ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಿ: ನರಸಿಂಹನ್

7

ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಿ: ನರಸಿಂಹನ್

Published:
Updated:

ನಾಪೋಕ್ಲು: ಸಾವಯವ ಕೃಷಿಯತ್ತ ಒಲವು ಮೂಡಿಸಿಕೊಂಡರೆ ವಿಷಯುಕ್ತವಾದ ಆಹಾರದಿಂದ      ಮುಕ್ತಿ ಹೊಂದಲು ಸಾಧ್ಯ  ಎಂದು ವಿರಾಜಪೇಟೆಯ ವೈದ್ಯ ಡಾ. ಎಸ್.ವಿ. ನರಸಿಂಹನ್    ಹೇಳಿದರು.ಐಕೊಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರ್ನಾಡು ಪದವಿಪೂರ್ವ ಕಾಲೇಜಿನ               ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆಯುತ್ತಿರುವ ವಿಶೇಷ ವಾರ್ಷಿಕ  ಶಿಬಿರದಲ್ಲಿ ಸಾವಯವ ಕೃಷಿಯ ಮಹತ್ವ ಎಂಬ ವಿಷಯದ ಕುರಿತು ಮಾತನಾಡಿದರು. ರೈತರು ಸ್ವಾವಲಂಬಿಗಳಾಗಿ ಸಾವಯವ ಕೃಷಿಯಲ್ಲಿ  ಆಸಕ್ತಿ ಹೊಂದುವುದಲ್ಲದೆ ರೈತನೇ ನಿಜವಾದ ಕೃಷಿ ವಿಜ್ಞಾನಿಯಾಗಬೇಕು ಎಂದರು.ಐಕೊಳ ಗ್ರಾಮದ ಕಾಫಿ ಬೆಳೆಗಾರ ಎಂ. ಎಂ. ಅಪ್ಪಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾಫಿ ಬೆಳೆಗಾರ ಎಂ.ಜಿ. ಶಿವಕುಮಾರ್, ಮೂರ್ನಾಡು ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಕೆ. ಮಂದಣ್ಣ, ಎನ್. ಎಸ್ ಎಸ್. ಕಾರ್ಯಕ್ರಮಾಧಿಕಾರಿ ಪಿ.ಎಂ ದೇವಕ್ಕಿ ಉಪಸ್ಥಿತರಿದ್ದರು. ಶಿಬಿರಾರ್ಥಿ ನವೀನ್ ಕುಮಾರ್ ಸ್ವಾಗತಿಸಿದರು. ಸಿಂಧು ವಂದಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry