ಶುಕ್ರವಾರ, ಮೇ 7, 2021
20 °C

ಸರಸ್ವತಿ ಮೂರ್ತಿ ಉಡುಗೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಇಂಡೊನೇಷ್ಯಾ ಅಮೆರಿಕಕ್ಕೆ ಹಿಂದೂಗಳ ಜ್ಞಾನದೇವತೆ ಸರಸ್ವತಿ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದೆ.



11 ಅಡಿ ಉದ್ದದ ಕಮಲದ ಹೂವಿನ ಮೇಲೆ ಸರಸ್ವತಿ ಕುಳಿತಿರುವಂತೆ ಮೂರ್ತಿಯನ್ನು ರೂಪಿಸಲಾಗಿದೆ. ವಾಷಿಂಗ್ಟನ್‌ನಲ್ಲಿ ಮಹಾತ್ಮ ಗಾಂಧೀಜಿ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಿರುವ ಭಾರತದ ರಾಯಭಾರ ಕಚೇರಿ ಮುಂಭಾಗದಲ್ಲೇ ಈ  ಸರಸ್ವತಿ ಮೂರ್ತಿಯನ್ನು ಸ್ಥಾಪಿಸಲಾಗಿದೆ.



ಎರಡೂ ದೇಶಗಳ ಸಾಂಸ್ಕೃತಿಕ ಬಾಂಧವ್ಯದ ದ್ಯೋತಕವಾಗಿ ಈ ಮೂರ್ತಿಯನ್ನು ಉಡುಗೊರೆಯಾಗಿ ನೀಡಲಾಗಿದೆ. ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲಿ ಈ ಮೂರ್ತಿಯನ್ನು ನಿರ್ಮಿಸಲು ಆರಂಭಿಸಲಾಗಿತ್ತು. ಐ ನ್ಯೋಮನ್ ಸುದರ್ವ ಎಂಬ ಶಿಲ್ಪಿಯನ್ನೊಳಗೊಂಡಂತೆ ಇಂಡೊನೇಷ್ಯಾದ ಐವರು ಮೂರ್ತಿ ಸಿದ್ಧಪಡಿಸಿದ್ದಾರೆ ಎಂದು ಇಂಡೊನೇಷ್ಯಾ ರಾಯಭಾರಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.