ಶನಿವಾರ, ಮೇ 15, 2021
24 °C
ಪ್ರಜಾವಾಣಿ ವಾರ್ತೆ

ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ತೆರೆ

ನಿಡಗುಂದಿ: (ಆಲಮಟ್ಟಿ): ನಿಡಗುಂದಿಯಲ್ಲಿ ಬುಧವಾರ ಜರುಗಿದ ಬಸವನಬಾಗೇವಾಡಿ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬುಧವಾರ ರಾತ್ರಿ ಸಂಭ್ರಮದ ತೆರೆ ಬಿತ್ತು. ರಾತ್ರಿ 8.30ರಲ್ಲಿ ಆರಂಭಗೊಂಡ ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಬಹುತೇಕ ಅತಿಥಿಗಳು ಗೈರು ಹಾಜರಾಗಿದ್ದರು. ತಹಶೀಲ್ದಾರ್ ಅಪರ್ಣಾ ಪಾವಟೆ ಮಾತ್ರ ಹಾಜರಿದ್ದರು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ  ಸಿದ್ದಣ್ಣ ನಾಗಠಾಣ, ಮ.ಚ. ವಾರದ, ಲ.ರು.ಗೊಳಸಂಗಿ, ಎಸ್.ಕೆ. ಚಿಕರೆಡ್ಡಿ, ಜಿ.ಸಿ. ಮುತ್ತಲದಿನ್ನಿ, ಸರಸ್ವತಿ ಚಿಮ್ಮಲಗಿ, ಸಾವಿತ್ರಿ ಕಲ್ಯಾಣಶೆಟ್ಟಿ, ಸಹದೇವ ಗುಡದಿನ್ನಿ, ಈರಮ್ಮ ವಾರದ, ಸಂಗಮೇಶ ಬಾಗಲಕೋಟ, ಬಸವರಾಜ ಶೆಟ್ಟರ, ಅರವಿಂದ ಕುಲಕರ್ಣಿ, ಗುರುಪಾದಪ್ಪ ದೇವರಗುಡಿ, ದುಂಡಪ್ಪ ಪಟ್ಟಣಶೆಟ್ಟಿ, ಅಪ್ಪಯ್ಯ ಮಠಪತಿ, ರಾಜಶೇಖರ ಸಾಸಟ್ಟಿ, ಶಿವಾನಂದ ಮುರನಾಳ, ಗೌರೀಶ್ವರ ಯುವಕ ಮಂಡಳದ ಅಧ್ಯಕ್ಷ ಬಸವರಾಜ ಸಾಲಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಚ್. ನಾಗೂರ ಅವರನ್ನು ಸನ್ಮಾನಿಸಲಾಯಿತು.ಸಮ್ಮೇಳನದ ಯಶಸ್ವಿಗೆ ಶ್ರಮಿಸಿದ ಶಿಕ್ಷಕ ಸಂಘಟನೆಯ ಮುಖಂಡ ಬಿ.ಟಿ. ಗೌಡರ, ಚಂದ್ರಶೇಖರ ನುಗ್ಲಿ, ಸಲೀಂ ದಡೇದ, ಎಸ್.ಬಿ. ತಿಮ್ಮೋಪುರ, ಆನಂದಕುಮಾರ ಹೂಗಾರ, ಆರ್.ಕೆ. ಸುರಪುರ, ಎಂ.ಎಂ. ಮುಲ್ಲಾ, ಆರ್.ಎಸ್. ಕಮತ, ಆರ್.ಎ. ನದಾಫ, ಎಂ.ಆರ್. ಮಕಾನದಾರ, ಸಿ. ಆರ್. ಬಿರಾದಾರ, ಪ್ರಕಾಶ ಕೂಚಬಾಳ, ವೈ.ಎಸ್. ಗಂಗಶೆಟ್ಟಿ, ಎಸ್.ಎಸ್. ಹುಬ್ಬಳ್ಳಿ, ಭಾಷಾ ಮನಗೂಳಿ, ಶ್ರಿಕಾಂತ ಕುಂಬಾರ, ಆರ್.ಜಿ. ಬುಲಾತಿ, ಬಿ.ಡಿ. ಚಲವಾದಿ, ಎಂ.ಜಿ. ಪೂಜಾರಿ ಮೊದಲಾದವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ರುದ್ರಮುನಿ ಸ್ವಾಮೀಜಿ, ಜಿಪಂ ಸದಸ್ಯ ಶಿವಾನಂದ ಅವಟಿ, ಜಿ.ವಿ.ವಿ.ಎಸ್. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಿದ್ದಣ್ಣ ನಾಗಠಾಣ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಬಮ್ಮನಹಳ್ಳಿ, ಮಹಾಂತೇಶ ಝಳಕಿ, ಲಲಿತಕುಮಾರ ಹಗರಗೊಂಡ, ರಮೇಶ ಪೂಜಾರಿ ಮೊದಲಾದವರು ಇದ್ದರು.ಬುಧವಾರ ಮಧ್ಯರಾತ್ರಿ 12 ಗಂಟೆಯವರೆಗೂ ವಿವಿಧ ಕಲಾ ತಂಡಗಳು, ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಕನ್ನಡ ಪರ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.ಜಿಪಂ ಸದಸ್ಯ ಶಿವಾನಂದ ಅವಟಿ ರಾಷ್ಟ್ರಧ್ವಜ ಹಾಗೂ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಬಮ್ಮನಹಳ್ಳಿ ಪರಿಷತ್‌ನ ಧ್ವಜಾರೋಹಣ ನೆರವೇರಿಸಿದರು.ನಜೀರ ಗುಳೇದ ಅವರ ನಾಣ್ಯ ಸಂಗ್ರಹಣೆ ಮತ್ತು ನಿಡಗುಂದಿ ಪಟ್ಟಣಕ್ಕೆ ಸಂಬಂಧಿಸಿದ ಇಲ್ಲಿಯವರೆಗಿನ ವಿವಿಧ ಪತ್ರಿಕೆಗಳಲ್ಲಿ ಬಂದ ವರದಿಗಳ ಪ್ರದರ್ಶನವೂ ಜರುಗಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.