ಮಡೆ ಮಡೆ ಸ್ನಾನ ಸಂಪ್ರದಾಯ, ಸ್ವಾತಂತ್ರ್ಯಪೂರ್ವದ ‘ಸತಿ ಸಹಗಮನ’ ಪದ್ಧತಿಯಂಥ ಕ್ರೂರ ಆಚರಣೆ ಅಲ್ಲ. ಇದು ಒಂದು ವರ್ಗದ ಭಕ್ತ ಜನರ ಶ್ರದ್ಧಾಚರಣೆಯಂತೂ ಹೌದು. ಅಂತಹ ಭಕ್ತರನ್ನು ಒಂದೆಡೆ ಸೇರಿಸಿ ಅವರಲ್ಲಿ ಜಾಗೃತಿಯನ್ನುಂಟು ಮಾಡಿ ಅವರ ಮನ ಒಲಿಸುವ (ಕೌನ್ಸೆಲಿಂಗ್), ಪ್ರಯತ್ನ ಸಾಗಬೇಕಾಗಿದೆ. ಅದು ಬಿಟ್ಟು ಬಲ ಪ್ರಯೋಗ, ಜೈಲು ಶಿಕ್ಷೆ, ಮರಣದಂಡನೆ ಎಂಬಂತಹ ಬಿರುನುಡಿಗಳನ್ನಾಡುವುದು ಸಮಸ್ಯೆಯನ್ನು ಇನ್ನಷ್ಟು ಕಗ್ಗಂಟಾಗಿಸುತ್ತದೆ.

ಮಡೆ ಮಡೆ ಸ್ನಾನ ವಿರುದ್ಧ ಟೊಂಕ ಕಟ್ಟಿರುವ ಪ್ರಗತಿಪರರು, ಸಮಾಜೋದ್ಧಾರಕರು ತಮ್ಮ ಶ್ರಮವನ್ನು ಸಮಾಜದ ಇನ್ನುಳಿದ ಅನಿಷ್ಟಗಳೆನಿಸಿದ ಧೂಮಪಾನ ಹಾಗೂ ಬಡ ಕುಟುಂಬಗಳಿಗೆ ಮಾರಕವಾದ ಮದ್ಯಪಾನ ಪಿಡುಗನ್ನು ತೊಲಗಿಸುವತ್ತ ಯಾಕೆ ಕೇಂದ್ರೀಕರಿಸಬಾರದು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.