ರಿಪ್ಪನ್ಪೇಟೆ: ಧಾರ್ಮಿಕ, ಆರ್ಥಿಕ,ಸಾಮಾಜಿಕ, ಶೈಕ್ಷಣಿಕ ಪ್ರಗತಿಯ ಮೂಲಕ ಜಾತಿ, ಮತ, ಪಂಥಗಳ ಹೊರತಾದ ಧರ್ಮ ಉಳಿಯಬೇಕು ಎಂದು ಸೋಲೂರು ಮಠದ ಆರ್ಯ ರೇಣುಕಾನಂದ ಸ್ವಾಮೀಜಿ ಪ್ರತಿಪಾದಿಸಿದರು.

ಪಟ್ಟಣದ ಸಮೀಪದ ಅಮೃತ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ನಾರಾಯಣ ಗುರು ಆರ್ಯ ಈಡಿಗ ಸಂಘದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾಸ್ತಿಕ, ಆಸ್ತಿಕರ ನಡುವಿನ ಜಂಜಾಟಗಳಿಗೆ ಪರಿಹಾರ ಕಲ್ಪಿಸಲು ದೇವರಿಂದಲೂ ಸಾಧ್ಯವಿಲ್ಲ. ಪ್ರತಿಯೊಬ್ಬರು ಮಾನವೀಯ ಮೌಲ್ಯ ಪ್ರತಿಪಾದಿಸುವ ದಾರ್ಶನಿಕರ ತತ್ವಗಳನ್ನು ಅಳವಡಿಸಿಕೊಂಡು ಸಮಾನತೆ ಮೈಗೂಡಿಸಿ ಕೊಳ್ಳುವಂತೆ ಅವರು ಕರೆ ನೀಡಿದರು

ಅಗೋಚರ ಶಕ್ತಿಯ ಪ್ರತೀಕವೇ ದೇವರು. ಸ್ವಾಮೀಜಿಗಳ ಪಾದಪೂಜೆ ಗುಲಾಮಗಿರಿಯ ಸಂಕೇತವಲ್ಲ, ಅದು ನಿಸ್ವಾರ್ಥದಿಂದ ಸಾರ್ಥಕ ಬದುಕಿನಡೆಗೆ ಸಾಗುತ್ತಾ ತನ್ನಲ್ಲಿರುವ ಅಹಂಕಾರವನ್ನು ಅಡಗಿಸಿಕೊಂಡು ಪರಿವರ್ತನೆಗೊಳ್ಳುವ ಮಾರ್ಗವಾಗಿದೆ ಎಂದರು.

ಶಿವಮೊಗ್ಗ ಸನ್ಮತಿ ಕೇಂದ್ರದ ಬಿ.ಎ.ಮಹಾ ದೇವಪ್ಪ ಮಾತನಾಡಿ, ಪ್ರತಿಯೊಂದು ಸಮಾಜದ ಏಳಿಗೆಗೆ ತಮ್ಮದೇ ಆದ ಗುರುಕುಲಗಳನ್ನು ಅವಲಂಬಿಸಿವೆ. ಹಾಗೆಯೇ ಈಡಿಗ ಸಮುದಾಯದ ಅಭಿವೃದ್ಧಿಗೆ ನಾರಾಯಣ ಗುರು ಆದರ್ಶ ಪಾಲನೆ ಮಾಡುವುದು ವರ್ತಮಾನದ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಮಾಜಿ ಶಾಸಕ ಡಾ.ಜಿ.ಡಿ. ನಾರಾಯಣಪ್ಪ ಮಾತನಾಡಿ, ಶಿಕ್ಷಣ, ಆರೋಗ್ಯ, ಉದ್ಯಮ, ಸಂಘಟನೆಗಳ ಮೂಲಕ ಸಮಾಜ ಕಟ್ಟುವ ಕೆಲಸವಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಡಿ.ಲೋಕೇಶ ರಚಿಸಿದ ಅಮೃತಗೀತಾ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಮಾಜಿ ಶಾಸಕರಾದ ಬಿ.ಸ್ವಾಮಿರಾವ್, ಜಿ.ಡಿ. ನಾರಾಯಣಪ್ಪ ಮತ್ತು ಬಿ.ಎಸ್. ಪುರುಷೋತ್ತಮ್ ಅವರನ್ನು ಸನ್ಮಾನಿಸಲಾಯಿತು.

ಯೋಗಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯ ಕಲಗೋಡು ರತ್ನಾಕರ, ಮಾಜಿ ಸದಸ್ಯ ಬಿ.ಪಿ.ರಾಮಚಂದ್ರ, ಗೀತಾ ನಿಂಗಪ್ಪ, ಗೀತಾ ರಾಘವೇಂದ್ರ, ಕೆ.ವೈ. ಷಣ್ಮುಖಪ್ಪ, ಸುಮತಿ ಆರ್ ಪೂಜಾರ್, ಬಿ. ರಮೇಶ, ಕುಸುಮಾ ನಾಗರಾಜ್, ಬಿ.ಸಿ. ಅಣ್ಣಪ್ಪ, ಬಿ.ಪಿ. ರಮೇಶ, ಟಿ.ತುಕಾರಾಂ, ಕೆ.ಎನ್. ಗೋಪಾಲಕೃಷ್ಣ, ರಮೇಶ, ಜಯಮ್ಮ ಮತ್ತು ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.