‘ಸರ್ವಾಧಿಕಾರಿ’ಯ ಮೂರು ದಶಕಗಳ ‘ಅಧಿಕಾರ ದಾಹ’ಕ್ಕೆ ಅಂತ್ಯ ಕಾಣಿಸಿದ ಎರಡು ವಾರಕ್ಕೂ ಹೆಚ್ಚು ಕಾಲದ ತೀವ್ರ ಪ್ರತಿಭಟನೆಯ ಪ್ರಮುಖ ಘಟನಾವಳಿಗಳು ಇಲ್ಲಿವೆ:

ಜನವರಿ 25: ಅಧ್ಯಕ್ಷರ ವಿರುದ್ಧ ಅಂತರ್ಜಾಲ ಆಂದೋಲನದ ಬಳಿಕ ದೇಶದ ಹಲವು ನಗರಗಳಲ್ಲಿ ಬೀದಿಗಿಳಿದ ಜನ. ಬಡತನ, ಭ್ರಷ್ಟಾಚಾರ, ನಿರುದ್ಯೋಗದಿಂದ ಆಕ್ರೋಶಗೊಂಡಿದ್ದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತಹ್ರೀರ್ ಚೌಕದಲ್ಲಿ ಭುಗಿಲೆದ್ದ ಘರ್ಷಣೆ.

ಜನವರಿ 28: ವ್ಯಾಪಿಸಿದ ಹಿಂಸಾಚಾರ. ಕೈರೊ, ಅಲೆಕ್ಸಾಂಡ್ರಿಯಾ, ಸೂಯೆಜ್ ನಗರಗಳಲ್ಲಿ ಕರ್ಫ್ಯೂ ಘೋಷಣೆ, ಸೇನೆ ನಿಯೋಜನೆ. ಸಂಪುಟ ವಜಾಗೊಳಿಸಿದ ಮುಬಾರಕ್. ಪ್ರತಿಭಟನಾಕಾರರ ಕಷ್ಟ ನನಗರ್ಥವಾಗುತ್ತದೆ ಎಂದು ಹೇಳಿದ್ದರ ಜೊತೆಜೊತೆಗೇ ಅವರಿಂದ ಭದ್ರತಾ ಪಡೆಗಳ ನಿಯೋಜನೆಯ ಸಮರ್ಥನೆ.ಜನವರಿ 29: ಜಾಗೃತ ಪಡೆಯ ಮುಖ್ಯಸ್ಥ ಒಮರ್ ಸುಲೇಮಾನ್ ಉಪಾಧ್ಯಕ್ಷ, ನಾಗರಿಕ ವಿಮಾನಯಾನ ಸಚಿವ ಅಹ್ಮದ್ ಶಫೀಕ್ ಪ್ರಧಾನಿಯಾಗಿ ನೇಮಕ.

ಜನವರಿ 31: ಪ್ರತಿಭಟನಾಕಾರರ ವಿರುದ್ಧ ಬಲ ಪ್ರಯೋಗಿಸುವುದಿಲ್ಲ ಎಂದು ಸ್ಪಷ್ಟಪಡಿಸಿ ಜನರ ಪರ ನಿಂತ ಸೇನೆ.

ಫೆಬ್ರುವರಿ 1: ಪ್ರಮುಖ ನಾಯಕರ ಜನಾಂದೋಲನ ಕರೆಯ ಬಳಿಕ ಕೈರೊ ಸೇರಿದಂತೆ ಮುಖ್ಯ ನಗರಗಳಲ್ಲಿ ಬೃಹತ್ ರ್ಯಾಲಿ. ಮುಬಾರಕ್ರಿಂದ ಸಂವಿಧಾನಾತ್ಮಕ ಸುಧಾರಣೆ ಹಾಗೂ ಸೆಪ್ಟೆಂಬರ್ನ ಅಧ್ಯಕ್ಷೀಯ ಚುನಾವಣೆಯ ನಂತರ ಕೆಳಗಿಳಿಯುವ ಭರವಸೆ. ಅಧಿಕಾರ ತ್ಯಜಿಸಲು ಪ್ರತಿಭಟನಾಕಾರರಿಂದ ಫೆಬ್ರುವರಿ 4ರವರೆಗೆ ಗಡುವು.

ಫೆಬ್ರುವರಿ 2, 3: ಪ್ರಮುಖ ಪ್ರತಿಭಟನಾ ಸ್ಥಳ ತಹ್ರೀರ್ ಚೌಕದತ್ತ ಮುನ್ನುಗ್ಗಲೆತ್ನಿಸಿದ ಅಧ್ಯಕ್ಷರ ಬೆಂಬಲಿಗರು ಮತ್ತು ವಿರೋಧಿಗಳ ನಡುವೆ ಘರ್ಷಣೆ.

ಫೆಬ್ರುವರಿ 5: ಮುಬಾರಕ್ ಪುತ್ರ ಗಮಾಲ್ ಮುಬಾರಕ್ ಸೇರಿದಂತೆ ಆಡಳಿತಾರೂಢ ನ್ಯಾಷನಲ್ ಡೆಮಾಕ್ರಟಿಕ್ ಪಾರ್ಟಿಯ ನಾಯಕರಿಂದ ಸಾಮೂಹಿಕ ರಾಜೀನಾಮೆ.

ಫೆಬ್ರುವರಿ 10: ಪಕ್ಷದ ನಾಯಕರಿಂದ ಅಧ್ಯಕ್ಷರ ಅಧಿಕಾರ ತ್ಯಾಗದ ಹೇಳಿಕೆ. ಕೆಲವೇ ಕ್ಷಣಗಳಲ್ಲಿ ಟೆಲಿವಿಷನ್ ಭಾಷಣದಲ್ಲಿ ಇದನ್ನು ಅಲ್ಲಗಳೆದು ಎಲ್ಲರಲ್ಲಿ ಅಚ್ಚರಿ ಮೂಡಿಸಿದ ಮುಬಾರಕ್.

ಫೆಬ್ರುವರಿ 11: ಕೊನೆಗೂ ಪ್ರತಿಭಟನೆಯ 18ನೇ ದಿನ ಜನಾಂದೋಲನಕ್ಕೆ ಗೆಲುವು. ರಜಾದಿನದ ನೆಚ್ಚಿನ ತಾಣ ಶರ್ಮ್- ಅಲ್- ಶೇಖ್ನ ರೆಡ್ಸೀ ರೆಸಾರ್ಟ್ನತ್ತ ಮುಬಾರಕ್ ಪಲಾಯನ.

ಜನದನಿಗೆ ‘ಮುಬಾರಕ್’
ಸುದೀರ್ಘಾವಧಿಯ ‘ಸರ್ವಾ ಧಿಕಾರ’ದ ವಿರುದ್ಧ ದನಿ ಎತ್ತಿ ಅಧ್ಯಕ್ಷ ಮುಬಾರಕ್ ಅವರ ಯುಗಾಂತ್ಯಕ್ಕೆ ಕಾರಣರಾದ ಈಜಿಪ್ಟ್ನ ಜನರಿಗೆ ಈಗ ಎಲ್ಲೆಡೆಯಿಂದ ‘ಮುಬಾರಕ್’ (ಶುಭಾಶಯ) ಹರಿದುಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.