ಗುರುವಾರ , ಜನವರಿ 23, 2020
28 °C

ಸಮಕಾಲೀನ ಹಂಗೇರಿಯ ದೃಶ್ಯಕಲೆಯ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಹಂಗೇರಿ ದೇಶ ಮತ್ತು ಭಾರತದ ನಡುವಣ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರೀಯ ಆಧುನಿಕ ಕಲಾಕೇಂದ್ರದಲ್ಲಿ ಸಮಕಾಲೀನ ಹಂಗೇರಿಯ ದೃಶ್ಯಕಲೆಯ ಪ್ರದರ್ಶನ ವನ್ನು ಏರ್ಪಡಿಸಲಾಗಿದೆ’ ಎಂದು ಕಲಾಕೇಂದ್ರದ ನಿರ್ದೇಶಕ ಕೆ.ಜಿ.ಕುಮಾರ್‌ ಹೇಳಿದರು.ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯದಲ್ಲಿ (ಎನ್‌ಜಿಎಂಎ), ಸಮಕಾಲೀನ ಹಂಗೇರಿ ಕಲೆಗಳಿಂದ ಸಂಗ್ರಹಿತ ಕಲಾ ಪ್ರದರ್ಶನದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.‘ಫ್ರಂ ಆರ್ಗ್ಯಾನಿಕ್‌ ಫಾರ್ಮ್ಸ್‌ ಟು ಲೈಟ್‌ ಆರ್ಟ್‌ ಶೀರ್ಷಿಕೆಯ ಈ ಪ್ರದರ್ಶನವು 40 ಸಮಕಾಲೀನ ಹಂಗೇರಿಯ ಕಲಾವಿದರ ಒಟ್ಟು 90 ಕೃತಿಗಳು ಪ್ರದರ್ಶನದಲ್ಲಿವೆ. ಈ ಪ್ರದರ್ಶನದಲ್ಲಿ ಜೈವಿಕ ಕಲೆ, ಆಕಾರ ರಹಿತ ಕೃತಿಗಳು, ಬೆಳಕಿನ ಕೃತಿಗಳು, ಮುದ್ರಣ ಕಲೆ, ಶಿಲ್ಪಗಳು, ಜಿಯಾಮಿತ್ರಿ ಕಲೆ ಮತ್ತು ಆಕಾರ ಪೂರ್ಣ ಕೃತಿಗಳು ಪ್ರದರ್ಶನದಲ್ಲಿವೆ’ ಎಂದರು.‘ಕಲೆ ಮತ್ತು ವಿಜ್ಞಾನ ಬೇರೆ ಬೇರೆ ಎಂದು ಭಾವಿಸಲಾಗುತ್ತಿದೆ. ಆದರೆ, ಈ ಪ್ರದರ್ಶನದಲ್ಲಿ ಕಲೆ ಮತ್ತು ವಿಜ್ಞಾನಗಳ  ಸಮ್ಮಿಲನ ಅಪೂರ್ವವಾಗಿದೆ. ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನದ ಬಿಡಿಸಲಾಗದ ಒಳಸಂಬಂಧವನ್ನು ತೆರೆದಿಡುತ್ತದೆ’ ಎಂದರು.‘ಈ ಪ್ರದರ್ಶನವು ಸಂಪ್ರದಾಯ ಮತ್ತು ಅನ್ವೇ ಷಣೆಗಳ ನಡುವಣ ಒಳಸಂಬಂಧವನ್ನು ಅನಾವರಣ ಗೊಳಿಸಲಿದೆ. ವಿಜ್ಞಾನ, ಕಲೆ, ತಂತ್ರಜ್ಞಾನಗಳ ಸಮ್ಮಿ ಲನದ ಪ್ರಯೋಗದಲ್ಲಿ ಈ ಪ್ರದರ್ಶನವು ಪ್ರಮುಖ ಪಾತ್ರವನ್ನು ವಹಿಸಲಿದೆ’ ಎಂದು ಹೇಳಿದರು.ಹಂಗೇರಿಯನ್‌ ಅಕಾಡೆಮಿ ಆಫ್‌ ಆರ್ಟ್ಸ್‌ ಉಪಾಧ್ಯಕ್ಷ ಅತಿಲ ಸಾಯಿ, ಬಲಸ್ಸಿ ಇನ್‌ಸ್ಟಿಟ್ಯೂಟ್‌ ಹಂಗೇರಿಯ ಮಾಹಿತಿ ಹಾಗೂ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ ತಿಬೋರ್‌ ಕೊವಾಕ್ಸ್‌ ಇದ್ದರು. ಪ್ರದರ್ಶನ ಡಿ.18 ರಿಂದ ಜನವರಿ 12 ರವರೆಗೆ ಬೆಳಿಗ್ಗೆ 11ರಿಂದ ಸಂಜೆ 5 ರವರೆಗೆ ಇರಲಿದೆ. ಪ್ರವೇಶ ಉಚಿತವಾಗಿದೆ.

ಪ್ರತಿಕ್ರಿಯಿಸಿ (+)