ಬೆಂಗಳೂರು: ದೀಪಾವಳಿ ಹಬ್ಬ, ಸರ್ಕಾರಿ ನೌಕರರಿಗೆ ಸರಣಿ ರಜೆಗಳು ಹಾಗೂ ವಾರಾಂತ್ಯದ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಊರುಗಳಿಗೆ ಹೋಗಲು ಮೆಜೆಸ್ಟಿಕ್ ಕಡೆಗೆ ದೌಡಾಯಿಸಿದ್ದರಿಂದ ಶುಕ್ರವಾರ ಮೆಜೆಸ್ಟಿಕ್ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಯಿತು.

ಸಂಜೆ ವೇಳೆಗೆ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೆಜೆಸ್ಟಿಕ್ಗೆ ಧಾವಿಸಿದರು. ಹೀಗಾಗಿ, ಕೆಂಪೇಗೌಡ ರಸ್ತೆ, ಗೂಡ್ಶೆಡ್ ರಸ್ತೆ, ಓಕಳಿಪುರ ರಸ್ತೆ, ಖೋಡೆ ವೃತ್ತ, ಆನಂದರಾವ್ ವೃತ್ತ, ನೃಪತುಂಗ ರಸ್ತೆ, ರಾಜೀವ್ ಗಾಂಧಿ ವೃತ್ತ, ರೇಸ್ಕೋರ್ಸ್ ರಸ್ತೆ, ಶಿವಾನಂದ ವೃತ್ತ, ಕೆ.ಎಚ್.ರಸ್ತೆ ಹಾಗೂ ಕೆ.ಆರ್.ಮಾರುಕಟ್ಟೆ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಯಿತು. ಸಂಚಾರ ನಿರ್ವಹಣೆಗೆ ಪೊಲೀಸ್ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.

ಕೆಲಸ ಮುಗಿಸಿ ಸಂಜೆ ಮನೆಗೆ ಹೊರಟಿದ್ದ ಸರ್ಕಾರಿ ಮತ್ತು ಖಾಸಗಿ ಕಂಪೆನಿ ಉದ್ಯೋಗಿಗಳು ಗಂಟೆಗಟ್ಟಲೆ `ಟ್ರಾಫಿಕ್ಜಾಮ್~ನಲ್ಲಿ ಸಿಲುಕಿದರು.

`ಟಿಕೆಟ್ ಕಾಯ್ದಿರಿಸುವ ವೇಳೆ, ನವರಂಗ್ ಚಿತ್ರಮಂದಿರದ ಬಳಿ ರಾತ್ರಿ ಹತ್ತು ಗಂಟೆಗೆ ಬಸ್ ಬರುವುದಾಗಿ ಕೆಎಸ್ಆರ್ಟಿಸಿ ಸಿಬ್ಬಂದಿ ಹೇಳಿದ್ದರು. ಆದರೆ, ಸಿಬ್ಬಂದಿ ಸೂಚಿಸಿದ್ದ ನಿಲ್ದಾಣದಲ್ಲಿ ಬೀದಿ ದೀಪಗಳಿಲ್ಲ. ಇದರಿಂದಾಗಿ ಬಸ್ಗಳು ಯಾವ ಊರಿಗೆ ಹೋಗುತ್ತವೆ ಎಂದು ಗೊತ್ತಾಗುತ್ತಿಲ್ಲ. ಪ್ರತಿ ಹಬ್ಬದ ದಿನಗಳಲ್ಲೂ ಪ್ರಯಾಣಿಕರಿಗೆ ಇದೇ ಸಮಸ್ಯೆಯಾಗುತ್ತಿದೆ~ ಎಂದು ಪ್ರಯಾಣಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ನೌಕರರಿಗೆ ಸಾಲುಸಾಲು ರಜೆ
ಬೆಂಗಳೂರು: ಅಕ್ಟೋಬರ್ನಲ್ಲಿ ದಸರಾ, ಬಕ್ರೀದ್, ವಾಲ್ಮೀಕಿ ಜಯಂತಿಯ ಸರಣಿ ರಜೆಯ ಖುಷಿ ಸವಿದಿದ್ದ ಸರ್ಕಾರಿ ನೌಕರರಿಗೆ ಈಗ ಮತ್ತೊಮ್ಮೆ ಸಾಲುಸಾಲು ರಜೆಗಳು ಬಂದಿವೆ. ಸರ್ಕಾರಿ ನೌಕರರು ನವೆಂಬರ್ 13ರ ಒಂದು ದಿನ ರಜೆ ಮಂಜೂರು ಮಾಡಿಸಿಕೊಂಡರೆ ಐದು ದಿನಗಳನ್ನು ಆರಾಮವಾಗಿ ಕಳೆಯಲು ಅವಕಾಶವಿದೆ.

ಶನಿವಾರದಿಂದಲೇ ರಜೆಯ ಪರ್ವ ಆರಂಭವಾಗಲಿದೆ. ಸೋಮವಾರ ನರಕ ಚತುರ್ದಶಿಯ ರಜೆ ಇದೆ. ಮಂಗಳವಾರ ಮಾತ್ರ ರಜೆ ಮಂಜೂರಿ ಅಗತ್ಯ. ಮತ್ತೆ ಬುಧವಾರ ಬಲಿಪಾಡ್ಯಮಿಯ ರಜೆ. ಅಕ್ಟೋಬರ್ ತಿಂಗಳ ಕೊನೆಯ 2 ವಾರಗಳಲ್ಲಿ ಆರು ದಿನ ಸರ್ಕಾರಿ ರಜೆಗಳು ಬಂದಿದ್ದವು. ಹದಿನೈದು ದಿನ ಕಳೆಯುವಷ್ಟರಲ್ಲಿ ಮತ್ತೊಮ್ಮೆ ರಜೆಯ ಸವಿ ಸವಿಯಲು ಸರ್ಕಾರಿ ಅಧಿಕಾರಿಗಳು, ನೌಕರರು ಸಿದ್ಧರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.