ಶುಕ್ರವಾರ, ಫೆಬ್ರವರಿ 26, 2021
27 °C

ಸಾತೊಡ್ಡಿಯ ಸೋದರಿ ಕುಮ್ಬಾಳ್

-ಅಶ್ವಿನಿ ರಾಜು Updated:

ಅಕ್ಷರ ಗಾತ್ರ : | |

ಸಾತೊಡ್ಡಿಯ ಸೋದರಿ ಕುಮ್ಬಾಳ್

ಉತ್ತರಕನ್ನಡದ ಯಲ್ಲಾಪುರ ಜಲಪಾತಗಳ ತವರು. ದಟ್ಟವಾದ ಅರಣ್ಯಗಳಿಂದ ಸುತ್ತುವರಿದ ಯಲ್ಲಾಪುರ ಪುಟ್ಟ ಊರು. ಆದರೆ, ಊರಿನ ಆಸುಪಾಸಿನಲ್ಲಿರುವ ಜಲಪಾತಗಳ ಕೀರ್ತಿ ದೊಡ್ಡದು. ಇವುಗಳಲ್ಲಿ ಕೆಲವು ಜಲಪಾತಗಳು ಜನಪ್ರಿಯಗೊಂಡು ಪ್ರವಾಸಿಗರ ಕಣ್ಣಿಗೆ ಬಿದ್ದಿದ್ದರೆ, ಇನ್ನೂ ಕೆಲವು ಅಷ್ಟೇನೂ ಹಸಿರು ಮರೆಯಲ್ಲಿ ಅಪರಿಚಿತ ಧಾರೆಗಳಾಗಿಯೇ ಉಳಿದಿವೆ. ಅಂಥ ಜಲಧಾರೆಗಳಲ್ಲಿ ಒಂದು ಕುಮ್ಬಾಳ್.ಕುಮ್ಬಾಳ್ ಜಲಧಾರೆ ಸಾತೊಡ್ಡಿ ಜಲಪಾತದ ಹತ್ತಿರವೇ ಇದೆ. ಆದರೆ, ಸಾತೊಡ್ಡಿಯ ಕೀರ್ತಿ ಇದಕ್ಕಿಲ್ಲ. ಸಾತೊಡ್ಡಿಗೆ ಸಮೀಪ ಇರುವುದರಿಂದ, ಕುಮ್ಬಾಳ್ ಅನ್ನು `ಸಾತೊಡ್ಡಿಯ ಸೋದರಿ' ಎನ್ನಬಹುದು.ಸಾತೊಡ್ಡಿ ಜಲಪಾತಕ್ಕೆ ಹೋಗುವ ಮಾರ್ಗದಲ್ಲಿ 2 ಕಿ.ಮೀ ಮುನ್ನ ಎಡಕ್ಕೆ ತಿರುಗಿ, ಸುಮಾರು 4 ಕಿ.ಮೀ ಕಚ್ಚಾರಸ್ತೆಯಲ್ಲಿ ಪ್ರಯಾಣ ಮಾಡಿದರೆ ಈ ಜಲಪಾತ ಸಿಗುತ್ತದೆ. ಇದರ ಹತ್ತಿರ ಹೋಗುವುದು ದುಸ್ತರ.ಸುಮಾರು 100 ಅಡಿ ಎತ್ತರದಿಂದ ಧುಮ್ಮಿಕ್ಕುವ ಕುಮ್ಬಾಳ್ ಜಲಪಾತ ನೋಡುವುದೇ ಒಂದು ಸೊಗಸು. ಹಂತ ಹಂತವಾಗಿ ಧುಮುಕುವ ಈ ಜಲಸುಂದರಿ ಮಳೆಗಾಲದಲ್ಲಿ ತನ್ನ ಯೌವನವನ್ನು ನವೀಕರಿಸಿಕೊಳ್ಳುತ್ತಾಳೆ. ಮಳೆಗಾಲದಲ್ಲಿ ಜಲಪಾತದ ಸಮೀಪಕ್ಕೆ ಹೋಗುವುದು ತುಂಬಾ ಕಷ್ಟ. ಅದು ಅಪಾಯಕರ ಸಾಹಸ ಕೂಡ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.