವಾ ಪರೋಕ್ಷ ಪಾತ್ರ ಇದ್ದಿರಬಹುದು. ಅಂದ ಮಾತ್ರಕ್ಕೆ ಅವರ ಇತರ ಆದರ್ಶಗಳನ್ನು ಗೌಣವಾಗಿ ಕಾಣುವುದು ಸರಿಯಲ್ಲ. ಶ್ರೀಗಳು ಈ ಇಳಿವಯಸ್ಸಿನಲ್ಲೂ ಮಾಡುತ್ತಿರುವ ಸಮಾಜ ಸೇವೆ ಮತ್ತು ಕಾಯಕಗಳು ಸರ್ವಕಾಲಿಕ ಆದರ್ಶವಲ್ಲವೇ?ಬಸವಣ್ಣನವರ `ಕಾಯಕ~ ಪರಿಕಲ್ಪನೆಯನ್ನು ಅಕ್ಷರಶಃ ಸಾಕಾರಗೊಳಿಸಿರುವ ಶ್ರೀಗಳು ಸಮಾಜದ ಎಲ್ಲ ವರ್ಗದ ಜನರ ಶ್ರೇಯಸ್ಸಿಗೆ ತಮ್ಮ ಬದುಕನ್ನೇ ಮೀಸಲಿಟ್ಟಿದ್ದಾರೆ. ಎಷ್ಟೋ ವರ್ಷಗಳ ಹಿಂದಿನ ಒಂದು ಸಣ್ಣ ವಿಷಯವನ್ನು ಈಗ ಕೆದಕಿ ಅವರ ಸಾಧನೆಗಳ ಬಗ್ಗೆ ಗೊಂದಲ ಮೂಡಿಸುವುದು ಸರಿಯಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.