ಗುರುವಾರ , ಮೇ 19, 2022
23 °C

`ಸರ್ಕಾರಿ ಆಸ್ಪತ್ರೆ-ಹಂದಿಗಳ ತಾಣ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ಜರ್ಮನ್ ಆರ್ಥಿಕ ಸಹಾಯದಿಂದ ಮೇಲ್ದರ್ಜೆಗೇರಿಸಿದ ಸ್ಥಳೀಯ ಸಾರ್ವಜನಿಕ ಆಸ್ಪತ್ರೆ ಬಿಡಾಡಿ ಹಂದಿ, ನಾಯಿಗಳ ತಾಣವಾಗಿದೆ. ದುರಸ್ತಿಗೆ ಬಂದಿರುವ ಜನರೇಟರ್, ಅಂಬ್ಯೂಲೆನ್ಸ್ ಅಲ್ಲದೆ, ಆಸ್ಪತ್ರೆ ಆವರಣದಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳ ನಿಲುಗಡೆ ಮಾಡಲಾಗುತ್ತಿದೆ ಪಟ್ಟಣದ ಹಿರಿಯ ನಾಗರಿಕ ಮಹಾಂತಪ್ಪ ವಿಠಲಾಪುರ ಆರೋಪಿಸಿದ್ದಾರೆ.ಆಸ್ಪತ್ರೆ ಆವರಣದಲ್ಲಿ ಎಲ್ಲಿ ನೋಡಿದರು ಜನರೇಟರ್‌ಗಳು ಬೇಕಾ ಬಿಟ್ಟಿಯಾಗಿ ಬಿದ್ದಿವೆ. ಜನರೇಟರ್‌ಗೆ ಪ್ರತ್ಯೇಕ ಕೊಠಡಿ ಇದ್ದರು ಕೂಡ ನಿರ್ಲಕ್ಷ್ಯ ವಹಿಸಲಾಗಿದೆ. ಆಸ್ಪತ್ರೆಯ ಆವರಣ ಸೇರಿದಂತೆ ವಾರ್ಡ್‌ಗಳಲ್ಲಿ ಹಂದಿ ಮತ್ತು ನಾಯಿಗಳು ಗುಂಪು ಗುಂಪಾಗಿ ಅಡ್ಡಾಡುತ್ತಿರುವುದು ರೋಗಿಗಳಲ್ಲಿ ಭಯ ಹುಟ್ಟಿಸಿದೆ. ಎಷ್ಟೊ ಬಾರಿ ಚಿಕಿತ್ಸೆಗೆ ಬಂದವರಿಗೆ ಕಚ್ಚಿದ ಉದಾಹರಣೆಗಳಿವೆ ಎಂದು ಆಕ್ರೋಶ ವ್ಯಕ್ತಪಡಿದ್ದಾರೆ.ಅಪಘಾತಕ್ಕೊಳಗಾದ ವಾಹನ ಸೇರಿದಂತೆ ದುರಸ್ತಿಗೆ ಬಂದಿರುವ ವಾಹನಗಳನ್ನು ಅಡ್ಡಾದಿಟ್ಟಿ ನಿಲ್ಲಿಸಲಾಗಿದೆ. ಚಿಕಿತ್ಸೆಗೆ ಬರುವ ನಾಗರಿಕರು ಕೂಡ ತುರ್ತು ಚಿಕಿತ್ಸಾ ಘಟಕದ ಮುಂಭಾಗದಲ್ಲಿಯೆ  ವಾಹನ ನಿಲುಗಡೆ ಮಾಡುತ್ತಿರುವುದರಿಂದ ತುರ್ತು ಚಿಕಿತ್ಸೆಗೆ ಆಗಮಿಸುವ ರೋಗಿಗಳಿಗೆ ರಸ್ತೆ ಸಿಗುತ್ತಿಲ್ಲ. ರೋಗಿಗಳಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ, ಅಸಮರ್ಪಕ ಔಷಧಿಯಿಂದ ರೋಗಿಗಳು ಪರದಾಡುವಂತಾಗಿದ್ದು ಹಿರಿಯ ಅಧಿಕಾರಿಗಳು ಗಮನ ಹರಿಸವಂತೆ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.