ಬೆಂಗಳೂರು : ಮಹಿಳಾ ಪೌರ ಕಾರ್ಮಿಕರಿಗೆ ಸಮಾನ ವೇತನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಸಮಾನತಾ ಮಹಿಳಾ ವೇದಿಕೆಯ ಸದಸ್ಯರು ಬುಧವಾರ ನಗರದ ಟೌನ್ಹಾಲ್ ಬಳಿ ಪ್ರತಿಭಟನೆ ನಡೆಸಿದರು.

ಸಾಹಿತಿ ಬಿ.ಟಿ ಲಲಿತಾ ನಾಯಕ್ ಮಾತನಾಡಿ `ಮಹಿಳಾ ಪೌರ ಕಾರ್ಮಿಕರು ಹಾಗೂ ಮನೆ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಕಾರ್ಮಿಕ ಹಕ್ಕುಗಳು ಅನ್ವಯವಾಗುತ್ತಿಲ್ಲ. ಮನೆ ಕೆಲಸ ಮಾಡುವವರು ತಿಂಗಳಿಗೆ 500 ರೂಪಾಯಿ ವೇತನ ಪಡೆಯುತ್ತಿದ್ದಾರೆ. ಪೌರ ಕಾರ್ಮಿಕರಿಗೆ ಸರ್ಕಾರ ಎರಡೂವರೆ ಸಾವಿರ ವೇತನ ನೀಡುತ್ತಿದೆ. ಇದರಿಂದ ಅವರು ಜೀವನ ನಡೆಸುವುದು ಕಷ್ಟ. ಆದ್ದರಿಂದ ಮಹಿಳಾ ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು~ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯು ಶತಮಾನೋತ್ಸವ ಪೂರೈಸಿದೆ. ಆದರೆ ನ್ಯಾಯಯುತವಾಗಿ ಸಿಗಬೇಕಾದ ಮೂಲಭೂತ ಸೌಲಭ್ಯಗಳು ಮಹಿಳೆಯರಿಗೆ ಇನ್ನೂ ಪೂರೈಕೆಯಾಗಿಲ್ಲ ಎಂದರು.

ಮುಂಜಾನೆ ಜನ ಎಚ್ಚರಗೊಳ್ಳುವ ಮುನ್ನ ಇಡೀ ನಗರದ ಕಸವನ್ನು ಗುಡಿಸುವ ಮಹಿಳಾ ಪೌರ ಕಾರ್ಮಿಕರು ಪ್ರತಿದಿನ ದೂಳಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಿರಂದ ಅಸ್ತಮಾ, ಚರ್ಮರೋಗ ಸೇರಿದಂತೆ ಹಲವು ಕಾಯಿಲೆಗಳಿಗೆ ಗುರಿಯಾಗಿದ್ದು, ಅವರ ಆರೋಗ್ಯದ ಬಗ್ಗೆಯೂ ಸರ್ಕಾರ ಚಿಂತಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕೊಳೆಗೇರಿ ಪ್ರದೇಶದಲ್ಲಿ ವಾಸಿಸುತ್ತಿರುವ ಹಾಗೂ ವಲಸೆ ಬಂದಿರುವ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ನೀಡಬೇಕು. ದುಡಿಯುವ ಮಹಿಳೆಯರ ಕ್ಷೇಮಾಭಿವೃದ್ಧಿಗಾಗಿ ಮಹಿಳಾ ಆಯೋಗ ಕೆಲಸ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.