ಸಾವಿರಾರು ಮಕ್ಕಳು ಪೋಲಿಯೊ ಲಸಿಕೆ ವಂಚಿತರು
ಇಸ್ಲಾಮಾಬಾದ್ (ಪಿಟಿಐ): ಪೋಲಿಯೊ ಲಸಿಕಾ ಆಂದೋಲನವನ್ನು ತಾಲಿಬಾನ್ ನಿಷೇಧಿಸಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಬುಡಕಟ್ಟು ಪ್ರದೇಶವಾದ ಉತ್ತರ ವಾಜಿರಿಸ್ತಾನದ 16 ಸಾವಿರ ಮಕ್ಕಳು ಲಸಿಕೆಯಿಂದ ವಂಚಿತರಾಗಲಿದ್ದಾರೆ.
ಅಮೆರಿಕ ಡ್ರೋಣ್ ದಾಳಿ ನ್ಲ್ಲಿಲಿಸುವವರೆಗೂ ಲಸಿಕಾ ಆಂದೋಲನವನ್ನು ನಿಷೇಧಿಸುವುದಾಗಿ ಉಗ್ರಗಾಮಿ ನಾಯಕರ ಮಂಡಳಿ ಘೋಷಿಸಿದೆ.
ನಿಷೇಧದ ಬೆನ್ನಲ್ಲೇ ಬುಡಕಟ್ಟು ಪ್ರದೇಶಗಳಾದ ಖೈಬರ್, ಬಜೌರ್, ಮೊಹಮಂದ್ ಹಾಗೂ ಕುರ್ರಂನಲ್ಲಿ ಸೋಮವಾರದಿಂದ ಲಸಿಕಾ ಆಂದೋಲನ ಪ್ರಾರಂಭಗೊಂಡಿದ್ದು, ಉಗ್ರರ ನಿಷೇಧದಿಂದಾಗಿ ಉತ್ತರ ವಾಜಿರಿಸ್ತಾನದಲ್ಲಿ ಮಾತ್ರ ಲಸಿಕಾ ಆಂದೋಲನ ಕೈಬಿಟ್ಟಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬುಡಕಟ್ಟು ಪ್ರದೇಶಗಳಲ್ಲೇ ಪೋಲಿಯೊ ಪೀಡಿತರು ಹೆಚ್ಚಿದ್ದು, ಈ ಆಂದೋಲನದಲ್ಲಿ ಸುಮಾರು 7.77 ಲಕ್ಷ ಮಕ್ಕಳಿಗೆ ಪೋಲಿಯೊ ಲಸಿಕೆ ನೀಡುವ ಗುರಿ ಇತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.