ಬೆಂಗಳೂರು: ಕಾಂಗ್ರೆಸ್ಸಿನ ಕೆಲವು ಮುಖಂಡರು ಎನ್. ಧರ್ಮಸಿಂಗ್ ಅವರ ವಿರುದ್ಧ ಅಪಪ್ರಚಾರ ನಡೆಸಿದ ಮಾದರಿಯಲ್ಲೇ ಬಿಜೆಪಿಯ ಕೆಲವರು ಡಿ.ವಿ. ಸದಾನಂದ ಗೌಡರ ವಿರುದ್ಧ ಸುಳ್ಳು ಪ್ರಚಾರ ನಡೆಸಿ, ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವಂತೆ ಮಾಡಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಟೀಕಿಸಿದರು.

`ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ನನ್ನ ಅಣತಿಯಂತೆ ಕಡತಗಳಿಗೆ ಸಹಿ ಮಾಡುತ್ತಾರೆ ಎಂದು ಕಾಂಗ್ರೆಸ್ಸಿನ ಕೆಲವು ಮುಖಂಡರು ಪಕ್ಷದ ವರಿಷ್ಠರ ವಲಯದಲ್ಲಿ ಅಪಪ್ರಚಾರ ನಡೆಸಿದ್ದರು. ಇದೇ ಮಾದರಿ ಅನುಸರಿಸಿರುವ ಬಿಜೆಪಿಯ ಕೆಲವು ಪ್ರಮುಖರು, ಸದಾನಂದ ಗೌಡರು ನನ್ನ ಮಾತಿನಂತೆ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಅಪಪ್ರಚಾರ ನಡೆಸಿ ಅವರನ್ನು ಬಲಿಪಶು ಮಾಡಿದ್ದಾರೆ~ ಎಂದು ದೇವೇಗೌಡರು ಇಲ್ಲಿನ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

`ಏಳು ತಿಂಗಳಿನಿಂದ ನನ್ನ ಹಾಗೂ ಸದಾನಂದ ಗೌಡರ ನಡುವೆ ಯಾವುದೇ ಮಾತುಕತೆ ನಡೆದಿಲ್ಲ. ದೂರವಾಣಿ ಮೂಲಕವೂ ನಾನು ಅವರೊಂದಿಗೆ ಮಾತನಾಡಿಲ್ಲ~ ಎಂದು ಸ್ಪಷ್ಟಪಡಿಸಿದರು. `ಕಪ್ಪುಹಣದ ವಿರುದ್ಧ ರಾಷ್ಟ್ರವ್ಯಾಪಿ ಹೋರಾಟ ನಡೆಸುವ ಎಲ್.ಕೆ. ಅಡ್ವಾಣಿ ಅವರಂಥ ಹಿರಿಯ ನಾಯಕರೇ, ಚೆಕ್ ಮೂಲಕ ಅನುಮಾನಾಸ್ಪದವಾಗಿ ಹಣ ಪಡೆದುಕೊಂಡ ವ್ಯಕ್ತಿಯ ಒತ್ತಡ ತಂತ್ರಕ್ಕೆ ಮಣಿದಿದ್ದಾರೆ~ ಎಂದು ಛೇಡಿಸಿದರು.

`ಎಲ್ಲವನ್ನೂ ವಿವರಿಸುವೆ~: `ನನ್ನನ್ನು ಲಿಂಗಾಯತ, ಬ್ರಾಹ್ಮಣ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ನಾನು ಪಕ್ಷವನ್ನು ಒಡೆಯುವ ವ್ಯಕ್ತಿ ಎಂದೂ ಕೆಲವರು ಅಪಪ್ರಚಾರ ನಡೆಸಿದರು. ನನ್ನ ಆತ್ಮಕಥೆಯಲ್ಲಿ ಈ ಎಲ್ಲ ಆರೋಪಗಳ ಕುರಿತು ವಿವರಣೆ ನೀಡುತ್ತೇನೆ. ನನ್ನ ಪುತ್ರರು ಎಲ್ಲಿ ಎಡವಿದ್ದಾರೆ ಎಂಬುದನ್ನೂ ವಿವರಿಸುತ್ತೇನೆ~ ಎಂದರು.

`ವಚನಭ್ರಷ್ಟ ಅಲ್ಲ~: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ, ತಮ್ಮ ಅವಧಿ ಮುಗಿದ ನಂತರ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡದೆ ವಚನ ಭ್ರಷ್ಟರಾದರು ಎಂದು ಬಿಂಬಿಸಲಾಗಿದೆ. ಆದರೆ, ಅಧಿಕಾರ ಹಸ್ತಾಂತರಕ್ಕೆ ಅಗತ್ಯವಾಗಿದ್ದ ಒಪ್ಪಂದವೊಂದಕ್ಕೆ ಸಹಿ ಹಾಕಲು ಬಿಜೆಪಿ ಮುಖಂಡರು ಮುಂದೆ ಬಾರದ ಕಾರಣ ಅಧಿಕಾರ ಹಸ್ತಾಂತರ ನಡೆಯಲಿಲ್ಲ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.