ಗುರುವಾರ , ಜೂನ್ 17, 2021
22 °C
ಆಸಾರಾಂ ಅತ್ಯಾಚಾರ ಪ್ರಕರಣ

ಸಾಕ್ಷಿ ಮೇಲೆ ಆ್ಯಸಿಡ್‌ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂರತ್‌ (ಪಿಟಿಐ): ಸ್ವಯಂಘೋಷಿತ ದೇವಮಾನವ ಆಸಾರಾಂ ಬಾಪು ವಿರು­ದ್ಧದ ಅತ್ಯಾಚಾರ ಪ್ರಕರಣದ ಸಾಕ್ಷಿ­ಯೊಬ್ಬರ ಮೇಲೆ ಇಬ್ಬರು ಅಪರಿಚಿತ ದುಷ್ಕರ್ಮಿ­ಗಳು ಭಾನುವಾರ ಇಲ್ಲಿ ಆ್ಯಸಿಡ್‌ ದಾಳಿ ನಡೆಸಿದ್ದಾರೆ.ಈ ದಾಳಿಯಿಂದ ಸುಟ್ಟ ಗಾಯಗಳಾಗಿ­ರುವ ಸಾಕ್ಷಿ ದಿನೇಶ್‌ ಭವ್‌­ಚಂದಾನಿ (39) ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ವಾಹನ­ದಲ್ಲಿ ಮನೆಗೆ ಹೋಗುವಾಗ ಈ ದಾಳಿ ನಡೆ­-ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅಸಾರಾಂ ಮತ್ತು ಆತನ ಪುತ್ರ ನಾರಾ­ಯಣ ಸಾಯಿ ವಿರುದ್ಧದ ಅತ್ಯಾಚಾರ ಪ್ರಕರಣಗಳಲ್ಲಿ ಸಾಕ್ಷಿಗಳ ಮೇಲೆ ನಡೆದ ಮೂರನೇ ದಾಳಿ ಇದಾಗಿದೆ. ಈ ಸಾಕ್ಷಿ­ಗಳು ಪೊಲೀಸ್‌ ಭದ್ರತೆ ನಿರಾಕರಿಸಿದ್ದರು ಎಂದು ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.