ಹುಬ್ಬಳ್ಳಿ: `ಸರ್ಕಾರ ಮತ್ತು ಸಮಾಜದ ಜತೆ ಉತ್ತಮ ಬಾಂಧವ್ಯ ಹೊಂದಿದ್ದರೆ ಮಾತ್ರ ಯಾವುದೇ ಉದ್ಯಮ ಯಶಸ್ವಿ ಯಾಗಿ ಬೆಳೆಯಬಲ್ಲದು~ ಎಂದು ಇನ್ಫೋಸಿಸ್ನ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಹೇಳಿದರು.

ದೇಶಪಾಂಡೆ ಪ್ರತಿಷ್ಠಾನ ನಗರದಲ್ಲಿ ಏರ್ಪಡಿಸಿರುವ `ಡೆವೆಲಪ್ಮೆಂಟ್ ಡೈಲಾಗ್~ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಭಾನುವಾರ ಅವರು ಪ್ರಧಾನ ಭಾಷಣ ಮಾಡಿದರು. `ಸಮಾಜವನ್ನು ಎದುರು ಹಾಕಿ ಕೊಂಡರೆ ಯಾವುದೇ ಸಂಸ್ಥೆ ಉಳಿಯುವುದು ಕಷ್ಟ~ ಎಂದು ಉದ್ಯಮಿಗಳಿಗೆ ಕಿವಿಮಾತು ಹೇಳಿದರು.

`ಸಮಾಜದ ಕೆಲವು ವ್ಯಕ್ತಿಗಳ ಬದುಕಿನಲ್ಲಿ ಸ್ವಲ್ಪವಾದರೂ ಹರ್ಷ ತುಂಬುವ ಸಾಮರ್ಥ್ಯ ನಮ್ಮಲ್ಲಿದ್ದರೆ ನಾವು ಯಶಸ್ವಿ ಉದ್ಯಮಿಗಳೇ~ ಎಂದು ಅವರು ಹೇಳಿದರು. `ಹೊಸ ಯೋಚನೆ ಗಳಿಗೆ ತೆರೆದ ಮನಸ್ಸು ಹೊಂದಿರ ಬೇಕು, ಪ್ರತಿಭೆಗಳಿಗೆ ಮನ್ನಣೆ ನೀಡ ಬೇಕು, ಕೆಲಸದಲ್ಲಿ ವೇಗ ಇರಬೇಕು, ಕಲ್ಪನಾ ಶಕ್ತಿಯನ್ನು ರೂಢಿಸಿಕೊಳ್ಳ ಬೇಕು ಮತ್ತು ಶ್ರೇಷ್ಠತೆಯನ್ನು ಸಾಧಿಸಬೇಕು~ ಎಂದು ಯಶಸ್ವಿ ಉದ್ದಿಮೆದಾರನ ಗುಣ-ಲಕ್ಷಣಗಳನ್ನು ವಿವರಿಸಿದರು.

`ಉದ್ಯಮ ಸ್ಥಾಪನೆ ಉದ್ದೇಶ, ಸಾಗಬೇಕಾದ ದಾರಿ ಹಾಗೂ ಸಾಗಿದ ಹಾದಿಯ ಮೌಲ್ಯಮಾಪನಕ್ಕೆ ಅಳತೆ ಗೋಲನ್ನು ಉದ್ದಿಮೆದಾರ ಸ್ಪಷ್ಟವಾಗಿ ಹೊಂದಿರಬೇಕು~ ಎಂದ ಅವರು, `ಜಗತ್ತಿನ ಇತರ ಭಾಗಗಳಲ್ಲಿ ಆಗಿರುವ ಬದಲಾವಣೆ ನೋಡಿಕೊಂಡು ನಮಗೆ ನಾವೇ ಸಾಧನೆ ಮಟ್ಟ (ಬೆಂಚ್ಮಾರ್ಕ್)ವನ್ನು ಗುರುತಿಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು.

`ಕೊನೆಯ ಪಕ್ಷ 200 ವರ್ಷಗಳ ಮುನ್ನೋಟ ಇಟ್ಟುಕೊಂಡು ಉದ್ಯಮ ವನ್ನು ಕಟ್ಟಬೇಕು. ಉದ್ಯಮ ಸ್ಥಾಪನೆ ಕನಸು ಹೊತ್ತ ಧೈರ್ಯ ಹಾಗೂ ಶಕ್ತಿವಂತ ನಾಯಕನನ್ನು ಹಣ ಮತ್ತು ಸೌಕರ್ಯ ತಾವೇ ಹುಡುಕಿಕೊಂಡು ಬರುತ್ತವೆ~ ಎಂದು ಅವರು ಅಭಿಪ್ರಾಯಪಟ್ಟರು.

ತಾವು ಇನ್ಫೋಸಿಸ್ ಸಂಸ್ಥೆ ಸ್ಥಾಪನೆ ಮಾಡಿದ ದಿನಗಳನ್ನು ಮೆಲುಕು ಹಾಕಿದ ನಾರಾಯಣಮೂರ್ತಿ, `ಯಾವುದೇ ಬ್ಯಾಂಕ್ಗೆ ಹೋದರೂ ಸಾಲ ಸಿಗದೆ ಬರಿಗೈಯಿಂದ ಮರಳಬೇಕಾಯಿತು. ದೂರವಾಣಿ ಸಂಪರ್ಕಕ್ಕೆ ಎರಡು ವರ್ಷ ಹಿಡಿಯಿತು. ವಿದೇಶಕ್ಕೆ ತೆರಳುವ ಅನುಮತಿಗಾಗಿ 15 ದಿನ ಕಾಯ ಬೇಕಾಯಿತು. ಮೂರು ವರ್ಷದ ಸತತ ಪ್ರಯತ್ನದ ನಂತರ 3,000 ಡಾಲರ್ ಸಾಲ ಸಿಕ್ಕಿತು~ ಎಂದು ತಿಳಿಸಿದರು.

`80ರ ದಶಕದಲ್ಲಿ ನಾವು ಅನುಭವಿಸಿದ ಸ್ಥಿತಿ ಈಗಿಲ್ಲ. ಜಗತ್ತಿನಲ್ಲೇ ಜಿಡಿಪಿ ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ದೂರಸಂಪರ್ಕ ವ್ಯವಸ್ಥೆ ಈ ದೇಶದಲ್ಲಿ ಬೆಳೆಯುತ್ತಿರು ವಷ್ಟು ವೇಗದಲ್ಲಿ ಬೇರೆ ಯಾವ ದೇಶದಲ್ಲೂ ಬೆಳೆಯುತ್ತಿಲ್ಲ. ಶಿಕ್ಷಣ ವ್ಯವಸ್ಥೆಯೂ ಸುಧಾರಣೆ ಕಂಡಿದೆ. ಎಲ್ಲೆಲ್ಲೂ ಆತ್ಮ ವಿಶ್ವಾಸ ಎದ್ದು ಕಾಣುತ್ತಿದೆ. ಅಭಿವೃದ್ಧಿಗೆ ಬೇಕಾದಷ್ಟು ಅವಕಾಶಗಳು ಈಗ ಲಭ್ಯವಾಗಿವೆ~ ಎಂದು ಅವರು ವಿವರಿಸಿದರು.

ದೇಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕ ಡಾ.ಗುರುರಾಜ ದೇಶಪಾಂಡೆ, ಟ್ರಸ್ಟಿ ಜಯಶ್ರೀ ದೇಶಪಾಂಡೆ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನವೀನ್ ಝಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.