ಆನೇಕಲ್: ವಾಯು ಮಾಲಿನ್ಯವನ್ನು ತಡೆಯುವ ಮೂಲಕ ಮನುಕುಲದ ಆರೋಗ್ಯವನ್ನು ಕಾಪಾಡಬೇಕು ಎಂದು ಜಿಎಂಆರ್ ಎಲೈಟ್ ಅಕಾಡೆಮಿಯ ಸಂಸ್ಥಾಪಕ ಜಿ.ಮುನಿರಾಜು ನುಡಿದರು.

ಅವರು ಪಟ್ಟಣದ ಎಪಿಎಸ್ ಶಾಲೆ ಯಲ್ಲಿ ವಾಯುಮಾಲಿನ್ಯ ಮಾಸಾ ಚರಣೆ ಅಂಗವಾಗಿ ಎಲೆಕ್ಟ್ರಾನಿಕ್ ಸಿಟಿ ಪ್ರಾದೇಶಿಕ ಸಾರಿಗೆ ಇಲಾಖೆ ವತಿ ಯಿಂದ ಆಯೋಜಿಸಿದ್ದ ಜಾಗೃತಿ ಕಾರ್ ಯಕ್ರಮದಲ್ಲಿ ಪಾಲ್ಗೊಂಡು ಮಾತ ನಾಡಿದರು.

ವಾಹನಗಳಿಂದ ಬಿಡುಗಡೆಯಾಗುವ ಕಾರ್ಬನ್ ಡೈಆಕ್್ಸೈಡ್ ಮನುಷ್ಯನ ಉಸಿರಾಟದ ಮೇಲೆ ಪ್ರತಿಕೂಲ ಪರಿ ಣಾಮ ಬೀರುತ್ತದೆ ಹಾಗಾಗಿ ಸಾರ್ವ ಜನಿಕರು ಸಮೂಹ ಸಾರಿಗೆ ಹಾಗೂ ಮಾಲಿನ್ಯ ರಹಿತ ವಾಹನಗಳನ್ನು ಬಳ ಸುವ ಮೂಲಕ ಮಾಲಿನ್ಯ ತಡೆಗಟ್ಟ ಬೇಕು ಎಂದರು.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಕೆ.ಗವಿರಂಗಯ್ಯ ಮಾತನಾಡಿ ವಾಹನ ಸವಾರರು ಮಾಡಿದ ತಪ್ಪಿಗೆ ಕೇವಲ ದಂಡವೊಂದೇ ಪರಿಹಾರವಲ್ಲ ಸಮಾಜದಲ್ಲಿ ಅರಿವು ಮೂಡಿಸುವ ಮೂಲಕ ತಪ್ಪುಗಳಾ ಗದಂತೆ ಜಾಗೃತಿ ಮೂಡಿಸಬೇಕು ಎಂದರು. ಮೋಟಾರ್ ವಾಹನ ನಿರೀಕ್ಷಕ ಷಣ್ಮುಖಪ್ಪ ಹಡಗದ್ ಅವರು ಪ್ರಬಂಧ ಮತ್ತು ಆಶುಭಾಷಣ, ಚಿತ್ರಕಲೆ, ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹು ಮಾನಗಳನ್ನು ವಿತರಿಸಿದರು.

ಎಪಿಎಸ್ ಶಾಲೆಯ ಆಡಳಿತಾ ಧಿಕಾರಿ ದಿನೇಶ್, ಕಾರ್ಯದರ್ಶಿ ಪಿ.ಕೆ.ಸುನೀತಾ ಕುಮಾರಿ, ವಿಧಾತ್ ಶಾಲೆಯ ಮುಖ್ಯೋಪಾದ್ಯಾಯ ಬಿ.ವಿ.ಅರಳಪ್ಪ ನವರ್ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.