ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿದ್ವಾನ್ ಆರ್.ಕೆ. ಪದ್ಮನಾಭ ಮೇರು ಕಲಾವಿದರು. ನಾಲ್ಕು ದಶಕಗಳಿಂದ ಶಾಸ್ತ್ರೀಯ ಸಂಗೀತ ಕಛೇರಿ ನೀಡುತ್ತಾ ಬಂದಿರುವ ಆರ್ಕೆಪಿ ಉತ್ತಮ ಗುರು, ಸಂಗೀತ ನಿರ್ದೇಶಕ, ರಾಗ ಸಂಯೋಜಕರಾಗಿ ಸಂಗೀತದ ವಿವಿಧ ಮಜಲುಗಳಲ್ಲಿ ಕೃಷಿ ನಡೆಸುತ್ತಾ ಬಂದವರು.

ವಾದಿರಾಜರ ಆರಾಧಕರಾದ ಇವರು ವಾದಿರಾಜ ಕಲಾ ಭವನ ಕಟ್ಟಿಸಿ ಹಿರಿ-ಕಿರಿಯ ಕಲಾವಿದರ ನೂರಾರು ಸಂಗೀತ ಕಛೇರಿಗಳನ್ನೂ ಏರ್ಪಡಿಸುತ್ತಾ ಬಂದಿದ್ದಾರೆ. ತಮ್ಮ ಸಂಗೀತ ಜೀವನದಲ್ಲಿ ನಡೆದ ಮರೆಯಲಾರದ ಘಟನೆ, ಹಾಸ್ಯ ಸನ್ನಿವೇಶಗಳನ್ನು ಅವರಿಲ್ಲಿ ಹಂಚಿಕೊಂಡಿದ್ದಾರೆ.

* ಅದು 1984ರ ಇಸವಿ. ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಸಂಗೀತ ಪಾಠ ಹೇಳಿಕೊಡುತ್ತಿದ್ದೆ. ಸಂಜೆ 4.30ಕ್ಕೆ ಪಾಠ ಶುರು ಆಗುತ್ತಿತ್ತು. ಬ್ಯಾಂಕ್ನಲ್ಲಿ ಕೆಲಸ ಮುಗಿಸಿ ಸಂಜೆ ನಾಲ್ಕು ಗಂಟೆಗೆಲ್ಲ ಅಲ್ಲಿರುತ್ತಿದ್ದೆ.

ಕ್ಲಾಸ್ ಶುರು ಮಾಡೋದಕ್ಕೆ ಮುಂಚೆ ಸುಮಾರು ಅರ್ಧ ಗಂಟೆ ನಿತ್ಯವೂ ಸಂಗೀತಾಭ್ಯಾಸ ಮಾಡುತ್ತಿದ್ದೆ. ಒಂದು ದಿನ ರೂಂನಲ್ಲಿ ಕುಳಿತು ಕಣ್ಣುಮುಚ್ಚಿಕೊಂಡು `ಷಣ್ಮುಖಪ್ರಿಯ~ ರಾಗ ಹಾಡುತ್ತಿದ್ದೆ. ಒಬ್ಬ ಶಿಷ್ಯೆ ಮುಂದೆ ಕುಳಿತಿದ್ದಳು. ಹಾಡು ಮುಗಿಸಿದಾಗ ಅವಳ ಕಣ್ಣಲ್ಲಿ ಧಾರಾಕಾರ ನೀರು.

ನನ್ನ ಸಂಗೀತ ಈಕೆಗೆ ಇಷ್ಟೊಂದು ಖುಷಿಯಾಯ್ತಲ್ಲ ಅಂತ ಬಹಳ ಸಂತೋಷಪಟ್ಟೆ. ಒಬ್ಬ ಸಂಗೀತ ವಿದ್ಯಾರ್ಥಿನಿ ಸಂಗೀತ ಕೇಳಿ ಇಷ್ಟು ಭಾವುಕಳಾದದ್ದು ನನ್ನ ಜೀವನದಲ್ಲಿ ಇದೇ ಮೊದಲು ಎನ್ನುವಷ್ಟು ಆನಂದವಾಯಿತು.

`ನಿನ್ನ ಸಂಗೀತ ಆಸಕ್ತಿ ಕಂಡು ತುಂಬ ಖುಷಿಯಾಗಿದೆ; ಐ ಬ್ಲೆಸ್ ಯು~ ಅಂದೆ. ಅದಕ್ಕವಳು, `ನಾನು ನಿಮ್ಮ ಸಂಗೀತ ಕೇಳಿ ಅತ್ತದ್ದಲ್ಲ ಸರ್, ನನ್ನ ಅಜ್ಜಿ ಹೋಗಿ ಬಿಟ್ರು. ಅವರ ನೆನಪಾಯ್ತು~ ಎಂದುಬಿಟ್ಟಳು. ಇದು ನನ್ನ ಸಂಗೀತ ಜೀವನದಲ್ಲಿ ಮರೆಯಲಾರದ ಘಟನೆ.

* ಹತ್ತು ವರ್ಷ ಹಿಂದೆ ನಡೆದ ಘಟನೆ. ಮಡಿಕೇರಿ ಸಮೀಪದ ಶನಿವಾರ ಸಂತೆಯಲ್ಲಿ ಸಂಗೀತ ಶಿಬಿರ ಏರ್ಪಡಿಸಿದ್ದೆ. ಸುಮಾರು 40 ಶಿಷ್ಯರನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದೆ. ಕ್ಯಾಂಪ್ನಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ `ಪಂತುವರಾಳಿ~ ರಾಗದ ಒಂದು ಥೀಮ್ ಕೊಟ್ಟು ಸಂಗೀತ ಹಾಡಲು ಹೇಳಿದ್ದೆ.

ಇದೇ ರಾಗದಲ್ಲಿ ಸುಮಾರು 15 ಕೃತಿಗಳನ್ನು ಕಲಿಸಿದ್ದೆ. ಎಲ್ಲರೂ ಎಲ್ಲ ಕೃತಿಗಳನ್ನು ಕಲಿಯಬೇಕಾಗಿತ್ತು. ಚೀಟಿ ಎತ್ತಿ ಯಾರಿಗೆ ಯಾವ ಕೃತಿ ಬರುತ್ತೋ ಅದನ್ನು ಹಾಡಬೇಕಿತ್ತು. ಏಕತಾನತೆ ಮುರಿಯಲು ಆ ಕೃತಿಯ ಬಗ್ಗೆ ಸ್ವಲ್ಪ ಹೊತ್ತು ಮಾತಾಡಬೇಕಿತ್ತು.

ಸಂಗೀತ ಕೃತಿಯ ಬಗ್ಗೆ ಮಾತನಾಡುವಾಗ ಒಬ್ಬ ಶಿಷ್ಯೆ- `ನನ್ನ ತಂದೆ ನನಗೆ ಷಡ್ಜ, ಪಂಚಮ ಕಲಿಸಿ ಸಂಗೀತದ ಬೀಜ ಬಿತ್ತನೆ ಮಾಡಿದ್ರು. ಈ ಸಂಗೀತ ಮೇಷ್ಟ್ರು ಅದಕ್ಕೆ ನಾಟಿ ಗೊಬ್ಬರ ಹಾಕಿ ಪೋಷಣೆ ಮಾಡ್ತಾ ಇದ್ದಾರೆ. ಇವರು ನಿಜವಾಗಿಯೂ `ಗೊಬ್ಬರದ ಮೇಷ್ಟ್ರು~ ಅಂದು ಬಿಟ್ಟಳು. ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದೇ ನಕ್ಕಿದ್ದು..!

ಅದೇ ಶಿಬಿರದಲ್ಲಿ ಮತ್ತೊಬ್ಬ ಶಿಷ್ಯೆ- `ನಾನು 10 ವರ್ಷದಿಂದ ಸಂಗೀತ ಕಲೀತಾ ಇದ್ದೇನೆ. ಒಬ್ಬ ಸಂಗೀತ ಮೇಷ್ಟ್ರ ಹತ್ತಿರ ಮೂರು ವರ್ಷ ಕಲಿತೆ. ಅಷ್ಟರಲ್ಲಿ ಅವರು ಹೋಗಿಬಿಟ್ರು. ಮತ್ತೊಬ್ಬರ ಹತ್ರ ನಾಲ್ಕು ವರ್ಷ ಕಲಿತೆ. ಅವರು ಸಹ ಹೋದ್ರು. ಈಗ ಈ ಮೇಷ್ಟ್ರ ಹತ್ರ ಕಲಿಯೋದಕ್ಕೆ ಬಂದಿದ್ದೀನಿ. ಇವರು ಯಾವಾಗ ಹೋಗ್ತಾರೋ ಗೊತ್ತಿಲ್ಲ..~ ಎಂದು ಹಾಸ್ಯ ಚಟಾಕಿ ಹಾರಿಸಿದಳು.

* ಒಮ್ಮೆ ವಾದಿರಾಜ ಭವನದಲ್ಲಿ ಸಂಗೀತ ಕಾರ್ಯಕ್ರಮ. ನೂರಾರು ಕೇಳುಗರು ನೆರೆದಿದ್ದರು. ಒಬ್ಬ ಸ್ನೇಹಿತ ಬಂದು- `ಸರ್, ಇಲ್ಲಿ ಏನೇನು ಕಾರ್ಯಕ್ರಮ ಮಾಡ್ತೀರಿ?~ ಅಂದ. ನಾನು ಪುರಂದರದಾಸರ ಆರಾಧನೆ, ಮುತ್ತುಸ್ವಾಮಿ ದೀಕ್ಷಿತರ ಆರಾಧನೆ ಮಾಡ್ತೀವಿ ಅಂದೆ. ಅದಕ್ಕೆ ಅವನು, `ನಾನು ಕೋಲಾರದಲ್ಲಿ ತ್ಯಾಗರಾಜರ ಆರಾಧನೆಯನ್ನು ಅದ್ದೂರಿಯಾಗಿ ಮಾಡ್ತೀನಿ~ ಅಂದ.

ಮತ್ತೆ, `ಈ ಭವನದಲ್ಲಿ ನಿಮ್ಮ ಆರಾಧನೆ ಯಾವಾಗ ಸರ್?~ ಅಂದ. ತ್ಯಾಗರಾಜರ ಆರಾಧನೆ ಯಾವಾಗ ಮಾಡ್ತೀರಿ ಎಂದು ಕೇಳೋದಕ್ಕೆ ಬದಲಾಗಿ ಆತ ಹೀಗೆ ಕೇಳಿದ್ದ. ನಾನು ಹೇಳಿದೆ- `ನನ್ನ ಆರಾಧನೆ ಮಾಡಲು ಇನ್ನೂ ಟೈಮಿದೆ; ಕಾಯ್ಬೇಕು~.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.