ಸೋಮವಾರ, ಜನವರಿ 27, 2020
25 °C
ನಗರ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲು ಅಭಿಯಾನ

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜಿಸಿದವರಿಗೆ ಹಾರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿ­ಸಲು ಮುಂದಾಗಿರುವ ನಗರದ ಖಾಸಗಿ ಎಫ್‌.ಎಂ ವಾಹಿನಿ ಹಾಗೂ ಸ್ವಯಂ­ಸೇವಕರ ತಂಡ, ಸಾರ್ವಜನಿಕ ಸ್ಥಳ­ಗಳಲ್ಲಿ ಮೂತ್ರ ವಿಸರ್ಜನೆ ಮಾಡಿದ­ವರಿಗೆ ಪ್ಲಾಸ್ಟಿಕ್‌ ಹೂವಿನ ಹಾರ ಹಾಕಿ, ಆ ಚಿತ್ರವನ್ನು ಸಾಮಾಜಿಕ ಜಾಲತಾಣ­ದಲ್ಲಿ ಪ್ರಕಟಿಸುವ ಅಭಿಯಾನ ಹಮ್ಮಿಕೊಂಡಿದೆ.ಎಂಟು ಮಂದಿ ಸ್ವಯಂಸೇವಕರು ಒಂದು ವಾಹನದಲ್ಲಿ ನಗರದ ರಸ್ತೆ­ಗಳಲ್ಲಿ ತಿರುಗಾಟ ನಡೆಸುತ್ತಾರೆ. ರಸ್ತೆ ಬದಿ, ವಾಹನ ನಿಲುಗಡೆ ಪ್ರದೇಶ ಸೇರಿ­ದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತ­ ವಿಸರ್ಜನೆ ಮಾಡುವ ವ್ಯಕ್ತಿಗಳನ್ನು ಕಂಡ ಕೂಡಲೇ ವಾಹನ ನಿಲ್ಲಿಸಿ ಬಂದು ಅವರಿಗೆ ಪ್ಲಾಸ್ಟಿಕ್ ಹೂವಿನ ಹಾರ ಹಾಕುತ್ತಾರೆ. ಈ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸು­ತ್ತಾರೆ.‘ಡಿ.1ರಿಂದ ಈ ಅಭಿಯಾನ ಆರಂಭಿಸಲಾಗಿದೆ. ಜನವರಿ ಮೊದಲ ವಾರದವರೆಗೆ ಅಭಿಯಾನ ನಡೆಯ­ಲಿದೆ. ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯದ ಮಹತ್ವದ ಬಗ್ಗೆ ಅರಿವು ಮೂಡಿಸಲು ಈ ಅಭಿಯಾನ ನಡೆಸ­ಲಾಗುತ್ತಿದೆ’ ಎಂದು ತಂಡದ ಯಶವಂತ್‌ ರಾಜ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)