ಶುಕ್ರವಾರ, ಜನವರಿ 24, 2020
21 °C

ಸಿಎಲ್‌ಪಿ ನಾಯಕನಾಗಿ ಲಾಲ್‌ ಥಾನ್ ಹವ್ಲಾ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಜವಾಲ್ (ಪಿಟಿಐ): ನಿರೀಕ್ಷೆಯಂತೆ ಲಾಲ್‌ ಥಾನ್ ಹವ್ಲಾ ಅವರನ್ನು ಮಿಜೋರಾಂ ಕಾಂಗ್ರೆಸ್‌ ಶಾಸಕಾಂಗ ಪಕ್ಷ (ಸಿಎಲ್‌ಪಿ) ಅಧಿಕೃತವಾಗಿ ನಾಯಕರನ್ನಾಗಿ ಬುಧವಾರ ಆಯ್ಕೆ ಮಾಡಿದೆ. ಈ ಮೂಲಕ ಲಾಲ್‌ ಥಾನ್ ಹವ್ಲಾ ಅವರು ಐದನೇ ಬಾರಿಗೆ ಮುಖ್ಯಮಂತ್ರಿ ಗದ್ದುಗೆ ಏರುವ ದಾರಿ ಸುಗಮಗೊಂಡಿದೆ.

ಇಲ್ಲಿನ ಕಾಂಗ್ರೆಸ್‌ ಭವನದಲ್ಲಿ ನಡೆದ ಸಭೆಯಲ್ಲಿ ಲಾಲ್‌ ಥಾನ್ ಹವ್ಲಾ ಅವರು ಸಿಪಿಎಲ್‌ ನಾಯಕರಾಗಿ ಒಮ್ಮತಾಭಿಪ್ರಾಯದಿಂದ ಆಯ್ಕೆಯಾಗಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಲಾಲ್ರಿನ್ಮಾವಿಯಾ ರಾಟ್ಲೆ ತಿಳಿಸಿದ್ದಾರೆ.

ಇದೇ ವೇಳೆ ಮಿಜೋರಾಂ ಪ್ರದೇಶ ಕಾಂಗ್ರೆಸ್‌ ಉಪಾಧ್ಯಕ್ಷರೂ ಆಗಿರುವ ಗೃಹ ಸಚಿವ ಲಾಲ್ಜಿರ್‌ಲೈನಾ ಅವರನ್ನು ಉಪನಾಯಕರನ್ನಾಗಿ ಹಾಗೂ ಕ್ರೀಡಾ ಸಚಿವ ಜೊಡಿಂತ್ಲುಆಂಗಾ ಅವರನ್ನು ಖಜಾಂಚಿಯಾಗಿಯೂ ಸಿಎಲ್‌ಪಿ ಆಯ್ಕೆ ಮಾಡಿದೆ.

ಮತ್ತೊಂದೆಡೆ ಲಾಲ್‌ ಥಾನ್ ಹವ್ಲಾ ನೇತೃತ್ವದ ಹೊಸ ಸರ್ಕಾರದ ಪ್ರಮಾಣ ವಚನ ಕಾರ್ಯಕ್ರಮ ಇದೇ 14 ರಂದು (ಶನಿವಾರ) ಬೆಳಿಗ್ಗೆ 11 ಗಂಟೆಗೆ ರಾಜಭವನದಲ್ಲಿ ನಡೆಯುವ ಸಾಧ್ಯಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)