ಮಿತಿಮೀರಿದ ಸನ್ಮಾನ ಸಮಾರಂಭಗಳು, ‘ಜ್ಞಾನಪೀಠ’ ಪ್ರಶಸ್ತಿಯ ಹೆಸರಿನಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಮಾಡಿಸಿಕೊಳ್ಳುವುದು ನನಗೆ ಇಷ್ಟವಿಲ್ಲಎಂದು ಹೇಳಿದ ಗಿರೀಶ್ ಕಾರ್ನಾಡ್ರ ಮಾತುಗಳು (ಪ್ರ.ವಾ. ಡಿ. 17) ನಿಜವಾಗಿಯೂ ನುಡಿಮುತ್ತುಗಳು. ‘ಸನ್ಮಾನವೆಂಬುದು ಸರ್ಕಸ್ನಂತಾಗಿದೆ’ ಎಂಬ ಅವರ ಮಾತಂತೂ ನೂರಕ್ಕೆ ನೂರರಷ್ಟು ಸತ್ಯ.

ಇಂಥ ಆದರ್ಶವನ್ನು ಘನತೆವೆತ್ತ ವ್ಯಕ್ತಿಗಳೂ ಪಾಲಿಸಲಿ. ಇಷ್ಟಕ್ಕೂ ಈ ಸನ್ಮಾನಗಳ ಏರ್ಪಾಟು ಕೆಲ ವ್ಯಕ್ತಿಗಳಿಗೆ, ಸಂಘಗಳಿಗೆ ನೆಪ ಅಷ್ಟೆ. ಹಾಗೆ ಆಯೋಜಿಸುವ ಉದ್ದೇಶ ತಮ್ಮ ಹೆಚ್ಚುಗಾರಿಕೆ ಮೆರೆಯಲು, ಅಥವಾ ತಮ್ಮ ಜಾತಿಯನ್ನು ಮೆರೆಸಲು ಇಲ್ಲವೇ ತಮಗಾಗದ ವ್ಯಕ್ತಿಗಳ ಅಥವಾ ಜಾತಿಗಳ ಹೀಯಾಳಿಕೆಗಳಿಗೆ (ಸನ್ಮಾನ ಸಮಾರಂಭಕ್ಕೆ ಸಂಬಂಧಪಡದಿದ್ದರೂ) ಮತ್ತು ಪತ್ರಿಕೆ ಗಳಲ್ಲಿ ಮಿಂಚುವುದಕ್ಕೇ ಆಗಿರುತ್ತದೆ.
–ಗೌರಿಬಿದನೂರು ರಂಗಪ್ಪ, ಬೆಂಗಳೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.