ಶುಕ್ರವಾರ, ಮೇ 27, 2022
21 °C

ಸದೃಢ ಸಮಾಜ ನಿರ್ಮಾಣಕ್ಕೆ ಯೋಗ ಅವಶ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾದಾಮಿ: ಸದೃಢ ಸಮಾಜ ನಿರ್ಮಾಣಕ್ಕೆ ಯುವಕರ ಪಡೆ ಅವಶ್ಯ. ದೃಢ ಚಿತ್ತಕ್ಕೆ ಯೋಗ ಅಭ್ಯಾಸ ಪ್ರಮುಖವಾಗಿದೆ. ಈ ಯೋಗ ಸಾಧನೆಯನ್ನು ಹಾನಗಲ್ ಕುಮಾರ ಶಿವಯೋಗಿಗಳು ಶತಮಾನದ ಹಿಂದೆಯೇ ಆರಂಭಿಸಿದ್ದರು ಎಂದು ಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷ ಸಂಗನಬಸವ ಸ್ವಾಮೀಜಿ ಹೇಳಿದರು.ಅವರು ಶಿವಯೋಗಮಂದಿರದಲ್ಲಿ ಜಾತ್ರಾ ಮಹೋತ್ಸವ ಹಾಗೂ ಕುಮಾರ ಶಿವಯೋಗಿಗಳ 81ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಜರುಗಿದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.ಮಠಗಳಿಂದ ಸಮಾಜದ ಸುಧಾರಣೆಯಾಗಬೇಕು. ಸ್ವಾಮಿಗಳಿಗೆ ಸದೃಢವಾದ ಆರೋಗ್ಯ ಅವಶ್ಯವೆಂದು ಅರಿತ ಕುಮಾರ ಶಿವಯೋಗಗಳು ಶಿವಯೋಗಮಂದಿರದ ವಟುಗಳಿಗೆ ಯೋಗ ಸಾಧನೆಯನ್ನು ಕಲಿಸುತ್ತಿದ್ದರು ಎಂದರು.ಶಿವಯೋಗಮಂದಿರ ಸಂಸ್ಥೆಯನ್ನು ಆರಂಭಿಸಿ ವೀರಶೈವ ಧರ್ಮದ ಜಾಗೃತಿ ಮಾಡಿದ ಕೀರ್ತಿಯು ಹಾನಗಲ್ ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆಂದು ಕೋಡಿಮಠದ ಹಾರನಹಳ್ಳಿ ಶಿವಾನಂದ ಸ್ವಾಮೀಜಿ ಹೇಳಿದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ರಂಗಭೂಮಿ ಕಲಾವಿದೆ ಗೀತಾರಾಣಿ ಚಿಮಲ ಅವರನ್ನು ಸನ್ಮಾನಿಸಲಾಯಿತು.ಯೋಗ ಶಿಕ್ಷಕ ಗುರುಮಹಾಂತೇಶ ಹಿರೇಮಠ ಮಾರ್ಗದರ್ಶನದಲ್ಲಿ ಶಿವಯೋಗಮಂದಿರ ಸಂಸ್ಥೆಯ ವಟುಗಳಿಂದ ಆಕರ್ಷಕ ಯೋಗ ಸಾಧನೆಯನ್ನು ಪ್ರದರ್ಶಿಸಿದರು. ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಎಂ.ಬಸವರಾಜ ಸ್ವಾಗತಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.