ಬೆಂಗಳೂರು: ಹೆಬ್ಬಗೋಡಿ ಸಮೀಪದ ವಿದ್ಯಾನಗರ ಮುಖ್ಯರಸ್ತೆಯಲ್ಲಿರುವ ಸಾಮಿಲ್ಗೆ ಶನಿವಾರ ನಸುಕಿನ ವೇಳೆ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಹೋಗಿವೆ.

‘ವಿದ್ಯಾನಗರ ಮುಖ್ಯರಸ್ತೆಯಲ್ಲಿರುವ ‘ಶ್ರೀ ಮಂಜುನಾಥ ಟಿಂಬರ್ ಅಂಡ್ ಸಾಮಿಲ್ಸ್’ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಬೆಳಗಿನ ಜಾವ 3.30ಕ್ಕೆ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಬಂತು.

ಕೂಡಲೇ 14 ವಾಹನಗಳಲ್ಲಿ ಸ್ಥಳಕ್ಕೆ ತೆರಳಿದ 75 ಮಂದಿ ಸಿಬ್ಬಂದಿ, ಸತತ ಎಂಟೂವರೆ ತಾಸುಗಳ ಕಾಲ ಕಾರ್ಯಾಚರಣೆ ನಡೆಸಿದರು. ಅಂತಿಮವಾಗಿ ಶನಿವಾರ ಮಧ್ಯಾಹ್ನ 12.15ಕ್ಕೆ ಬೆಂಕಿ ನಂದಿಸುವ ಕಾರ್ಯ ಪೂರ್ಣಗೊಂಡಿತು’ ಎಂದು ಜಿಲ್ಲಾ ಅಗ್ನಿಶಾಮಕಾಧಿಕಾರಿ ಎಂ.ಬಿ.ಪುಟ್ಟಸುಬ್ಬಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಘಟನಾ ಸಂದರ್ಭದಲ್ಲಿ ಕಟ್ಟಡದಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಟ್ಟಡದಿಂದ ದಟ್ಟ ಹೊಗೆ ಬರುತ್ತಿದ್ದನ್ನು ಕಂಡ ಸೆಕ್ಯುರಿಟಿ ಗಾರ್ಡ್ ನರೇಂದ್ರ, ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ನಂತರ ಪೊಲೀಸರು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ಸಿಬ್ಬಂದಿ ಸ್ಥಳಕ್ಕೆ ತೆರಳುವ ವೇಳೆಗಾಗಲೇ ಬೆಂಕಿಯ ತೀವ್ರತೆ ಹೆಚ್ಚಾಗಿತ್ತು.

ಮುಂಜಾಗ್ರತಾ ಕ್ರಮವಾಗಿ ಅಕ್ಕಪಕ್ಕದ ಮನೆಗಳಲ್ಲಿದ್ದ ಅಡುಗೆ ಅನಿಲದ ಸಿಲಿಂಡರ್ಗಳನ್ನು ಬೇರೆಡೆ ವರ್ಗಾಯಿಸಲಾಯಿತು’ ಎಂದು ಮಾಹಿತಿ ನೀಡಿದರು.

‘ಕೆಲ ಸಿಬ್ಬಂದಿ ಮಳಿಗೆಯ ಬಾಗಿಲನ್ನು ಮೀಟಿ ಒಳನುಗ್ಗಿದರು. ಮತ್ತೆ ಕೆಲವರು ಪಕ್ಕದ ಕಟ್ಟಡಗಳನ್ನೇರಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದರು. ಮಳಿಗೆ ಒಳಭಾಗದಿಂದ ದಟ್ಟ ಹೊಗೆ ಬರುತ್ತಿದ್ದರಿಂದ ಕಾರ್ಯಾಚರಣೆ ಕಷ್ಟವಾಯಿತು.

ಅವಘಡದಲ್ಲಿ ಈ ಕಟ್ಟಡಕ್ಕೆ ಹೊಂದಿಕೊಂಡಂತೆ ಇದ್ದ ಎಲೆಕ್ಟ್ರಾನಿಕ್ ಉಪಕರಣಗಳ ಮಳಿಗೆ ಕೂಡ ಸುಟ್ಟು ಹೋಗಿದೆ’ ಎಂದರು.
‘ಹೊನ್ನೆ, ಮತ್ತಿ, ಬೀಟೆ ಸೇರಿದಂತೆ ವಿವಿಧ ಜಾತಿಯ ಮರದ ದಿಮ್ಮಿಗಳು ಬೆಂಕಿಗೆ ಆಹುತಿಯಾಗಿದ್ದು, ಸುಮಾರು ₨ 1 ಕೋಟಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ ಎಂದು ಸಾಮಿಲ್ ಮಾಲೀಕ ಮಂಜುನಾಥ್ ಹೇಳಿಕೆ ಕೊಟ್ಟಿದ್ದಾರೆ.

ಈ ಬಗ್ಗೆ ತಪಾಸಣೆ ನಡೆಸಿ ಮಾಹಿತಿ ಕಲೆ ಹಾಕಲಾಗುತ್ತಿದೆ. ಯಾವ ಕಾರಣದಿಂದ ಬೆಂಕಿ ಹೊತ್ತಿಕೊಂಡಿದೆ ಎಂಬುದು ನಿಖರವಾಗಿ ತಿಳಿದಿಲ್ಲ’ ಎಂದು ಪುಟ್ಟಸುಬ್ಬಪ್ಪ ಮಾಹಿತಿ ನೀಡಿದರು.

ತಪ್ಪಿದ ಭಾರೀ ಅನಾಹುತ
ಸಾಮಿಲ್ ಕಟ್ಟಡಕ್ಕೆ ಹೊಂದಿಕೊಂಡಿದ್ದ ಆದರ್ಶ ವರ್ಕ್ ಶಾಫ್ ಕೂಡ ಅವಘಡದಲ್ಲಿ ಸುಟ್ಟು ಹೋಗಿದೆ. ಈ ವರ್ಕ್ಶಾಪ್ನ ಮೇಲಿನ ಎರಡು ಮಹಡಿಗಳಲ್ಲಿ ನಾಲ್ಕು ಕುಟುಂಬಗಳು ವಾಸವಾಗಿವೆ.

ಬೆಂಕಿಯ ಶಾಖದಿಂದ ಎಚ್ಚರಗೊಂಡ ಆ ಕುಟುಂಬಗಳ ಒಟ್ಟು 20 ಮಂದಿ ಸದಸ್ಯರು, ತಕ್ಷಣ ಕೆಳಗಿಳಿದು ಬಂದು ತಮ್ಮನ್ನು ರಕ್ಷಿಸಿಕೊಂಡಿದ್ದಾರೆ. ನಂತರ ಬೆಂಕಿಯ ಜ್ವಾಲೆ ಅವರ ಮನೆಗಳಿಗೂ ವ್ಯಾಪಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.