ಶನಿವಾರ, ಫೆಬ್ರವರಿ 27, 2021
21 °C

ಸಿಇಟಿ ರ‍್ಯಾಂಕಿಂಗ್‌: ಬೆಂಗಳೂರಿಗರೇ ಮುಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಇಟಿ ರ‍್ಯಾಂಕಿಂಗ್‌: ಬೆಂಗಳೂರಿಗರೇ ಮುಂದು

ಬೆಂಗಳೂರು: ಈ ಬಾರಿಯ ವೃತ್ತಿ ಶಿಕ್ಷಣ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಬೆಂಗಳೂರಿಗರೇ ಮುಂದಿದ್ದಾರೆ. ಮೆಡಿಕಲ್‌, ಎಂಜಿನಿಯರಿಂಗ್‌, ಆರ್ಕಿಟೆಕ್ಚರ್‌ ವಿಭಾಗಗಳಲ್ಲಿನ ಮೊದಲ ಹತ್ತು ರ‍್ಯಾಂಕ್‌ ಪಡೆದವರ ಪೈಕಿ ಬೆಂಗಳೂರಿಗರ ಸಂಖ್ಯೆಯೇ ಹೆಚ್ಚಾಗಿದೆ.

ಮೆಡಿಕಲ್‌, ಎಂಜಿನಿಯರಿಂಗ್‌, ಆರ್ಕಿಟೆಕ್ಚರ್‌ ವಿಭಾಗಗಳಲ್ಲಿ ಮೊದಲ ಹತ್ತು ರ‍್ಯಾಂಕ್‌ ಪಡೆದ ಒಟ್ಟು 30 ಮಂದಿಯ ಪೈಕಿ 19 ಮಂದಿ ಬೆಂಗಳೂರಿನವರೇ ಆಗಿದ್ದಾರೆ.

ಮೆಡಿಕಲ್‌ ವಿಭಾಗದಲ್ಲಿ ಮೊದಲ ರ‍್ಯಾಂಕ್‌ ಪಡೆದ ಆರ್ಮಿ ಪಬ್ಲಿಕ್‌ ಸ್ಕೂಲ್‌ನ ಪ್ರಿಯಾ ನರವಾಲ್‌, ಆರ್ಕಿಟೆಕ್ಚರ್‌ ವಿಭಾಗದಲ್ಲಿ ಮೊದಲ ರ‍್ಯಾಂಕ್‌ ಪಡೆದ ದೀಕ್ಷಾ ಸಿಎಫ್‌ಎಲ್‌ ಪಿಯು ಕಾಲೇಜಿನ ಶರಣ್‌ ಜಿ.ಎಸ್‌ ಮತ್ತು ಎಂಜಿನಿಯರಿಂಗ್‌ ವಿಭಾಗದಲ್ಲಿ ಎರಡನೇ ರ‍್ಯಾಂಕ್‌ ಪಡೆದ ಸನ್‌ರೈಸ್‌ ಇಂಟರ್‌ನ್ಯಾಷನಲ್‌ ರೆಸಿಡೆನ್ಸಿಯಲ್‌ ಸ್ಕೂಲ್‌ನ ಕೊಮ್ಮೂರು ಅಲೇಖ್ಯಾ ರೆಡ್ಡಿ ಸೇರಿದಂತೆ ಹೆಚ್ಚಿನವರು ಬೆಂಗಳೂರಿಗರಾಗಿದ್ದಾರೆ.

ಬೆಂಗಳೂರಿನ ವಿವಿಎಸ್‌ ಸರ್ದಾರ್ ಪಟೇಲ್‌ ಕಾಲೇಜಿನ ವಿದ್ಯಾರ್ಥಿಗಳು ಈ ಮೂರೂ ವಿಭಾಗಗಳ ರ‍್ಯಾಂಕ್‌ ಪಟ್ಟಿಯಲ್ಲಿಯೂ ತಲಾ ಒಂದೊಂದು ಸ್ಥಾನ ಪಡೆದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.