ಮಂಗಳವಾರ, ಜನವರಿ 28, 2020
22 °C

ಸಾಗರೋತ್ತರ ಕಾರ್ಮಿಕರಿಗೆ ಜೀವವಿಮೆ- ಪಿಂಚಣಿ ಘೋಷಣೆ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ, ರಾಜಸ್ತಾನ (ಪಿಟಿಐ): `ಪಿಂಕ್ ಸಿಟಿ~ ಎಂದೇ ಹೆಸರಾದ ಜೈಪುರದ ಇಲ್ಲಿನ ಹೆಸರಾಂತ ಬಿರ್ಲಾ ಸಭಾಂಗಣದಲ್ಲಿ ಶನಿವಾರ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು `ಪ್ರವಾಸಿ ಭಾರತೀಯ ದಿವಾಸ~ ಸಮಾರಂಭವನ್ನು ಉದ್ಘಾಟಿಸಿದರು.ಸಮಾರಂಭದಲ್ಲಿ ಸಮಾರು 24 ದೇಶಗಳಿಂದ 1,500ಕ್ಕೂ ಅಧಿಕ ಸಾಗರೋತ್ತರ ಅಧಿಕಾರಿಗಳು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.ಭಾನುವಾರ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಸಾಗರೋತ್ತರ ಲಕ್ಷಾಂತರ ಕಾರ್ಮಿಕರಿಗೆ ಅದರಲ್ಲೂ ಅರಬ್ ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅನಿವಾಸಿ ಭಾರತೀಯ ಕಾರ್ಮಿಕರಿಗಾಗಿಯೇ ಸ್ವಯಂ ಪ್ರೇರಿತವಾಗಿ ಜೀವ ವಿಮೆ ನಿಧಿ ಮತ್ತು ಪಿಂಚಣಿ (ಪಿಎಲ್‌ಐಎಫ್) ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. 

ಪ್ರತಿಕ್ರಿಯಿಸಿ (+)