ಸಮಾಜ ಕಲ್ಯಾಣಕ್ಕಾಗಿ ರ್ಯಾಲಿ

ಹದಿನಾರು ಸೈಕ್ಲಿಸ್ಟ್ಗಳು ಮತ್ತು 26 ಮೋಟಾರ್ಸೈಕ್ಲಿಸ್ಟ್ಗಳು ಸೇರಿಕೊಂಡು ಒಂದು ವಿಶಿಷ್ಟ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ಬೆಂಗಳೂರಿನಿಂದ ಗೋವಾಗೆ ಒಂಬತ್ತು ದಿನಗಳಲ್ಲಿ ಪ್ರಯಾಣಿಸುವ ಈ ಯೋಜನೆ ಗ್ರಾಮೀಣ ಜನರ ಪರಿಸ್ಥಿತಿಯನ್ನು ಉತ್ತಮಗೊಳಿಸುವ ಕಲ್ಯಾಣ ಕಾರ್ಯಕ್ರಮಗಳ ಕುರಿತು ಅರಿವು ಪಡೆಯುವ ಉದ್ದೇಶವನ್ನು ಹೊಂದಿದೆ.
ಈ ರ್ಯಾಲಿಗೆ ಬಸವನಗುಡಿಯ ಶಾಸಕ ರವಿ ಸುಬ್ರಹ್ಮಣ್ಯ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮತ್ತು ನಟ ಅನಿರುದ್ಧ್ ಬುಲ್ ಟೆಂಪಲ್ ರಸ್ತೆಯಲ್ಲಿರುವ ದೊಡ್ಡ ಗಣೇಶ ದೇವಾಲಯದಲ್ಲಿ ಚಾಲನೆ ನೀಡಿದರು. ಸೈಕ್ಲಿಸ್ಟ್ಗಳು ಮತ್ತು ಮೋಟಾರ್ ಸೈಕ್ಲಿಸ್ಟ್ಗಳು ಜನವರಿ 29ರಂದು ಗೋವಾದ ಪಣಜಿಯನ್ನು ತಲುಪಲಿದ್ದಾರೆ. ಅಲ್ಲಿ ನಡೆಯಲಿರುವ ರೋಟರಿ ಡಿಸ್ಟ್ರಿಕ್ಟ್ 3190 ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
‘ಈ ರಸ್ತೆ ಪ್ರಯಾಣಕ್ಕೆ ದೇಶದ ಗ್ರಾಮೀಣ ಜನರ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವ ಉದ್ದೇಶವಿದೆ. ಜನರ ಅರಿವಿನ ಕಣ್ಣನ್ನು ತೆರೆಯುವಂತಹ ಪ್ರಯಾಣ ಇದು. ಅವರ ಪ್ರತಿಕ್ರಿಯೆಯ ಆಧಾರದ ಮೇಲೆ ಗ್ರಾಮೀಣ ಸಮುದಾಯಗಳ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಬಹುದು. ಈ ಯುವಜನರ ಉತ್ಸಾಹದಿಂದ ನಮಗೆ ಬಹಳ ಸಂತೋಷವಾಗಿದೆ’ ಎಂದು ರೋಟರಿ ಡಿಸ್ಟ್ರಿಕ್ಟ್ 3190 ವಾರ್ಷಿಕ ಸಮ್ಮೇಳನ 2016ರ ಅಧ್ಯಕ್ಷ ರೋಟರಿಯನ್ ಬಿ. ಎಲ್. ನಾಗೇಂದ್ರ ಪ್ರಸಾದ್ ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.