ಶುಕ್ರವಾರ, ಮೇ 14, 2021
29 °C

ಸಾಲ ಬಾಧೆ: ಮೂವರ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು: ಹೋಟೆಲ್ ವ್ಯಾಪಾರದಲ್ಲಿ ನಷ್ಟ, ಸಾಲ ಬಾಧೆಯಿಂದ ಬೇಸತ್ತು ದಂಪತಿ ಹಾಗೂ ಮಗ ಸೇರಿದಂತೆ ಮೂವರು ನೇಣಿಗೆ ಶರಣಾಗಿರುವ ಘಟನೆ ಪಟ್ಟಣದ ಎಚ್.ಕೆ.ವೀರಣ್ಣಗೌಡ ನಗರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಪಟ್ಟಣದ ಎಳೆನೀರು ಮಾರುಕಟ್ಟೆ ಬಳಿಯ ನಿವೃತ್ತ ಶಿಕ್ಷಕ ವಿ.ಸಿ.ರಾಮಣ್ಣ ಅವರ ಮನೆಯ ಮೇಲಂತಸ್ತಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಲಕ್ಷ್ಮಣ್ (60), ಲಲಿತಮ್ಮ (55), ಶರತ್ (40) ಮೃತಪಟ್ಟವರು. ಮೂರು ದಿನಗಳ ಹಿಂದೆ ಇವರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.ಲಕ್ಷ್ಮಣ್ ಹಾಗೂ ಲಲಿತಮ್ಮ ಬೆಡ್‌ರೂಂನ ಫ್ಯಾನಿಗೆ, ಶರತ್ ಮನೆಯ ಹಾಲ್‌ನ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ. ಭಾನುವಾರ ಬೆಳಿಗ್ಗೆ ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ, ಸ್ಥಳೀಯರು ಪರಿಶೀಲಿಸಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.ಬೆಂಗಳೂರು ಮೂಲದ ಇವರು ಆರು ವರ್ಷಗಳಿಂದ ಪಟ್ಟಣದಲ್ಲಿ ಹೋಟೆಲ್ ಹಾಗೂ ಬೇಕರಿ ನಡೆಸುತ್ತಿದ್ದರು. ವ್ಯಾಪಾರದಲ್ಲಿ ನಷ್ಟಗೊಂಡು 5 ಲಕ್ಷ ರೂಪಾಯಿಗೂ ಹೆಚ್ಚು ಸಾಲ ಇತ್ತು ಎನ್ನಲಾಗಿದೆ.ಉಪವಿಭಾಗಾಧಿಕಾರಿ ಕೆ.ರಂಗಪ್ಪ ಸ್ಥಳಕ್ಕೆ ಭೇಟಿ ನೀಡಿ ಲಕ್ಷ್ಮಣ್-ಲಲಿತಮ್ಮ ದಂಪತಿ ಕೊನೆ ಪುತ್ರ ಸೀತರಾಮುಗೆ ಸಾಂತ್ವನ ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.