ದಶಕದ ಹಿಂದಿನ ಘಟನೆ. ಸಿಂಗಪುರ ಪ್ರವಾಸ ಮುಗಿಸಿದ ನಾನು ಬೆಂಗಳೂರಿನ ಎಚ್.ಎ.ಎಲ್. ವಿಮಾನ ನಿಲ್ದಾಣದಲ್ಲಿ ಇಳಿದೆ. ರಾತ್ರಿ ಒಂಬತ್ತೂವರೆ ಗಂಟೆ ಸಮಯ. ಲಘು ಲಗೇಜಿದ್ದ ಕಾರಣ ಟ್ಯಾಕ್ಸಿಯ ಅಗತ್ಯ ಕಾಣಲಿಲ್ಲ.

ನಿಲ್ದಾಣದಿಂದ ಹೊರಗೆ ಬಂದು ಬಸ್ಸಿಗಾಗಿ ಕಾಯುತ್ತಾ ನಿಂತೆ. ಕಾಲು ತಾಸಾದರೂ ಯಾವುದೂ ಬರದೆ ಆಟೊ ಹಿಡಿಯೋಣ ಅಂತ ನಿಶ್ಚಯಿಸಿದೆ. ಎಲ್ಲಿಗೆ ಸಾರ್.... ಯಾವ ಕಡೆಗೆ ಎಂದ ಒಬ್ಬ ಆಟೊದವ. ನಮ್ಮ ಮನೆ ಹನುಮಂತನಗರದಲ್ಲಿ. ನಾನಾಗಿಯೆ ಒಂದೂವರೆ ಪಟ್ಟು ಮೀಟರ್ ಹಣ ಕೊಡ್ತೀನಿ ಅಂದೆ.

ಆತ ಇನ್ನೆಲ್ಲಿ ದುಪ್ಪಟ್ಟು, ಮುಪ್ಪಟ್ಟು ಹಣಕ್ಕೆ ಒತ್ತಾಯಿಸಿಯಾನೆಂಬ ನನ್ನ ಆತಂಕವೂ ಇದಕ್ಕೆ ಕಾರಣ. ಸರಿ ಸಾರ್..... ಆದ್ರೆ ಮೇಲೊಂದು ಹತ್ತು ಕೊಡಿ.... ಇದು ನೈಟ್ ಟೈಮು ಅಂದ. ಲಗೇಜಿರಿಸಿ ಆಟೊ ಹತ್ತಿದೆ. ದಾರಿಯುದ್ದಕ್ಕೂ ರಾಜಕೀಯ, ಮಳೆ, ಬೆಳೆ, ಏರುತ್ತಿರುವ ದಿನಸಿ ಬೆಲೆ, ಕ್ರಿಕೆಟ್ಟು.... ಲೋಕಾಭಿರಾಮವೆ ನಡೆದಿತ್ತು. ನನ್ನ ಉಪನ್ಯಾಸಕ ವೃತ್ತಿಯ ಅನುಭವಗಳನ್ನು ಅವನಿಗೆ ಹೇಳಿ ನಗಿಸಿದ್ದೆ.

ಅವನಿಗೂ ತಕ್ಕಮಟ್ಟಿಗೆ ಹಾಸ್ಯಪ್ರಜ್ಞೆ. ಹರಟೆ ಭರಾಟೆಯಲ್ಲಿ ಗಾಂಧಿಬಜಾರ್ ಬಂದೇಬಿಟ್ಟಿತ್ತು. ಕುಮಾರಸ್ವಾಮಿ ದೇವಸ್ಥಾನ ದಾಟಿ ನಿರ್ಮಲ ಸ್ಟೋರ್ಸ್ ಬಳಿ ಸಾಕು ನಿಲ್ಲಿಸಪ್ಪ ಇಲ್ಲೇ ಹತ್ತಿರದಲ್ಲೇ ಮನೆ ಅಂದೆ. ಬೇಡಿ ಸಾರ್. ನಡೀರಿ ಮನೆ ಹತ್ರಾನೆ ಇಳಿಸ್ತೀನಿ. ಸುಮ್ನೆ ಯಾಕೆ ನಡೀತೀರ ಅಂದ ಪ್ರಕಾಶ (ಆತನ ಹೆಸರು). ಅವನ ಉದಾರತೆ, ವಿನಯ ನನ್ನನ್ನು ಬೆರಗಾಗಿಸಿತ್ತು.

ಮೀಟರ್ ನೋಡಿ ಲೆಕ್ಕಹಾಕಿ ಅವನು ಹೇಳಿದಂತೆ ಹಣ ಪ್ರಕಾಶನಿಗೆ ಕೊಟ್ಟಾಗ ಮತ್ತೂ ಅಚ್ಚರಿ. ಬೇಡಿ ಸಾರ್.... ತಾವು ಹಿರೀಕರು, ಗುರುಗಳು ಅನ್ನುವುದೆ? ನಮ್ಮ ಮನೆಯವರೆಲ್ಲ ಹೊರಗೆ ಬಂದು ಇಂಥ ನಡುರಾತ್ರೀಲಿ ಜೋಪಾನವಾಗಿ ಮನೆಗೆ ತಲುಪಿಸಿದೀಯ.... ತಗೊ. ಬೇಡ ಅನ್ನಬಾರ್ದು.

ನಿಂಗೇನು ಬಿಟ್ಟಿ ಬರುತ್ತ ಪೆಟ್ರೋಲು ಅಂತೆಲ್ಲ ಬಲವಂತಿಸಿದರೂ ಪ್ರಕಾಶ ಒಪ್ಪಲಿಲ್ಲ. ಸರ್ರನೆ ಹೊರಟೇಬಿಟ್ಟ.

ವಾರ ಕಳೆದಿತ್ತು. ಬೆಳಿಗ್ಗೆ ಎಂಟೂವರೆ ಹೊತ್ತಿಗೆ ಎಂದಿನಂತೆ ನಾನು ಕಾಲೇಜಿಗೆ ಹೊರಡಲು ಸಿದ್ಧನಾಗುತ್ತಿದ್ದೆ. ಮನೆ ಮುಂದೆ ಒಂದು ಆಟೊ ನಿಂತಿತು. ಯಾರಾದರೂ ನೆಂಟರೆ? ಗೆಳೆಯರೆ? ಕಿಟಕಿ ಮೂಲಕ ಇಣುಕಿದೆ. ಅರೆ! ಅದೇ ಆಟೊ. ಪ್ರಕಾಶ ಸಾರ್ ಎನ್ನುತ್ತ ಗೇಟು ದೂಡುತ್ತಿದ್ದ. ಓಹೋ ಬಾ ಒಳಗೆ ಅಂದೆ.

ವರಾಂಡದಲ್ಲಿ ಕೂತವ ಸಾರ್ ನಿಮ್ಮಿಂದ ಒಂದು ಉಪಕಾರ ಆಗ್ಬೇಕು ಅಂದ. ಹೇಳಪ್ಪ ಏನಾಗ್ಬೇಕು. ನನ್ನ ಕೈಲಾದರೆ ಖಂಡಿತ ಮಾಡೋಣ ಅಂದೆ. ಪ್ರಕಾಶನ ಬೇಡಿಕೆ ನನಗೆ ಅನಿರೀಕ್ಷಿತವಾಗಿತ್ತು;

ಸಾರ್, ಆವೊತ್ತೇ ಹೇಳ್ಬೇಕೂಂತಿದ್ದೆ. ನನ್ನ ಮಗ ನಿಮ್ಮದೇ ಕಾಲೇಜಿನಲ್ಲಿ ಓದಿದವ. ಎರಡನೆ ಪಿ.ಯು.ಸಿ. ಲಿ ಮೂರು ಬಾರಿ ಗಣಿತದಲ್ಲಿ ಫೇಲಾಗಿದಾನೆ. ಬರೊ ವಾರ ನಡೆಯುತ್ತಲ್ಲ ಪರೀಕ್ಷೆ. ಅವನಿಗೆ ನೀವು ಹೇಗಾದರೂ ಮಾಡಿ ಸಹಾಯ ಮಾಡ್ಬೇಕು ಗುರು. ಮೂವತ್ತೈದು ಬಂದ್ರೆ ಸಾಕು. ಅಷ್ಟು ಮಾಡಿ ಪುಣ್ಯ ಕಟ್ಕೊಳ್ಳಿ.....

ಒಂದು ಕ್ಷಣ ನನಗೆ ಏನು ಹೇಳಬೇಕೊ ತೋಚದಾಯಿತು. ಸಿಟ್ಟಿನಿಂದ ನಡೆ ಹೊರಗೆ ಎನ್ನಲು ಬಾಯಿ ಬಂದಿತ್ತಾದರೂ ಸಂಯಮ ವಹಿಸಿದೆ. ಇವೊತ್ತು ಕಾಲೇಜಿಗೆ ಹೋಗದಿದ್ದರೂ ಸರಿಯೆ ಪ್ರಕಾಶನಿಗೆ ಶಿಕ್ಷಣ, ಅದರ ಉದ್ದೇಶ ಎಲ್ಲವನ್ನೂ ಮನದಟ್ಟಾಗಿಸೋಣ ಅನ್ನಿಸಿತು. ಒಂದು ತರಗತಿಯನ್ನೇ ಅವನಿಗೆ ತೆಗೆದುಕೊಂಡೆ ಅನ್ನಿ. ನೋಡು ಮಾರಾಯ. ಪರೀಕ್ಷೆಯಾಗಲಿ, ಅಂಕವಾಗಲಿ, ಪದವಿಯಾಗಲಿ ಶಿಕ್ಷಣ ಅಲ್ಲ.

ಹೇಗಾದರೂ ಮಾಡಿ ಜಯಿಸಬೇಕೆನ್ನಿಸುವಷ್ಟು ಅಮೂಲ್ಯವಲ್ಲ ಪರೀಕ್ಷೆ. ಅಷ್ಟಕ್ಕೂ ನಪಾಸಿಗಿಂತಲೂ ನಿರಾಸೆ, ನೋವುಗಳು ಬದುಕಿನಲ್ಲಿ ಬೇಕಾದಷ್ಟು ಇವೆ. ಪಾಸಾದವ-ನಪಾಸಾದವ ಇವರಿಬ್ಬರ ನಡುವೆ ಮಹತ್ತರ ವ್ಯತ್ಯಾಸವೇನೂ ಇಲ್ಲ.... ಹಾಗೆ ಸಾಗಿತ್ತು ನನ್ನ ಮನವರಿಕೆ. ಪ್ರಕಾಶನಿಗೆ ಕಡೆಗೂ ಮನಮುಟ್ಟುವಂತೆ ಅಡ್ಡದಾರಿ ಸಲ್ಲದೆಂದು ಬಿಂಬಿಸಿದ್ದೆ. ಆಟೊ ಬಾಡಿಗೆ ಇವೊತ್ತಾದ್ರು ತಗೊ ಅಂದಾಗ ಪ್ರಕಾಶ ನೀವು ಕಲಿಸಿದ ಪಾಠಕ್ಕೆ ನಾನು ಫೀಸು ಕೊಡದಿದ್ದರೆ ಹೇಗೆ ಸಾರ್ ಎಂದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.